'ಕಾಂಗ್ರೆಸ್ಸಿಗರು ಬಣ್ಣ ಬದಲಿಸುವ ಊಸರವಳ್ಳಿ ಇದ್ದಂತೆ'

Kannadaprabha News   | Asianet News
Published : Nov 02, 2020, 01:34 PM ISTUpdated : Nov 02, 2020, 01:44 PM IST
'ಕಾಂಗ್ರೆಸ್ಸಿಗರು ಬಣ್ಣ ಬದಲಿಸುವ ಊಸರವಳ್ಳಿ ಇದ್ದಂತೆ'

ಸಾರಾಂಶ

ಗೋವಾ ಚುನಾವಣೆ ಸಂದರ್ಭದಲ್ಲಿ ಮಹದಾಯಿ ವಿಚಾರವಾಗಿ ಮಾತನಾಡಿದ್ದ ಸೋನಿಯಾ ಗಾಂಧಿ, ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ನೀಡುವುದಿಲ್ಲ ಎಂದು ಹೇಳಿದ್ದರು, ಇದೀಗ ಆ ಪಕ್ಷದ ರಾಜ್ಯ ಮುಖಂಡರು ತಮ್ಮ ನಾಯಕಿ ಮಾತಿನಂತೆ ನಡೆಯುವ ಮೂಲಕ ರಾಜ್ಯಕ್ಕೆ ದ್ರೋಹ ಮಾಡುವ ಹೇಳಿಕೆ ನೀಡಿದ್ದಾರೆ. ಈ ಕುರಿತು ಹೆಚ್ಚು ಹೇಳುವುದರಲ್ಲಿ ಅರ್ಥವಿಲ್ಲ: ಪ್ರಹ್ಲಾದ ಜೋಶಿ 

ಧಾರವಾಡ(ನ.02):  ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಮಾಡಿದ್ದನ್ನೇ ಪಕ್ಷದ ಉಳಿದ ನಾಯಕರು ಮಾಡುತ್ತಾರೆ. ಕಾಂಗ್ರೆಸ್‌ ನಾಯಕರು ಕರ್ನಾಟಕದಲ್ಲಿದ್ದಾಗ ಒಂದು ರೀತಿ, ಗೋವಾದಲ್ಲಿ ಒಂದು ರೀತಿ ರೂಪ ತಾಳುವ ಸ್ವಭಾವದವರು. ಇವರು ಒಂದು ರೀತಿ ಬಣ್ಣ ಬದಲಿಸುವ ಊಸರವಳ್ಳಿ ಇದ್ದಂತೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ಭಾನುವಾರ ಇಲ್ಲಿ ದಿನೇಶ ಗುಂಡೂರಾವ್‌ ಮಹದಾಯಿ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಗೋವಾ ಚುನಾವಣೆ ಸಂದರ್ಭದಲ್ಲಿ ಮಹದಾಯಿ ವಿಚಾರವಾಗಿ ಮಾತನಾಡಿದ್ದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ನೀಡುವುದಿಲ್ಲ ಎಂದು ಹೇಳಿದ್ದರು. ಇದೀಗ ಆ ಪಕ್ಷದ ರಾಜ್ಯ ಮುಖಂಡರು ತಮ್ಮ ನಾಯಕಿ ಮಾತಿನಂತೆ ನಡೆಯುವ ಮೂಲಕ ರಾಜ್ಯಕ್ಕೆ ದ್ರೋಹ ಮಾಡುವ ಹೇಳಿಕೆ ನೀಡಿದ್ದಾರೆ. ಈ ಕುರಿತು ಹೆಚ್ಚು ಹೇಳುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ. 

ಈಗಿನ ಕಾಂಗ್ರೆಸ್‌ ಡುಬ್ಲಿಕೇಟ್‌, ಗಾಂಧೀಜಿ ಕಾಂಗ್ರೆಸ್‌ ಒರಿಜಿನಲ್‌: ಸಚಿವ ಪ್ರಹ್ಲಾದ ಜೋಶಿ

ಮಹದಾಯಿ ವಿಚಾರದಲ್ಲಿ ಗೋವಾ ಕಾಂಗ್ರೆಸ್‌ ನಿರ್ಣಯಕ್ಕೆ ದಿನೇಶ್‌ ಗುಂಡೂರಾವ್‌ ಅವರು ಬೆಂಬಲರಾಗಿರುತ್ತಾರೆ ಎಂದು ಗೋವಾ ಕಾಂಗ್ರೆಸ್‌ ಪಕ್ಷದ ನಾಯಕ ದಿಗಂಬರ್‌ ಕಾಮತ್‌ ಹೇಳಿಕೆ ನೀಡಿದ್ದರು. ಹೀಗಾಗಿ ಬಿಜೆಪಿ ನಾಯಕರು ಗುಂಡೂರಾವ್‌ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
 

PREV
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!