50 ದಿನದಲ್ಲಿ ಜೆಡಿಎಸ್‌ ಅಧಿಕಾರಕ್ಕೆ: ಕುಮಾರಸ್ವಾಮಿ

By Kannadaprabha News  |  First Published Mar 9, 2023, 4:46 AM IST

ನಾಲ್ಕು ವರ್ಷಗಳ ಕಾಲ ಈ ರೈತ ವಿರೋಧಿ ಸರ್ಕಾರ ನೀಡಿದ ಕಿರುಕುಳವನ್ನು ತಡೆದುಕೊಂಡಿದ್ದೀರಿ. ಇನ್ನು 50 ದಿನ ತಾಳಿ, ನಿಮ್ಮ ನಿರೀಕ್ಷೆಯ ಜಾತ್ಯತೀತ ಜನತಾದಳ ಸರ್ಕಾರವೇ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದ್ದು, ರೈತಾಪಿಗಳ ಸಮಸ್ಯೆ ದೂರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.


ತುರುವೇಕೆರೆ: ನಾಲ್ಕು ವರ್ಷಗಳ ಕಾಲ ಈ ರೈತ ವಿರೋಧಿ ಸರ್ಕಾರ ನೀಡಿದ ಕಿರುಕುಳವನ್ನು ತಡೆದುಕೊಂಡಿದ್ದೀರಿ. ಇನ್ನು 50 ದಿನ ತಾಳಿ, ನಿಮ್ಮ ನಿರೀಕ್ಷೆಯ ಜಾತ್ಯತೀತ ಜನತಾದಳ ಸರ್ಕಾರವೇ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದ್ದು, ರೈತಾಪಿಗಳ ಸಮಸ್ಯೆ ದೂರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ತಿಪಟೂರು ಮಾರ್ಗವಾಗಿ ತೆರಳುವ ವೇಳೆ ತಾಲೂಕು ಕಚೇರಿ ಮುಂಭಾಗ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಹಮ್ಮಿಕೊಂಡಿದ್ದ ಅಹೋರಾತ್ರಿ ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ, ರೈತಾಪಿಗಳನ್ನು ಹಾಗೂ ಜೆಡಿಎಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Tap to resize

Latest Videos

ಕೊಬ್ಬರಿ ಬೆಂಬಲ ಬೆಲೆ ಘೋಷಣೆ ಸೇರಿದಂತೆ ತಾಲೂಕಿನ ವಿವಿಧ ಸಮಸ್ಯೆಗಳ ಕುರಿತು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನು ಕೈ ಬಿಡಲು ಸೂಚನೆ ನೀಡಿದರು. ಕೃಷ್ಣಪ್ಪ ಸತ್ಯಾಗ್ರಹವನ್ನು ಮುಂದೂಡಿದರು.

ಈ ಸಂದರ್ಭದಲ್ಲಿ ರಾಜ್ಯ ಯುವ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಸ್ವಾಮಿ, ಯುವ ಘಟಕದ ಅಧ್ಯಕ್ಷ ಬಾಣಸಂದ್ರ ರಮೇಶ್‌, ವಕ್ತಾರ ಯೋಗೀಶ್‌, ಮುಖಂಡರಾದ ಬೂವನಹಳ್ಳಿ ದೇವರಾಜ್‌, ಹೆಡಿಗೇಹಳ್ಳಿ ವಿಶ್ವನಾಥ್‌, ವಿಜಯಕುಮಾರ್‌, ಕಣತೂರು ಪ್ರಸನ್ನ, ರಾಜೀವ್‌ ಕೃಷ್ಣಪ್ಪ, ರಾಮಕೃಷ್ಣ, ಸಿ ಎಸ್‌ ಪುರ ಬಸವರಾಜು, ವಿಠಲದೇವರಹಳ್ಳಿ ಹರೀಶ್‌ ಸೇರಿದಂತೆ ಹಲವಾರು ಮುಖಂಡರು ಇದ್ದರು.

ರಾಮರಾಜ್ಯ ನಿರ್ಮಾಣ

ಬಾದಾಮಿ (ಮಾ.08): ಐದು ವರ್ಷದ ಅವಧಿಗೆ ನಮ್ಮ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಈ ರಾಜ್ಯವನ್ನು ರಾಮರಾಜ್ಯ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ತಾಲೂಕಿನ ಕುಳಗೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್‌ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಪೂರ್ಣ ಅಧಿಕಾರ ನೀಡಿದರೆ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಇಂಗ್ಲಿಷ್‌ ಹಾಗೂ ಕನ್ನಡ ಮಾಧ್ಯಮದ ಉಚಿತ ಶಿಕ್ಷಣ. ಪ್ರತಿ ಗ್ರಾಮದಲ್ಲಿ ಉಚಿತ ಆರೋಗ್ಯ, ರೈತರಿಗೆ ಎಕರೆಗೆ 10 ಸಾವಿರ, ಪ್ರತಿ ವರ್ಷ ರೈತರು ಎಲ್ಲಿಯೂ ಸಾಲ ಪಡೆಯಬೇಕಿಲ್ಲ. 

ದಿನಕ್ಕೆ 24 ಗಂಟೆ ಉಚಿತ ವಿದ್ಯುತ್‌ ನೀಡುತ್ತೇವೆ ಎಂದರು. ಈಗಾಗಲೇ ಸಾಲ ಮನ್ನಾ ಮಾಡಿ ತೋರಿಸಿದ್ದೇನೆ. ಮಾಜಿ ಶಾಸಕರ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ನಿಂದ ರೈತರ ಮೇಲೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಬಂದರೆ ಆ ಸಹಕಾರಿ ಬ್ಯಾಂಕ್‌ ತನಿಖೆ ಮಾಡಿಸಿ, ಅದನ್ನು ಮುಚ್ಚಿಸುವ ಕೆಲಸ ಮಾಡುತ್ತೇವೆ. ಪ್ರತಿ ಮನೆಗೆ 5 ಸಾವಿರ ಕೊಡುತ್ತೇವೆ. ನದಿ ತೀರದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಮೂಲಭೂತ ಸೌಕರ್ಯ ಒದಗಿಸುತ್ತೇವೆ. ಈ ಬಾರಿ ಹನಮಂತ ಮಾವಿನಮರದಗೆ ಆಶೀರ್ವಾದ ಮಾಡಿ. ಬಾದಾಮಿ ತಾಲೂಕಿನ ಪ್ರತಿಯೊಂದು ಹಳ್ಳಿಗೂ, ಕಾಂಕ್ರಿಟ್‌ ರಸ್ತೆ, ಒಳಚರಂಡಿ, ಮೂಲಭೂತ ಸೌಕರ್ಯ ಒದಗಿಸುತ್ತೇವೆ ಎಂದರು.

ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂಬ ಇಬ್ರಾಹಿಂ ಹೇಳಿಕೆ ಅಹಂಕಾರದ ಮಾತಲ್ಲ: ಎಚ್‌ಡಿಕೆ

ಚುನಾವಣೆಯಲ್ಲಿ ಮತ ಪಡೆದು ಸಿದ್ದರಾಮಯ್ಯ ಹಾಗೂ ಶ್ರೀರಾಮಲು ಈ ಭಾಗಕ್ಕೆ ಬಂದು ಜನರ ಕಷ್ಟಸುಖ ಕೇಳಲಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜನರ ಕಷ್ಟ ಪರಿಹಾರವಾಗಿಲ್ಲ. ಒಬ್ಬ ಎಂಎಲ್‌ಎ ಮನೆಯಲ್ಲಿ 8 ಕೋಟಿ ಸಿಗುತ್ತೆ ಅಂದ್ರೆ ನೀವು ಯೋಚನೆ ಮಾಡಿ. ಅಂತಹ ದುಡ್ಡಿನಿಂದ ನಿಮಗೆ ಕುಕ್ಕರ್‌ ಹಂಚುತ್ತಾರೆ. ಆಮಿಷಗಳಿಗೆ ಬಲಿಯಾಗಬೇಡಿರಿ ಎಂದು ಕುಮಾರಸ್ವಾಮಿ ಮತದಾರರಿಗೆ ಮನವಿ ಮಾಡಿದರು. ಮಾನ್ವಿ ಶಾಸಕ ರಾಜಾವೆಂಕಟಪ್ಪ ನಾಯಕ ಮಾತನಾಡಿ, ಇದೊಂದು ಬಾರಿ ಜೆಡಿಎಸ್‌ ಪಕ್ಷಕ್ಕೆ ಪೂರ್ಣ ಬಹುಮತ ನೀಡಿ ಅಧಿಕಾರ ಕೊಟ್ಟು ನೋಡಿ ಜನಪರ ಕಾರ್ಯಕ್ರಮ ನೀಡುತ್ತೇವೆ ಎಂದು ಹೇಳಿದರು. 

ನನಗೆ ಟೋಪಿ ಹಾಕಿದವರು ಶೀಘ್ರ ಕಾಂಗ್ರೆಸ್‌ಗೆ: ಎಚ್‌.ಡಿ.ಕುಮಾರಸ್ವಾಮಿ

ಬಾದಾಮಿ ಜೆಡಿಎಸ್‌ ಅಭ್ಯರ್ಥಿ ಹನಮಂತ ಮಾವಿನಮರದ ಮಾತನಾಡಿ, ಬಾದಾಮಿ ತಾಲೂಕಿನ ಪ್ರವಾಹ ಪೀಡಿತ ಗ್ರಾಮಗಳಲ್ಲಿ 9 ದಿನಗಳ ಕಾಲ 195 ಕಿಮೀ ಪಾದಯಾತ್ರೆ ಮಾಡಿ ಸಮಸ್ಯೆಗಳನ್ನು ಆಲಿಸಿದ್ದೇನೆ. ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದೊಳಗೆ ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಪ್ರಕಾಶ ಗಾಣಿಗೇರ ಮಾತನಾಡಿದರು. ತಾಲೂಕು ಜೆಡಿಎಸ್‌ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು. ಸಮಾವೇಶದಲ್ಲಿ ಮತಕ್ಷೇತ್ರದ ವಿವಿದ ಭಾಗಗಳಿಂದ ಸಹಸ್ರಾರು ಕಾರ್ಯಕರ್ತರು, ಅಭಿಮಾನಿಗಳು, ಯುವಕರು, ಮಹಿಳೆಯರು ಭಾಗವಹಿಸಿದ್ದರು.

click me!