'ಕೋಡಿಹಳ್ಳಿ ಚಂದ್ರಶೇಖರ್ ಖಾಕಿ ಬಟ್ಟೆ ಹಾಕಿಕೊಳ್ಳಲಿ'

By Kannadaprabha NewsFirst Published Dec 16, 2020, 10:20 AM IST
Highlights

ಕೋಡಿಹಳ್ಳಿ ಚಂದ್ರಶೇಖರ್ ಅವರು ಖಾಕಿ ಬಟ್ಟೆ ಹಾಕಿಕೊಳ್ಳಲಿ ಎಂದು ಹೇಳಲಾಗಿದೆ. ಪ್ರತಿಭಟನೆಗೆ ಸಾಥ್ ನೀಡಿದ್ದ ಕೋಡಿಹಳ್ಳಿ  ಬಗ್ಗೆ ಈ ಹೇಳಿಕೆ ನೀಡಲಾಗಿದೆ. 

ಹಾಸನ (ಡಿ.16):  ಸಾರಿಗೆ ನೌಕರರ ಮುಷ್ಕರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ಭಾಗಿ ವಿಚಾರವಾಗಿ ಮಾತನಾಡಿದ ಎಚ್‌.ಡಿ.ರೇವಣ್ಣ, ರೈತರ ಜೊತೆ ಪ್ರತಿಭಟನೆ ಮಾಡುವಾಗ ಹಸಿರು ಶಾಲು ಹಾಕಿಕೊಳ್ಳಲಿ ಎಂದರು. 

ಹಾಸನದಲ್ಲಿ ಮಾತನಾಡಿದ ಎಚ್ ಡಿ ರೇವಣ್ಣ,  ಸಾರಿಗೆ ನೌಕರರು ಧರಣಿ ನಡೆಸುವಾಗ ಖಾಕಿ ಬಟ್ಟೆಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲಿ ಎಂದು ಮುಖ್ಯಮಂತ್ರಿಗಳು ಕೋಡಿಹಳ್ಳಿ ಚಂದ್ರಶೇಖರ್‌ಗೆ ಹೇಳಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ವ್ಯಂಗ್ಯವಾಡಿದರು.

ಕೇಸ್ ಹಾಕ್ತಿನಿ ಎಂದು ಜೆಡಿಎಸ್‌ನವರ ವಿರುದ್ಧವೇ ರೇವಣ್ಣ ಎಚ್ಚರಿಕೆ

ರೈತರ ಪರಿಸ್ಥಿತಿಯನ್ನು ಕೇಳುವವರಿಲ್ಲ. ರೈತರ ಬೇಡಿಕೆಗಳನ್ನೇ ಈಡೇರಿಸಲು ಆಗಿಲ್ಲ. ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಮಾಡುವ ಬಗ್ಗೆ ಮುಷ್ಕರ ನಡೆದಿದೆ. ಮುಂದೊಂದು ದಿನ ಡೇರಿ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಣೆ ಮಾಡಲಿ. 

ರೈತರು ಹಾಲು ಹಾಕುತ್ತಾರೆ, ಡೇರಿ ಕಾರ್ಯದರ್ಶಿಯನ್ನು ಸರ್ಕಾರಿ ನೌಕರರನ್ನಾಗಿ ಮಾಡಲಿ ಎಂದ ಅವರು, ಸಾರಿಗೆ ನೌಕರರನ್ನು ಕಾಯಂ ಮಾಡಿ ಎನ್ನುವ ಬೇಡಿಕೆ ತಪ್ಪು. ಎಲ್ಲದಕ್ಕೂ ಒಂದು ಲಿಮಿಟ್‌ ಇದೆ. ಮೂರು ಸಾವಿರಕ್ಕೆ ಕಾರ್ಯದರ್ಶಿ ಹಾಲು ಅಳೆಸುತ್ತಿದ್ದಾರೆ. ಅವರನ್ನು ಕಾಯಂ ಮಾಡಲಿ, ಅಂಗನವಾಡಿ ನೌಕರರನ್ನು ಕಾಯಂ ಮಾಡಲಿ ಎಂದು ಸಲಹೆ ನೀಡಿದರು.

click me!