ನಾಲ್ಕು ಮಂದಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆ!

By Kannadaprabha News  |  First Published Apr 18, 2023, 5:34 AM IST

ಜಿಲ್ಲೆಯಲ್ಲಿ ಈವರೆಗೆ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ನಾಲ್ವರು ಜನಪ್ರತಿನಿಧಿಗೆ ಸಲ್ಲುತ್ತದೆ. ಅವರ ಪೈಕಿ ಜಯಚಂದ್ರ, ಡಾ.ಜಿ.ಪರಮೇಶ್ವರ್‌, ಸೊಗಡು ಶಿವಣ್ಣ ಹಾಗೂ ಎಸ್‌.ಆರ್‌. ಶ್ರೀನಿವಾಸ್‌ ಅವರೇ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದವರು. 1989ರಲ್ಲಿ ಮೊದಲ ಬಾರಿಗೆ ಡಾ. ಜಿ. ಪರಮೇಶ್ವರ್‌ ಅವರು ಮಧುಗಿರಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ಅಂದು ನಡೆದ ಚುನಾವಣೆಯಲ್ಲಿ ಅವರು ಜನತಾದಳದ ರಾಜವರ್ಧನ್‌ ಅವರನ್ನು ಪರಾಭವಗೊಳಿಸಿದ್ದರು. ಆ ಚುನಾವಣೆಯಲ್ಲಿ ಪರಮೇಶ್ವರ್‌ ಅವರು 47 ಸಾವಿರದ 477 ಮತಗಳನ್ನು ಪಡೆದಿದ್ದರು.


ಉಗಮ ಶ್ರೀನಿವಾಸ್‌

 ತುಮಕೂರು :  ಜಿಲ್ಲೆಯಲ್ಲಿ ಈವರೆಗೆ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ಕೀರ್ತಿ ನಾಲ್ವರು ಜನಪ್ರತಿನಿಧಿಗೆ ಸಲ್ಲುತ್ತದೆ. ಅವರ ಪೈಕಿ ಜಯಚಂದ್ರ, ಡಾ.ಜಿ.ಪರಮೇಶ್ವರ್‌, ಸೊಗಡು ಶಿವಣ್ಣ ಹಾಗೂ ಎಸ್‌.ಆರ್‌. ಶ್ರೀನಿವಾಸ್‌ ಅವರೇ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದವರು. 1989ರಲ್ಲಿ ಮೊದಲ ಬಾರಿಗೆ ಡಾ. ಜಿ. ಪರಮೇಶ್ವರ್‌ ಅವರು ಮಧುಗಿರಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರು. ಅಂದು ನಡೆದ ಚುನಾವಣೆಯಲ್ಲಿ ಅವರು ಜನತಾದಳದ ರಾಜವರ್ಧನ್‌ ಅವರನ್ನು ಪರಾಭವಗೊಳಿಸಿದ್ದರು. ಆ ಚುನಾವಣೆಯಲ್ಲಿ ಪರಮೇಶ್ವರ್‌ ಅವರು 47 ಸಾವಿರದ 477 ಮತಗಳನ್ನು ಪಡೆದಿದ್ದರು.

Tap to resize

Latest Videos

1994ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಜನತಾದಳದ ಗಂಗಹನುಮಯ್ಯ ಅವರ ವಿರುದ್ಧ ಪರಾಭವಗೊಂಡರು. ಅಂದಿನ ಚುನಾವಣೆಯಲ್ಲಿ ಪರಮೇಶ್ವರ್‌ ಅವರು ಶೇ. 40.52 ಅಂದರೆ 42 ಸಾವಿರದ 131 ಮತಗಳನ್ನು ಪಡೆದಿದ್ದರು.

1999ರ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್‌ ಪುನಃ ಮಧುಗಿರಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಜಯಗಳಿಸಿ ಎರಡನೇ ಬಾರಿಗೆ ಶಾಸನಸಭೆಗೆ ಆಯ್ಕೆಯಾಗುತ್ತಾರೆ. ಆ ಚುನಾವಣೆಯಲ್ಲಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗಂಗಹನುಮಯ್ಯ ಅವರು ಪರಾಭವಗೊಳಿಸಿದ್ದರು. ಪರಮೇಶ್ವರ್‌ ಆ ಚುನಾವಣೆಯಲ್ಲಿ 71 ಸಾವಿರದ 895 ಮತಗಳನ್ನು ಪಡೆದಿದ್ದರು.

2004ರಲ್ಲಿ ನಡೆದ ಚುನಾವಣೆಯಲ್ಲಿ ಪರಮೇಶ್ವರ್‌ ಅವರು ಪುನರ್‌ ಆಯ್ಕೆಯಾಗುತ್ತಾರೆ. ಆಗ ನಡೆದ ಚುನಾವಣೆಯಲ್ಲಿ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್‌. ಕೆಂಚಮಾರಯ್ಯ ಅವರು ಪರಾಭವಗೊಳಿಸಿದ್ದರು. ಪರಮೇಶ್ವರ್‌ ಆ ಚುನಾವಣೆಯಲ್ಲಿ 47 ಸಾವಿರದ 39 ಮತಗಳನ್ನು ಪಡೆದು ಮೂರನೇ ಬಾರಿಗೆ ಆಯ್ಕೆಯಾದರು.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾಗಿ ಮಧುಗಿರಿ ಮೀಸಲು ಕ್ಷೇತ್ರ ರದ್ದಾಗಿ ಕೊರಟಗೆರೆ ಮೀಸಲು ಕ್ಷೇತ್ರವಾಯಿತು. ಆ ಚುನಾವಣೆಯಲ್ಲಿ ಪರಮೇಶ್ವರ್‌ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವಾಲೆ ಚಂದ್ರಯ್ಯ ಅವರನ್ನು ಪರಾಭವಗೊಳಿಸಿ ನಾಲ್ಕನೇ ಬಾರಿಗೆ ಆಯ್ಕೆಯಾದರು. ಆ ಚುನಾವಣೆಯಲ್ಲಿ ಪರಮೇಶ್ವರ್‌ 49 ಸಾವಿರದ 276 ಮತಗಳನ್ನು ಪಡೆದಿದ್ದರು.

2013ರ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದ ಪರಮೇಶ್ವರ್‌ ಜೆಡಿಎಸ್‌ನ ಸುಧಾಕರಲಾಲ್‌ ವಿರುದ್ಧ ಪರಾಭವಗೊಂಡರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು. ಆದರೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರಿಂದ ಮುಖ್ಯಮಂತ್ರಿ ರೇಸ್‌ನಂದ ಹೊರಬಿದ್ದರು. 2018 ರ ಚುನಾವಣೆಯಲ್ಲಿ ಮತ್ತೆ ಜೆಡಿಎಸ್‌ನ ಸುಧಾಕರಲಾಲ್‌ ವಿರುದ್ಧ ಜಯಭೇರಿ ಬಾರಿಸಿ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

ಇನ್ನು ಟಿ.ಬಿ. ಜಯಚಂದ್ರ ಅವರು 1978ರ ಚುನಾವಣೆಯಲ್ಲಿ ಕಳ್ಳಂಬೆಳ್ಳ ಕ್ಷೇತ್ರದಿಂದ ಸ್ಪರ್ಧಿಸಿ ಪಿ. ಮೂಡ್ಲೇಗೌಡ ವಿರುದ್ಧ ಜಯಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಆ ಚುನಾವಣೆಯಲ್ಲಿ ಜಯಚಂದ್ರ 27645 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದರು.

1983ರ ಚುನಾವಣೆಯಲ್ಲಿ ಜಯಚಂದ್ರ ಅವರು ಜೆಎನ್‌ಪಿ ಪಕ್ಷದ ಗಂಗಣ್ಣ ವಿರುದ್ಧ ಪರಾಭವಗೊಂಡಿದ್ದರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಟಿ.ಬಿ. ಜಯಚಂದ್ರ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಎರಡನೇ ಬಾರಿಗೆ ಶಾಸನಸಭೆಗೆ ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ಅವರು 37844 ಮತಗಳನ್ನು ಪಡೆದು ಜನತಾದಳದ ಗಂಗಣ್ಣ ಅವರನ್ನು ಸೋಲಿಸಿದ್ದರು.

1994ರಲ್ಲಿ ಟಿ.ಬಿ. ಜಯಚಂದ್ರ ಅವರು ಪುನರ್‌ ಆಯ್ಕೆಯಾದರು. ಅಂದು ನಡೆದ ಚುನಾವಣೆಯಲ್ಲಿ ಅವರು ಜನತಾದಳದ ಗಂಗಣ್ಣ ವಿರುದ್ಧ ವಿಜಯಿಯಾಗಿದ್ದರು. ಆ ಚುನಾವಣೆಯಲ್ಲಿ ಅವರು 28729 ಮತಗಳನ್ನು ಪಡೆದಿದ್ದರು. 1999ರ ಚುನಾವಣೆಯಲ್ಲಿ ಕಳ್ಳಂಬೆಳ್ಳದಿಂದ ನಾಲ್ಕನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. ಆ ಚುನಾವಣೆಯಲ್ಲಿ ಅವರು 44480 ಮತಗಳನ್ನು ಪಡೆದು ಬಿಜೆಪಿಯ ಕಿರಣಕುಮಾರ್‌ ವಿರುದ್ಧ ಗೆಲುವು ಸಾಧಿಸಿದರು.

2004ರ ಚುನಾವಣೆಯಲ್ಲಿ ಕೆ.ಎಸ್‌. ಕಿರಣಕುಮಾರ್‌ ವಿರುದ್ಧ ಪರಾಭವಗೊಂಡಿದ್ದರು. 2008ರ ಚುನಾವಣೆಯಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಕಾರಣ ಕಳ್ಳಂಬೆಳ್ಳ ಕ್ಷೇತ್ರ ಇಲ್ಲವಾಯ್ತು. ಹೀಗಾಗಿ ಶಿರಾಕ್ಕೆ ವಲಸೆ ಬಂದು ಗೆಲುವು ಸಾಧಿಸಿದ್ದರು. ಆಗ ನಡೆದ ಚುನಾವಣೆಯಲ್ಲಿ ಟಿ.ಬಿ. ಜಯಚಂದ್ರ ಅವರು 60793 ಮತಗಳನ್ನು ಪಡೆದು ಜೆಡಿಎಸ್‌ನ ಬಿ. ಸತ್ಯನಾರಾಯಣ ವಿರುದ್ಧ ಗೆಲುವು ಸಾಧಿಸಿದ್ದರು. 2013 ರ ಚುನಾವಣೆಯಲ್ಲೂ ಕೂಡ ಅವರು ಜೆಡಿಎಸ್‌ನ ಬಿ. ಸತ್ಯನಾರಾಯಣ ವಿರುದ್ಧ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ಅವರು 74089 ಮತಗಳನ್ನು ಪಡೆದಿದ್ದರು. 2018 ರ ಚುನಾವಣೆ ಬಳಿಕ ನಡೆದ ಉಪಚುನಾವಣೆಯಲ್ಲಿ ಅವರು ಪರಾಭವಗೊಂಡಿದ್ದಾರೆ.

ಇನ್ನು ತುಮಕೂರು ವಿಧಾನಸಭಾ ಕ್ಷೇತ್ರದಿಂದ ಸೊಗಡು ಶಿವಣ್ಣ ಅವರು ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಹಾಗೆಯೇ ಗುಬ್ಬಿ ಕ್ಷೇತ್ರದಿಂದ ಎಸ್‌.ಆರ್‌. ಶ್ರೀನಿವಾಸ್‌ ಕೂಡ ಸತತ ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 1994, 1999, 2004, 2008 ರ ಚುನಾವಣೆಯಲ್ಲಿ ಸೊಗಡು ಶಿವಣ್ಣ ಅವರು ಸತತ ಮೂರು ಬಾರಿ ಶಫಿ ಅಹಮದ್‌ ಹಾಗೂ ಒಂದು ಬಾರಿ ರಫೀಕ್‌ ಅಹಮದ್‌ ವಿರುದ್ಧ ಗೆಲುವು ಸಾಧಿಸಿದ್ದರು. ಹಾಗೆಯೇ ಎಸ್‌.ಆರ್‌. ಶ್ರೀನಿವಾಸ್‌ ಅವರು ಗುಬ್ಬಿ ಕ್ಷೇತ್ರದಿಂದ ಸತತವಾಗಿ ಅಂದರೆ 2004, 2008, 2013 ಹಾಗೂ 2018ರಲ್ಲಿ ಜಯಸಾಧಿಸಿದ್ದರು. ಮೊದಲ ಬಾರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರೆ ಮೂರು ಅವಧಿಗೆ ಜೆಡಿಎಸ್‌ನಿಂದ ಗೆದ್ದಿದ್ದರು. ಅತಿ ಹೆಚ್ಚು ಬಾರಿ ಆಯ್ಕೆಯಾದ ಇವರೆಲ್ಲರೂ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು. ಈ ಪೈಕಿ ಪರಮೇಶ್ವರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಬಳಿಕ ಡಿಸಿಎಂನಂತಹ ಉನ್ನತ ಹುದ್ದೆಯನ್ನು ಏರಿದ್ದರು.

click me!