Tumakur : ಒಂದೇ ದಿನ 35 ಮಂದಿ ನಾಮಪತ್ರ ಸಲ್ಲಿಕೆ

By Kannadaprabha News  |  First Published Apr 18, 2023, 5:38 AM IST

  ತುಮಕೂರು ಜಿಲ್ಲೆಯಲ್ಲಿ ಸೋಮವಾರ 35 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ 2, ತಿಪಟೂರಿನಲ್ಲಿ 4, ತುರುವೇಕೆರೆಯಲ್ಲಿ 4, ಕುಣಿಗಲ್‌ನಲ್ಲಿ 5, ತುಮಕೂರು ನಗರದಲ್ಲಿ 2, ಕೊರಟಗೆರೆಯಲ್ಲಿ 4, ಗುಬ್ಬಿ 3, ಶಿರಾ 7, ಪಾವಗಡ 3, ಮಧುಗಿರಿ 3 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.


 ತುಮಕೂರು :  ತುಮಕೂರು ಜಿಲ್ಲೆಯಲ್ಲಿ ಸೋಮವಾರ 35 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ 2, ತಿಪಟೂರಿನಲ್ಲಿ 4, ತುರುವೇಕೆರೆಯಲ್ಲಿ 4, ಕುಣಿಗಲ್‌ನಲ್ಲಿ 5, ತುಮಕೂರು ನಗರದಲ್ಲಿ 2, ಕೊರಟಗೆರೆಯಲ್ಲಿ 4, ಗುಬ್ಬಿ 3, ಶಿರಾ 7, ಪಾವಗಡ 3, ಮಧುಗಿರಿ 3 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಕುಣಿಗಲ… ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ರಂಗನಾಥ್‌ ಅವರು ಕುಣಿಗಲ… ಪಟ್ಟಣದಲ್ಲಿ ರೋಡ್‌ ಶೋ ಮೂಲಕ ಬೆಳಗ್ಗೆ 11.30ಕ್ಕೆ ಬಂದು ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ರಾಮಸ್ವಾಮಿಗೌಡ ಕೂಡ ರೋಡ್‌ ಶೋ ಮೂಲಕ ಮಧ್ಯಾಹ್ನ 2 ಗಂಟೆಗೆ ನಾಮಪತ್ರ ಸಲ್ಲಿಸಿದ್ದಾರೆ.

Tap to resize

Latest Videos

ಗುಬ್ಬಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ನಾಗರಾಜು ಅವರು ಮಧ್ಯಾಹ್ನ 2 ಗಂಟೆಗೆ ಗುಬ್ಬಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಇನ್ನು ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ…ಕುಮಾರ್‌ ಅವರು ಪಟ್ಟಣದಲ್ಲಿ ರೋಡ್‌ ಶೋ ಮೂಲಕ ಬೆಳಗ್ಗೆ 10.30ಕ್ಕೆ ಕೊರಟಗೆರೆ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಪಾವಗಡ ಕ್ಷೇತ್ರದ ಪಕ್ಷದ ಅಭ್ಯರ್ಥಿ ನಾಗೇಂದ್ರ ಅವರು ರೋಡ್‌ ಶೋ ಮೂಲಕ ಬೆಳಗ್ಗೆ 11 ಗಂಟೆಗೆ ಪಾವಗಡ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಅವರು ಕೂಡ ಮಧ್ಯಾಹ್ನ 12 ಗಂಟೆಗೆ ರೋಡ್‌ ಶೋ ಮೂಲಕ ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಡಿಸಿ ಗೌರಿಶಂಕರ್‌ ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ತುರುವೇಕೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಸಾಲೆ ಜಯರಾಮ… ನಾಮಪತ್ರ ಸಲ್ಲಿಸಿದ್ದಾರೆ. ತಿಪಟೂರು ಕ್ಷೇತ್ರದ ಜೆಡಿಎಸ್‌ ಬಂಡಾಯ ಅಭ್ಯರ್ಥಿ ಬಂಡೆ ರವಿ ಅವರು ಬೆಳಗ್ಗೆ 10 ಗಂಟೆಗೆ ತಿಪಟೂರು ಪಟ್ಟಣದಲ್ಲಿ ರೋಡ್‌ ಶೋ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ.

ನಗರದ ಕೆಂಪಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಅಭಿಮಾನಿಗಳಿಂದ ನಗರದ ಬಿ.ಎಚ್‌. ರಸ್ತೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಅನಿಲ…ಕುಮಾರ್‌ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಕುಣಿಗಲ… ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಮಾಜಿ ಶಾಸಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಬಿ.ರಾಮಸ್ವಾಮಿಗೌಡ ಚುನಾವಣಾ ಅಧಿಕಾರಿಗಳಿಗೆ ಕಾಂಗ್ರೆಸ್‌ ಬಂಡಾಯ (ಪಕ್ಷೇತರ) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಪಕ್ಷದಿಂದ ಡಿ. ಕೃಷ್ಣಕುಮಾರ್‌ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿ ರಾಜ್ಯದಲ್ಲಿ ಕ್ಷೇತ್ರದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ . ಪಕ್ಷದ ಗೆಲುವಿಗಾಗಿ ಎಲ್ಲಾ ಮುಖಂಡರು ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದರು. ತುಮಕೂರು ನಗರದಿಂದ ಜೆಡಿಎಸ್‌ ಅಭ್ಯರ್ಥಿ ಗೋವಿಂದರಾಜು, ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್‌ ನಾಮಪತ್ರ ಸಲ್ಲಿಸಿದರು.

click me!