15ರಲ್ಲಿ 14 ಸ್ಥಾನ ಜೆಡಿಎಸ್‌ ಪಾಲು : ಭರ್ಜರಿ ಜಯಭೇರಿ

By Kannadaprabha News  |  First Published Nov 2, 2020, 1:35 PM IST

ಜೆಡಿಎಸ್ ಭಾರಿ ಗೆಲುವು ದಾಖಲಿಸಿ ಅದೃಷ್ಟ ಒಲಿಸಿಕೊಂಡಿದೆ. ಭರ್ಜರಿ ಜಯಭೇರಿ ದಾಖಲಿಸಿದೆ. 


ಚನ್ನರಾಯಪಟ್ಟಣ (ನ.02): ಪಟ್ಟಣದಲ್ಲಿನ ಟಿಎಪಿಸಿಎಂಸ್‌ನ ಒಟ್ಟು 14 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ 4 ಸ್ಥಾನಗಳಲ್ಲಿ ಜೆಡಿಎಸ್‌ ಬೆಂಬಲಿತರು ಗೆಲುವು ಸಾಧಿ​ಸಿದ್ದು, 14 ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಜೆಡಿಎಸ್‌ ಬೆಂಬಲಿತರು ನಿರ್ದೇಶಕ ಸ್ಥಾನ ಅಲಂಕರಿಸುವ ಮೂಲಕ ಶಾಸಕ ಸಿ.ಎನ್‌. ಬಾಲಕೃಷ್ಣರವರ ಸಹಕಾರಿ ನಿಲುವನ್ನು ಗಟ್ಟಿಗೊಳಿಸಿದೆ.

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2020-2025ನೇ ಸಾಲಿಗೆ ಶನಿವಾರ ನಡೆದ ಚುನಾವಣೆಯು ಪಟ್ಟಣದ ಗಣಪತಿ ಪೆಂಡಾಲಿನ ಎದುರಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ 9 ರಿಂದ 4 ರವರೆಗೆ ತೆರೆಯಲಾಗಿದ್ದ 4 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆಯಿತು. 4 ರ ನಂತರ ನಡೆದ ಮತ ಎಣಿಕೆಯಲ್ಲಿ ಸ್ಪರ್ಧೆಯಲ್ಲಿದ್ದ 15 ಅಭ್ಯರ್ಥಿಗಳ ಪೈಕಿ ಜೆಡಿಎಸ್‌ ಬೆಂಬಲಿತರು ನಾಲ್ವರು, ಮತ್ತು ಸ್ವತಂತ್ರವಾಗಿ ಸ​ರ್ಧಿಸಿದ್ದ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಲದ ನಿರ್ದೇಶಕ ಡಿ.ಎಲ್‌. ಮಂಜುನಾಥ್‌ ಆಯ್ಕೆಯಾಗಿದ್ದಾರೆ.

Latest Videos

undefined

ರಾಜ್ಯ ಸರ್ಕಾರದ ಆಡಳಿತ ವಿರೋಧಿಸಿ ರಮೇಶ್ ಬಿಜೆಪಿ ತೊರೆದು ಕೈ ಸೇರ್ಪಡೆ ...

ಮೂರು ರಾಜಕೀಯ ಪಕ್ಷದ ಬೆಂಬಲಿತರು ಚುನಾವಣೆ ಕಣದಲ್ಲಿದ್ದು, ಚುನಾವಣೆಗಾಗಿ ಕಣದಲ್ಲಿದ್ದ 15 ಮಂದಿ ಅಭ್ಯರ್ಥಿಗಳಿಗೆ ಇರುವ 1322 ಮತದಾರು ನಿರ್ಮಿಸಲಾಗಿದ್ದ 4 ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಇನ್ನೂ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್‌ ಚುನಾವಣೆಯಲ್ಲಿ ಒಟ್ಟಾರೆ ಮತದಾರರ ಪೈಕಿ ಶೇ.10 ರಷ್ಟುಮತ ಪಡೆಯುವಲ್ಲಿ ವಿಫಲವಾಗುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ತೀರಾ ಕಳಪೆ ಎಂಬುದನ್ನು ಸಾಬೀತುಗೊಳಿಸಿದೆ.

ಇನ್ನೂ 14 ನಿರ್ದೇಶಕರ ಆಯ್ಕೆಗಾಗಿ ನಡೆಯುವ ಪ್ರಕಿಯೆಯಲ್ಲಿ ಎ ಮತ್ತು ಬಿ ತರಗತಿಯಡಿ ಅಭ್ಯರ್ಥಿಗಳು ಆಯ್ಕೆಯಾಗಿ ಬರುತ್ತಾರೆ. ಎ ತರಗತಿಯಡಿ 6 ಮಂದಿ ತಮ್ಮ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೇರವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದಂತೆ ಬಿ ತರಗತಿಯಡಿ ಮಹಿಳಾ ಮೀಸಲಾತಿಯ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದು ಮಿಕ್ಕ 5 ಸ್ಥಾನಗಳಿಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ.

ಇದುವರೆಗೂ ಜೆಡಿಎಸ್‌ ಬೆಂಬಲಿತನಾಗಿ ಕಳೆದ 6 ಬಾರಿಯಿಂದ ಆಯ್ಕೆಯಾಗುತ್ತಿದ್ದ ಡಿ.ಎಲ್‌. ಮಂಜುನಾಥ್‌ರವರಿಗೆ ಪ್ರಸಕ್ತ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲ ನೀಡದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪ​ರ್ಧಿಸಿದ್ದ ಅವರನ್ನು ಮತದಾರ ಕೈಬಿಡದೇ ಆಯ್ಕೆ ಮಾಡಿದ್ದಾನೆ. ಈ ಮೂಲಕ ಜಿಲ್ಲೆಯ ಜೆಡಿಎಸ್‌ ನಾಯಕರಿಗೆ ಸ್ಪಷ್ಟಸಂದೇಶವನ್ನು ನೀಡಿದ್ದಾನೆ.

ಚುನಾವಣೆ ಎದುರಿಸಿ ಆಯ್ಕೆಯಾದವರು: ಸಿ.ಕೆ.ಗೋಪಾಲಕೃಷ್ಣ (ಪ.ಜಾತಿ-847), ಬಿ.ಕೆ.ಮನು (ಸಾಮಾನ್ಯ-914), ಡಿ.ಎಲ್‌.ಮಂಜುನಾಥ್‌(ಸಾಮಾನ್ಯ-815), ಬಿ.ವಿ. ಮುನಿಸ್ವಾಮಿ(ಪ.ಪಂಗಡ-723), ರಮೇಶ್‌ಕುಂಬಾರಹಳ್ಳಿ(ಬಿಸಿಎಂ, ಬಿ-932) ಆಯ್ಕೆಯಾಗಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು: ಎ-ತರಗತಿಯಡಿ: ಬಿ.ಹೆಚ್‌.ಶಿವಣ್ಣ-ಬಾಗೂರು, ವಿ.ಎನ್‌.ರಾಜಣ್ಣ-ವಡ್ಡರಹಳ್ಳಿ, ಕೆ.ಎಂ.ನಂಜಪ್ಪ-ಬಳದರೆ, ಎಂ.ಆರ್‌.ಅನಿಲ್‌ಕುಮಾರ್‌-ಎಂ.ಶಿವರ, ಎನ್‌. ಕೃಷ್ಣೇಗೌಡ-ಸುಂಡಳ್ಳಿ ಮತ್ತು ಸಿ.ಎನ್‌.ಪುಟ್ಟಸ್ವಾಮಿಗೌಡ-ಎ.ಚೋಳೆನಹಳ್ಳಿ, ಅವರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿ-ತರಗತಿಯಡಿ: ಚಂದ್ರಕಲಾ, ಮತ್ತು ಯು.ವಿ.ಮಂಜುಳಾ ಆಯ್ಕೆಯಾಗಿದ್ದಾರೆ.

click me!