ನಿರೀಕ್ಷೆಯಂತೆ ಸ್ವಪಷ್ಟ ಬಹುಮತದೊಂದಿಗೆ ಜೆಡಿಎಸ್‌ಗೆ ಭರ್ಜರಿ ವಿಜಯ

Kannadaprabha News   | Asianet News
Published : Nov 10, 2020, 11:38 AM IST
ನಿರೀಕ್ಷೆಯಂತೆ ಸ್ವಪಷ್ಟ ಬಹುಮತದೊಂದಿಗೆ  ಜೆಡಿಎಸ್‌ಗೆ ಭರ್ಜರಿ ವಿಜಯ

ಸಾರಾಂಶ

ನಿರೀಕ್ಷೆಯಂತೆ ಸ್ಪಷ್ಟ ಬಹುಮತದೊಂದಿಗೆ ದಳಪತಿಗಳು ಜಯಗಳಿಸಿದ್ದಾರೆ. ಈ ಮೂಲಕ ಅಧಿಕಾರ ತಮ್ಮದಾಗಿಸಿಕೊಂಡಿದ್ದಾರೆ. 

ಪಿರಿಯಾಪಟ್ಟಣ (ನ.10):  ಪಿರಿಯಾಪಟ್ಟಣ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಸ್ಪಷ್ಟ ಬಹುಮತ ಸದಸ್ಯರನ್ನು ಹೊಂದಿದ್ದ ಜೆಡಿಎಸ್‌ ಪಾಲಾಗಿದೆ. ಅಧ್ಯಕ್ಷರಾಗಿ ಮಂಜುನಾಥ್‌ಸಿಂಗ್‌ ಹಾಗೂ ಉಪಾಧ್ಯಕ್ಷರಾಗಿ ನಾಗರತ್ನ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಸಿಂಗ್‌ ಮತ್ತು ಕಾಂಗ್ರೆಸ್‌ ಸದಸ್ಯ ಅಬ್ದುಲ್ ಅರ್ಷದ್‌, ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನ ಮತ್ತು ಕಾಂಗ್ರೆಸ್‌ ಸದಸ್ಯೆ ಮಂಜುಳಾ ನಾಮಪತ್ರ ಸಲ್ಲಿಸಿದ್ದರು.

ಫಲಿತಾಂಶ ಕುತೂಹಲಕ್ಕೆ ತೆರೆ : ಮೊದಲ ಸ್ಥಾದಲ್ಲಿ ಕೈ ಪಡೆ ವಿಜಯ - 2ನೇ ಸ್ಥಾನದಲ್ಲಿJDS

ಚುನಾವಣೆಯಲ್ಲಿ 14 ಜೆಡಿಎಸ್‌, 8 ಕಾಂಗ್ರೆಸ್‌, ಓರ್ವ ಪಕ್ಷೇತರ ಸದಸ್ಯೆ ಸೇರಿದಂತೆ ಒಟ್ಟು 23 ಸದಸ್ಯರು ಹಾಗೂ ಶಾಸಕ ಕೆ. ಮಹದೇವ್ ಮತ ಚಲಾಯಿಸಿದರು, ಸಂಸದ ಪ್ರತಾಪ್‌ ಸಿಂಹ ಗೈರಾಗಿದ್ದರು.

ಜೆಡಿಎಸ್‌ನ ಮಂಜುನಾಥ್‌ ಸಿಂಗ್‌ ಮತ್ತು ನಾಗರತ್ನ ಕ್ರಮವಾಗಿ 16 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ಅಬ್ದುಲ… ಅರ್ಷದ್‌ ಮತ್ತು ಮಂಜುಳಾ ಕ್ರಮವಾಗಿ 8 ಮತ ಪಡೆದರು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್‌ ಶ್ವೇತಾ ಎನ್‌. ರವಿಂದ್ರ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚು ಮತ ಪಡೆದ ಮಂಜುನಾಥ್‌ ಸಿಂಗ್‌ ಹಾಗೂ ನಾಗರತ್ನ ಅವರ ಆಯ್ಕೆ ಘೋಷಿಸಿದರು

PREV
click me!

Recommended Stories

ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ
ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?