
ಮೈಸೂರು(ಜೂ.20): ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲು ವಿಶೇಷ ಉಡುಗೊರೆ ಸಿದ್ಧಗೊಂಡಿದೆ. ಇಲ್ಲಿನ ಆಭರಣದ ವ್ಯಾಪಾರಿಗಳಿಂದ ಈ ವಿಶೇಷ ಉಡುಗೊರೆಯನ್ನು ಸಂಸದ ಪ್ರತಾಪ್ ಸಿಂಹ ಮೂಲಕ ಮೋದಿಗೆ ವಿಶೇಷ ಗಿಫ್‌್ಟಕೊಡಲು ಸಿದ್ಧತೆ ನಡೆದಿದೆ.
ಮೈಸೂರಿನ ನವರತ್ನ ಜ್ಯುವೆಲರ್ಸ್ ವತಿಯಿಂದ ಥೈಲ್ಯಾಂಡ್‌ನಲ್ಲಿ ಮಾಡಿಸಲಾಗಿರುವ ಈ ವಿಶೇಷ ನೆನಪಿನ ಕಾಣಿಕೆಯಲ್ಲಿ ಬಂಗಾರದ ಅಕ್ಷರಗಳಿಂದ ಮಾಡಿಸಲಾಗಿರುವ ಕೆತ್ತನೆ ಇದೆ. ಮೈಸೂರು ಅರಮನೆ, ಮೋದಿ ಯೋಗದ ಭಂಗಿ ಹಾಗೂ ಪ್ರಧಾನಿ ಮೋದಿ ಭಾವಚಿತ್ರಗಳನ್ನೊಳಗೊಂಡ ಕೆತ್ತನೆ ಇದೆ. ಬಂಗಾರ ಲೇಪಿತ ಕೆತ್ತನೆಯ ಚಿತ್ರಪಟದಲ್ಲಿ ಯೋಗದ ಶ್ಲೋಕಗಳ ಅಳವಡಿಕೆ.
ಯೋಗ ದಿನದಂದು ಅರಮನೆ ನಗರಿಗೆ ಪ್ರಧಾನಿ ಮೋದಿ, ಸ್ವರ್ಣಾಕ್ಷರಗಳ ವಿಶೇಷ ಗಿಫ್ಟ್ ರೆಡಿ!
ಮೈಸೂರಿಗರ ಪರವಾಗಿ ಮೈಸೂರನ್ನ ಆಯ್ಕೆ ಮಾಡಿಕೊಂಡಿದ್ದಕ್ಕೆ ಚಿನ್ನದ ಅಕ್ಷರಗಳಲ್ಲಿ ಕೃತಜ್ಞತೆ ಸಲ್ಲಿಸಲಾಗುವುದು. ಜೂ.21ರಂದು ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಾಗುವುದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.