ಶ್ರೀಕಂಠೇಶ್ವರನಿಗೆ ತುಲಾಭಾರ ಸೇವೆ ಸಲ್ಲಿಸಿದ ಎಚ್‌.ಡಿ. ದೇವೇಗೌಡ

By Kannadaprabha News  |  First Published Dec 3, 2022, 5:51 AM IST

ಪಟ್ಟಣದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಗುರುವಾರ ಪತ್ನಿ ಚೆನ್ನಮ್ಮರೊಂದಿಗೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಏಕವಾರ ರುದ್ರಾಭಿಷೇಕ, ತುಲಾಭಾರ ಸೇವೆ ಸಲ್ಲಿಸಿದರು.


 ನಂಜನಗೂಡು (ಡಿ.03):  ಪಟ್ಟಣದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಗುರುವಾರ ಪತ್ನಿ ಚೆನ್ನಮ್ಮರೊಂದಿಗೆ ಭೇಟಿ ನೀಡಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಏಕವಾರ ರುದ್ರಾಭಿಷೇಕ, ತುಲಾಭಾರ ಸೇವೆ ಸಲ್ಲಿಸಿದರು.

ಬೆಳಗ್ಗೆ 9 ಗಂಟೆಗೆ (Temple)  ಪ್ರವೇಶಿಸಿದ ಅವರು ಶ್ರೀಕಂಠೇಶ್ವರ ಸ್ವಾಮಿಗೆ ಅಕ್ಕಿ, ಬೆಲ್ಲದ ತುಲಾಭಾರ ಸೇವೆ ಸಲ್ಲಿಸಿದರು.

Latest Videos

undefined

ನಂತರ ಅವರು ಮಾತನಾಡಿ, ಈಗ ನನಗೆ 90 ವರ್ಷ ಮಂಡಿ ನೋವು ಕಾಣಿಸಿಕೊಂಡಿತ್ತು, ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಹರಕೆ ಹೊತ್ತಿದ್ದೆ, ಹೀಗಾಗಿ ಹರಕೆ ತೀರಿಸಲು ಬಂದಿದ್ದೇನೆ. ಚಿಕ್ಕವನಿದ್ದಾಗ ನನ್ನ ಎರಡು ಕಿವಿಯಲ್ಲಿ ಲೋಳೆಯಂತಹ ನೀರು ಸುರಿಯುತ್ತಿತ್ತು, ಕಿವಿಗಳಿಗೆ ತೊಂದರೆಯಾಗಿತ್ತು, ಶ್ರೀಕಂಠೇಶ್ವರನಿಗೆ ಹರಕೆ ಹೊತ್ತು, ಕ್ಷೇತ್ರದಲ್ಲಿ ದೊರೆಯುವ ಮಣ್ಣಿನ ಮೇರುತ್ಗೆಯನ್ನು ಪ್ರಸಾದವಾಗಿ ಬಳಸಿದ್ದರಿಂದ ಕಿವಿಯ ತೊಂದರೆ ನಿವಾರಣೆಯಾಗಿತ್ತು. ಭವರೋಗ ವೈದ್ಯ ನಂಜುಂಡೇಶ್ವರನ ಕೃಪೆಯಿಂದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Election)  ಕುಮಾರಸ್ವಾಮಿ ನೇತೃತ್ವದ ಜನತಾದಳ 113 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯಲಿದೆ.

ಕುಮಾರಸ್ವಾಮಿ ಜನತಾದಳ ಅಧಿಕಾರಕ್ಕೆ ಬಂದರೆ ಬಡವರ ಪರವಾದ ಪಂಚರತ್ನ ಯೋಜನೆಯನ್ನು ಜಾರಿ ಮಾಡುವುದಾಗಿ ರಾಜ್ಯದ ಜನರಿಗೆ ವಾಗ್ದಾನ ಮಾಡಿದ್ದಾರೆ, ಯಾತ್ರೆಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯ ಎಚ್‌.ಡಿ. ಕೋಟೆ ಕ್ಷೇತ್ರದಲ್ಲಿ ಕಳೆದ ಬಾರಿ ಚಿಕ್ಕಣ್ಣ ಅವರನ್ನು ಅಭ್ಯರ್ಥಿ ಮಾಡುವ ವಿಚಾರದಲ್ಲಿ ನಮ್ಮ ಪಕ್ಷದಲ್ಲಿದ್ದ ಕೆಲವರು ಅಡ್ಡಿ ಮಾಡಿ ತೊಂದರೆ ಕೊಟ್ಟರು. ಈ ಬಾರಿ ನಮ್ಮ ಪಕ್ಷದಿಂದ ಚಿಕ್ಕಣ್ಣ ಅಭ್ಯರ್ಥಿಯಾಗಲಿದ್ದಾರೆ. ನಂಜನಗೂಡು ಕ್ಷೇತ್ರದಿಂದ ಕುಮಾರಸ್ವಾಮಿಯವರು ಬೆಳವಾಡಿ ಶಿವಕುಮಾರ್‌ಗೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿದ್ದಾರೆ, ಸಹಜವಾಗಿ ಅವರೇ ಸ್ಫರ್ಧಿಸಲಿದ್ದಾರೆ ಎಂದು ಹೇಳಿದರು.

ತುಲಾಭಾರ ಸೇವೆ : ಬೆಳಗ್ಗೆ 9ಕ್ಕೆ ದೇವಾಲಯ ಪ್ರವೇಶಿಸಿದ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಶ್ರೀಕಂಠೇಶ್ವರ ಸ್ವಾಮಿಗೆ ಅಕ್ಕಿ, ಬೆಲ್ಲದ ತುಲಾಭಾರ ಸೇವೆ ಸಲ್ಲಿಸಿದರು. ಸ್ವಾಮಿಗೆ ಏಕವಾರ ರುದ್ರಾಭಿಷೇಕ ಸೇವೆ ಸಲ್ಲಿಸಿದರು.

ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್‌. ಎಂ. ಅಶ್ವಿನ್‌ಕುಮಾರ್‌, ಸಿ.ಎನ್‌. ಮಂಜೇಗೌಡ, ಜನತಾದಳ ಜಿಲ್ಲಾಧ್ಯಕ್ಷ ಎನ್‌. ನರಸಿಂಹಸ್ವಾಮಿ, ಬೆಳವಾಡಿ ಶಿವಕುಮಾರ್‌, ಮಾದೇಶ್‌, ನಗರಸಭೆ ಸದಸ್ಯ ಖಾಲೀದ್‌, ಆರ್‌.ವಿ. ಮಹದೇವಸ್ವಾಮಿ, ಸಂಜಯ…ಗೌಡ ಇದ್ದರು.

ಹಣದಿಂದ ರಾಜಕೀಯ ಮಾಡ್ತಿಲ್ಲ

ಕಲಬುರಗಿ (ಡಿ.03): ಜಾತ್ಯತೀತ ಜನತಾದಳ ಪಕ್ಷ ಕರ್ನಾಟಕದಲ್ಲಿ ಹಣದಿಂದ ರಾಜಕೀಯ ಮಾಡುತ್ತಿಲ್ಲ, ಅಂತಹ ಅಗತ್ಯವೂ ಇಲ್ಲ, ಪಕ್ಷಕ್ಕೆ ಹಣಕ್ಕಿಂತ ಜನ ಮುಖ್ಯ. ಜನ ಕೇಂದ್ರಿತ ರಾಜಕೀಯ ನಮ್ಮದು ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ. ಆಳಂದದಲ್ಲಿ ಶುಕ್ರವಾರ ಆಯೋಜಿಸಿದ್ದ ಪಕ್ಷದ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜೆಡಿಎಸ್‌ ದುಡ್ಡು ನೋಡಿ ರಾಜಕೀಯ ಮಾಡೋದಿದ್ರೆ ಪಂಚರತ್ನ ಯಾತ್ರೆ ಯಾಕೆ ಮಾಡಬೇಕಿತ್ತು? ಜನತಾ ಜಲಧಾರೆ ಜನರಿಂದಲೇ ನಡೆಯುತ್ತಿದೆಯೇ ಹೊರತು ಹಣದಿಂದ ಅಲ್ಲ, ಹಣಕ್ಕಿಂತ ನಮಗೆ ಜನ ಮುಖ್ಯ ಎಂದರು.

ಜೆಡಿಎಸ್‌ ಹಣದಿಂದ ಉಳಿದಿಲ್ಲ, ಜನರಿಂದ ಉಳಿದಿದೆ. ಹಣದಿಂದಲಾದರೆ ಪಂಚರತ್ನ, ಜನತಾ ಜಲಧಾರೆಯಂತಹ ಕಾರ್ಯಕ್ರಮಗಳನ್ನು ವರ್ಷಗಟ್ಟಲೇ ನಡೆಸಲಾಗುತ್ತಿರಲಿಲ್ಲ. ಯಾರನ್ನೂ ನಾವು ಹಣ ಕೊಟ್ಟು ಕರೆಯಿಸುತ್ತಿಲ್ಲ. ಕಳೆದ ಬಾರಿ ಜೆಡಿಎಸ್‌ ಅಧಿಕಾರದಲ್ಲಿದ್ದಾಗ ರೈತರ 25 ಸಾವಿರ ಕೋಟಿ ರು. ಸಾಲಮನ್ನಾ ಮಾಡಿದ್ದು ಹಣಕ್ಕಾಗಿ ಅಲ್ಲ, ರೈತರ ಹಿತ ಕಾಪಾಡಲಿಕ್ಕಾಗಿ. ವಿರೋಧಿಗಳಿಗೆ ಆರೋಪ ಮಾಡಲು ಏನೂ ಇಲ್ಲ, ಇಲ್ಲದ್ದು ಆರೋಪಿಸುತ್ತ ಕಾಲಹರಣ ಮಾಡುತ್ತಿದ್ದಾರೆಂದರು. ರೌಡಿ ರಾಜಕೀಯ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಸಿಡಿಮಿಡಿಗೊಂಡ ಗೈಡರು ಆ ಬಗ್ಗೆ ತಾವು ಪ್ರತಿಕ್ರಿಯೆ ನೀಡೋದಿಲ್ಲ ಎಂದರಲ್ಲದೆ ಯಾರು ರೌಡಿಗಳನ್ನು ಸೇರಿಸಿಕೊಳ್ಳುತ್ತಿದ್ದಾರೋ ಅವರನ್ನೇ ಕೇಳಿ ಎಂದರು.

ಕಾವೇರಿ: ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯ: ಎಚ್‌.ಡಿ.ದೇವೇಗೌಡ

ಗಡಿ ವಿವಾದದ ವಿಚಾರದಲ್ಲಿ ಜೆಡಿಎಸ್‌ ಹಿಂದಿನ ನಿಲುವಿಗೆ ಕಟಿಬದ್ಧ. ಹಿಂದಿನ ಮಹಾಜನ್‌ ವರದಿಯೇ ಅಂತಿಮ ಎಂಬುದು ನಮ್ಮ ಪಕ್ಷದ ನಿಲುವಾಗಿದ್ದು ಇಂದಿಗೂ ಅದೇ ನಿಲುವಿಗೆ ನಾವು ಬದ್ಧ. ನಾವು ಅದೇ ನಿಲುವನ್ನು ಈಗಲೂ ಬೆಂಬಲಿಸುತ್ತೇವೆ. ವಿನಾಕಾರಣ ವಿವಾದಗಲು ಯಾಕೆ ಚುನಾವಣೆ ಪೂರ್ವ ಹುಟ್ಟು ಹಾಕೋದು, ಇಂತಹ ನಡತೆ ಯಾರಿಗೂ ಸರಿಯಲ್ಲ ಎಂದರು. ಮೊಮ್ಮಕ್ಕಳು ಬರೋ ಚುನಾವಣೆಯಲಿ ಕಣದಲ್ಲಿ ಇರುತ್ತಾರಾ ಎಂದು ಕೇಳಿದ ಪ್ರಶ್ನೆಗೆ ದೇವೇಗೌಡರು ಯಾವುದೇ ಉತ್ತರ ನೀಡಲಿಲ್ಲ. ಅನಿತಾ ಕುಮಾರಸ್ವಾಮಿ, ನಾಸೀರ್‌ ಹುಸೇನ್‌ ಉಸ್ತಾದ್‌ ಸೇರಿದಂತೆ ಅನೇಕರು ಇದ್ದರು.

click me!