ನನಗೆ ಜೆಡಿಎಸ್‌ ಪ್ರತಿಸ್ಪರ್ಧಿ: BJP ಅಭ್ಯರ್ಥಿ ಅನಿಲ್‌ಕುಮಾರ್‌

By Kannadaprabha News  |  First Published Apr 18, 2023, 5:42 AM IST

ನನಗೆ 2023ರ ಚುನಾವಣೆಯ ಪ್ರತಿಸ್ಪರ್ಧಿ ಜೆಡಿಎಸ್‌ ಪಕ್ಷ ಮಾತ್ರ. ಕಾಂಗ್ರೆಸ್‌ ಪಕ್ಷವು ಕೊರಟಗೆರೆ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಇಳಿಯುತ್ತೇ. ಕೊರಟಗೆರೆಯಲ್ಲಿ ಇಂದು ಕಾರ್ಯಕರ್ತರು ಇತಿಹಾಸ ಸೃಷ್ಟಿಸಿದ್ದಾರೆ. ಕ್ಷೇತ್ರದಲ್ಲಿ 2023ಕ್ಕೆ ಬಿಜೆಪಿ ಬಾವುಟ ಹಾರಾಡುವುದು ಖಚಿತ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಚ್‌.ಅನಿಲ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.


 ಕೊರಟಗೆರೆ :  ನನಗೆ 2023ರ ಚುನಾವಣೆಯ ಪ್ರತಿಸ್ಪರ್ಧಿ ಜೆಡಿಎಸ್‌ ಪಕ್ಷ ಮಾತ್ರ. ಕಾಂಗ್ರೆಸ್‌ ಪಕ್ಷವು ಕೊರಟಗೆರೆ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಇಳಿಯುತ್ತೇ. ಕೊರಟಗೆರೆಯಲ್ಲಿ ಇಂದು ಕಾರ್ಯಕರ್ತರು ಇತಿಹಾಸ ಸೃಷ್ಟಿಸಿದ್ದಾರೆ. ಕ್ಷೇತ್ರದಲ್ಲಿ 2023ಕ್ಕೆ ಬಿಜೆಪಿ ಬಾವುಟ ಹಾರಾಡುವುದು ಖಚಿತ ಎಂದು ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಚ್‌.ಅನಿಲ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬಿಜೆಪಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮತ್ತು ಬಿಜೆಪಿ ಶೋಭಾಯಾತ್ರೆ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದರು.

Tap to resize

Latest Videos

ಬೃಹತ್‌ ಮೆರವಣಿಗೆಯಲ್ಲಿ ಇಂದು ಸಾವಿರಾರು ಕಾರ್ಯಕರ್ತರು ಆಗಮಿಸುವ ಮೂಲಕ ಕೊರಟಗೆರೆ ಕ್ಷೇತ್ರದಲ್ಲಿ ಸೃಷ್ಟಿಯಾಗಿದೆ. 2023ರ ಚುನಾವಣೆಗೆ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಸುಧಾಕರಲಾಲ್‌ ನನಗೆ ಪ್ರಬಲ ಎದುರಾಳಿ ಅಷ್ಟೇ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಡಾ.ಜಿ.ಪರಮೇಶ್ವರ್‌ ನನಗೇ ಎದುರಾಳಿ ಅಲ್ಲ. ಅವರು ಕೊರಟಗೆರೆ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ತಲುಪುವುದು ಖಚಿತವಾಗಿದೆ ಎಂದು ತಿಳಿಸಿದರು.

ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ ಮಾತನಾಡಿ, ಕೊರಟಗೆರೆ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ 73 ಸಾವಿರ ಮತ ಬಂದಿವೆ. ಬಿಜೆಪಿ ಕೊರಟಗೆರೆಯಲ್ಲಿ ಸದೃಢವಾಗಿದೆ ಎಂಬುದಕ್ಕೆ ಜನಸ್ತೋಮವೇ ಸಾಕ್ಷಿ. ರಾಜ್ಯದಲ್ಲಿ ಬಿಜೆಪಿ ಬರುವುದು ಎಷ್ಟುಸತ್ಯವೋ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಅಷ್ಟೇ ಸತ್ಯ. ಕೊರಟಗೆರೆ ಕ್ಷೇತ್ರದ ಜನತೆ ಈಗ ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಸಿ ಮೋರ್ಚ ರಾಜ್ಯ ಕಾರ್ಯದರ್ಶಿ ವೆಂಕಟೇಶ್‌ ದೊಡ್ಡೇರಿ, ಕೊರಟಗೆರೆ ಉಸ್ತುವಾರಿ ವಿಧುರಾವಲ್‌, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್‌, ಕೊರಟಗೆರೆ ಮಂಡಲ ಅಧ್ಯಕ್ಷ ಪವನಕುಮಾರ್‌, ಕಾರ್ಯದರ್ಶಿ ಗುರುಧತ್‌, ಯುವಾಧ್ಯಕ್ಷ ಅರುಣ್‌, ಬಿಜೆಪಿ ಜಿಲ್ಲಾಧ್ಯಕ್ಷ ವಿಶ್ವನಾಥ ಅಪ್ಪಾಜಪ್ಪ, ಮುಖಂಡರಾದ ದಾಸಾಲುಕುಂಟೆ ರಘು, ವೆಂಕಟಾಚಲಯ್ಯ, ಗೀತಾ, ಹರ್ಷ, ಅರ್ಜುನ್‌, ನಳೀನಾ, ದಾಡಿವೆಂಕಟೇಶ್‌, ಪ್ರದೀಪಕುಮಾರ್‌, ಸಂಜೀವರಾಜು ಸೇರಿದಂತೆ ಇತರರು ಇದ್ದರು.

ಕಟ್ಟೆಗಣಪತಿಗೆ ವಿಶೇಷ ಪೂಜೆ:

ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಚ್‌.ಅನಿಲ್‌ಕುಮಾರ್‌ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನಾ ಕೊರಟಗೆರೆ ಪಟ್ಟಣದ ಗುಂಡಾಂಜನೇಯ ಸ್ವಾಮಿ ದೇವಾಲಯ ಮತ್ತು ಕಟ್ಟೆಗಣಪತಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಬಿಜೆಪಿ ಪಕ್ಷದ ಮುಖಂಡರ ಜೊತೆಗೂಡಿ ಏ.17ರ ಸೋಮವಾರ ಮಧ್ಯಾಹ್ನ 11ಕ್ಕೆ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಪಕ್ಷವು ಆಕಾಶದ ಎತ್ತರಕ್ಕೆ ಬೆಳೆದು ನಿಂತಿದೆ. ಯಾರೇ ಹೋದರೂ ನಮ್ಮ ಪಕ್ಷಕ್ಕೆ ನಷ್ಟಆಗೋದಿಲ್ಲ. ಕಾಂಗ್ರೆಸ್‌ ಪಕ್ಷದವರು ಸಾಕಷ್ಟುಜನ ನಮ್ಮ ಪಕ್ಷಕ್ಕೆ ಬಂದಾಗಿದೆ. ಬಿಜೆಪಿ ಶಾಸಕ ಭ್ರಷ್ಟಅನ್ನುತ್ತಿದ್ದ ವ್ಯಕ್ತಿಯನ್ನೇ ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡು ಈಗ ನಮಗೆ ಶಕ್ತಿ ಬಂದಿದೇ ಅಂತಾರೇ. ಎತ್ತಿನಹೊಳೆ ಮತ್ತು ಹೇಮಾವತಿ ನೀರು ಏನು ಪರಮೇಶ್ವರ್‌ ತಂದಿದ್ರಾ. ನೀರಾವರಿ ಯೋಜನೆಗೆ ಅನುದಾನ ನಮ್ಮ ಬಿಜೆಪಿ ಸರ್ಕಾರ ಕೊಟ್ಟಿದ್ದು ಅಲ್ವಾ.

ಜಿ.ಎಸ್‌.ಬಸವರಾಜು ಸಂಸದ ತುಮಕೂರು

ನಾನು ಬಿಜೆಪಿ ಪಕ್ಷದ ಕಾರ್ಯಕರ್ತನ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ನನ್ನ ಜಯವು ಬಿಜೆಪಿ ಕಾರ್ಯಕರ್ತನ ಜಯ ಆಗಲಿದೆ. 2023ಕ್ಕೆ ಕೊರಟಗೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂಬುದಕ್ಕೆ ಇಂದಿನ ಜನಸ್ತೋಮವೇ ಸಾಕ್ಷಿ. ಬಿಜೆಪಿ ಶೋಭಯಾತ್ರೆಯಲ್ಲಿ 25 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡು ಮೆರವಣಿಗೆ ಯಶಸ್ವಿಯಾಗಿದೆ. ಕೊರಟಗೆರೆ ಕ್ಷೇತ್ರದಲ್ಲಿ ಇಂದು ಬಿಜೆಪಿ ಪಕ್ಷವು ಇತಿಹಾಸ ಸೃಷ್ಟಿಸಿದೆ.

ಬಿ.ಎಚ್‌.ಅನಿಲ್‌ಕುಮಾರ್‌ ಬಿಜೆಪಿ ಅಭ್ಯರ್ಥಿ, ಕೊರಟಗೆರೆ

click me!