'2023ಕ್ಕೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ'

Kannadaprabha News   | Asianet News
Published : Jun 18, 2021, 01:07 PM ISTUpdated : Jun 18, 2021, 01:13 PM IST
'2023ಕ್ಕೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ'

ಸಾರಾಂಶ

2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಪ್ರಾಮಾಣಿಕ ಹೋರಾಟ  ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ  ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ವಾರಿಯರ್ಸ್‌ಗೆ ಸಹಾಯ

ಮದ್ದೂರು (ಜೂ.18): 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಪ್ರಾಮಾಣಿಕ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

ಮದ್ದೂರು ಪಟ್ಟಣದ  ಕ್ರೀಡಾಂಗಣದಲ್ಲಿ ಗುರುವಾರ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಆಶಾ ಅಂಗನವಾಡಿ ಅಂಗವಿಕಲರು ಚಾಲಕರು ಮಂಗಳಮುಖಿಯರಿಗೆ ಶಾಸಕ ಡಿ ಸಿ ತಮ್ಮ ಅವರು ನೀಡಿದ ಆಹಾರ ಕಿಟ್ ವಿತರಿಸಿ ಮಾತನಾಡಿದರು. 

ಪ್ರಧಾನಿಯಾಗಿ 11 ತಿಂಗಳ ಅಧಿಕಾರವಧಿಯಲ್ಲಿ ಏನೆಲ್ಲಾ ಆಯ್ತು? ದೇವೇಗೌಡರ ಮನದಾಳದ ಮಾತು ...

ಅಧಿಕಾರಕ್ಕೆ ಬರಬೇಕೆನ್ನುವುದು ಸ್ವಾರ್ಥಕ್ಕಲ್ಲ. ಎಲ್ಲ ಜನರಿಗೆ ಗೌರವಯುತವಾಗಿ ಬದುಕಲು ಕಲ್ಪಿಸಿಕೊಡುವುದು ನನ್ನ ಪ್ರಮುಖ ಉದ್ದೇಶವಾಗಿದೆ. ಜೆಡಿಎಸ್ ಪಕ್ಷವನ್ನು ಮರೆಯಾಗಿಸುವುದಕ್ಕೆ ಯಾರಿಂದೂ ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದರು. 

ನಾನು ಮುಖ್ಯಮಂತ್ರಿಯಾಗಿ ಎರಡು ಬಾರಿ ಅಧಿಕಾರ ನಡೆಸಿದ ಅನುಭವವಿದೆ. ಯಾವ ವರ್ಗದ ಜನರ ಕಷ್ಟ ಏನು ಎನ್ನುವುದನ್ನು ಅರಿತುಕೊಂಡಿದ್ದೇನೆ. ಅದಕ್ಕೆಲ್ಲಾ ಪರೊಹಾರ ಸೂಚಿಸುವ ಸಮಯ ಬರಲಿದೆ. ಆಗ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವುದರೊಂದಿಗೆ ಜನರ ಬದುಕನ್ನು ಹಸನುಗೊಳಿಸುವ ಭರವಸೆ ನೀಡಿದರು. 

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ