ನಾಳೆಯಿಂದ 4 ದಿನ ಜ್ಯುವೆಲ್ಲರಿ ಶಾಪ್‌ಗಳು ಬಂದ್‌..! ಚಿನ್ನ ಬೇಕಂದ್ರೆ ಇಂದೇ ತಗೊಳಿ

Kannadaprabha News   | Asianet News
Published : Jul 04, 2020, 07:58 AM IST
ನಾಳೆಯಿಂದ 4 ದಿನ ಜ್ಯುವೆಲ್ಲರಿ ಶಾಪ್‌ಗಳು ಬಂದ್‌..! ಚಿನ್ನ ಬೇಕಂದ್ರೆ ಇಂದೇ ತಗೊಳಿ

ಸಾರಾಂಶ

ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.5ರಿಂದ 9ರ ವರೆಗೆ ಜಿಲ್ಲೆಯಲ್ಲಿ ಎಲ್ಲ ಚಿನ್ನಾಭರಣ ಅಂಗಡಿಗಳು ಹಾಗೂ ಕಾರ್ಪೊರೇಟ್‌ ಮಳಿಗೆಗಳು ವ್ಯವಹಾರ ಬಂದ್‌ ಮಾಡಲು ತೀರ್ಮಾನಿಸಿವೆ.

ಮಂಗಳೂರು(ಜು.04): ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜು.5ರಿಂದ 9ರ ವರೆಗೆ ಜಿಲ್ಲೆಯಲ್ಲಿ ಎಲ್ಲ ಚಿನ್ನಾಭರಣ ಅಂಗಡಿಗಳು ಹಾಗೂ ಕಾರ್ಪೊರೇಟ್‌ ಮಳಿಗೆಗಳು ವ್ಯವಹಾರ ಬಂದ್‌ ಮಾಡಲು ತೀರ್ಮಾನಿಸಿವೆ.

ಲಾಕ್‌ಡೌನ್ ಮುಗಿದ ನಂತರ ಎಲ್ಲ ಚಿನ್ನದ ಶಾಪ್‌ಗಳಲ್ಲಿಯೂ ಆಭರಣಗಳ ಮಾರಾಟ ನಡೆಯುತ್ತಿತ್ತು. ಕೊರೋನಾದಿಂದ ಜನ ಭಯಪಟ್ಟು ಹೊರಗೆ ಬರಲು ಹಿಂದೇಟು ಹಾಕಿದ್ದರೂ, ಮನೆಗೇ ಆಭರಣ ತಲುಪಿಸುವ ವ್ಯವಸ್ಥೆಯೂ ಆಗಿತ್ತು.

5 ಕೊರೋನಾ ಕೇಸ್‌ ಬಂದಾಗ್ಲೇ ಎಚ್ಚೆತ್ತ ಜನ: ಗ್ರಾಮ ಸಂಪೂರ್ಣ ಲಾಕ್‌ಡೌನ್ ಮಾಡಿದ ಗ್ರಾಮಸ್ಥರು

ಆದರೆ ಈಗ ಕೊರೋನಾ ಪ್ರಕರಣಗಳು ಇನ್ನಷ್ಟು ಹೆಚ್ಚುತ್ತಿರುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಲಾಗಿದೆ. ಈಗಾಗಲೇ ಆಭರಣಗಳನ್ನು ಕಾದಿರಿಸಿರುವ ಗ್ರಾಹಕರು ಅತ್ಯವಶ್ಯಕವಿದ್ದರೆ ಮೊದಲೇ ಬಂದು ಪಡೆದುಕೊಳ್ಳುವಂತೆ ದ.ಕ.ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘದ ಪ್ರಕಟಣೆ ತಿಳಿಸಿದೆ.

50 ಸಾವಿರ ರುಪಾಯಿ ದಾಟಿದ ಚಿನ್ನದ ಬೆಲೆ!

ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಳಿತ ಕಂಡು ಬಂದಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಮತ್ತು ರುಪಾಯಿ ಮೌಲ್ಯ ಕುಸಿತ ಚಿನ್ನದ ದರ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

PREV
click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ