ಆಮಂತ್ರಣ ಪತ್ರಿಕೇಲಿ ಹೆಸರು ಹಾಕಿದ್ದಕ್ಕೆ ಡಿಸಿ ವಿರುದ್ಧ ಸಿದ್ದು ಕಿಡಿ

By Kannadaprabha News  |  First Published Jun 20, 2022, 2:00 AM IST

*   ಮಾಹಿತಿ ನೀಡದೆ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿದ ಬಾಗಲಕೋಟೆ ಜಿಲ್ಲಾ​ಧಿಕಾರಿ 
*  ಎರಡು ದಿನಗಳಿಂದ ಸ್ವಕ್ಷೇತ್ರ ಬಾದಾಮಿಯ ಪ್ರವಾಸದಲ್ಲಿರುವ ಸಿದ್ದರಾಮಯ್ಯ 
*  ಜಿಲ್ಲಾಧಿ​ಕಾರಿಗಳು ಕ್ಷೇತ್ರದ ಪ್ರತಿನಿ​ಧಿಯನ್ನು ಸಂಪರ್ಕಿಸಿ ಅನುಮತಿ ಪಡೆಯಬೇಕು


ಬಾಗಲಕೋಟೆ(ಜೂ.20): ಕೇಂದ್ರ ಸಚಿವರು ಪಾಲ್ಗೊಳ್ಳುವ ಬಾದಾಮಿಯ ಪಟ್ಟದಕಲ್ಲಿನ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಮಾಹಿತಿ ನೀಡದೆ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿರುವ ಬಾಗಲಕೋಟೆ ಜಿಲ್ಲಾ​ಧಿಕಾರಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಿನ್ನೆ(ಭಾನುವಾರ) ನಡೆದಿದೆ.

ಕಳೆದ ಎರಡು ದಿನಗಳಿಂದ ಸ್ವಕ್ಷೇತ್ರ ಬಾದಾಮಿಯ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಜೂ.21ರಂದು ಪಟ್ಟದಕಲ್ಲಿನಲ್ಲಿ ನಡೆಯುವ ಯೋಗ ದಿನಾಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮನ್ನು ಕೇಳದೆ ಹೆಸರು ಹಾಕಿದ ಜಿಲ್ಲಾ​ಧಿಕಾರಿ ಸುನಿಲ್‌ ಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

Tap to resize

Latest Videos

undefined

ಭ್ರಷ್ಟ ವ್ಯವಸ್ಥೆ ತೊಲಗಿಸಿದ ಕೀರ್ತಿ ಬಿಜೆಪಿಯದ್ದು: ಸಚಿವ ಕಾರಜೋಳ

ದೂರವಾಣಿ ಮೂಲಕ ಜಿಲ್ಲಾ​ಧಿಕಾರಿಗಳನ್ನು ಸಂಪರ್ಕಿಸಿದ ಸಿದ್ದರಾಮಯ್ಯ, ಶಿಷ್ಟಾಚಾರ ಮರೆತಿರುವ ನೀವು ಕೇಂದ್ರದ ಸಚಿವರು ಬರುತ್ತಿದ್ದಾರೆಂಬ ಕಾರಣ ಮುಂದಿಟ್ಟುಕೊಂಡು ಶಾಸಕನಾಗಿರುವ ನನ್ನನ್ನು ಸಂಪರ್ಕಿಸದೆ ನನ್ನ ಹೆಸರು ಹಾಕಿದ್ದೀರಿ. ಇದರಿಂದ ಕ್ಷೇತ್ರದ ಜನತೆಗೆ ಯಾವ ಸಂದೇಶ ಹೋಗುತ್ತದೆ? ಜಿಲ್ಲಾಧಿ​ಕಾರಿಗಳು ಕ್ಷೇತ್ರದ ಪ್ರತಿನಿ​ಧಿಯನ್ನು ಸಂಪರ್ಕಿಸಿ ಅನುಮತಿ ಪಡೆಯಬೇಕು. ಆದರೆ, ನೀವು ಅದನ್ನು ಪಾಲಿಸಿಲ್ಲ ಎಂದರಲ್ಲದೆ, ಅ​ಧಿವೇಶನಕ್ಕೂ ಮುನ್ನ ಬಂದು ನನ್ನನ್ನು ಕಾಣಬೇಕು ಎಂದು ಎಚ್ಚರಿಸಿದರು.
 

click me!