ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಜನಿಸಿದಾಗ ಬದಲಾಗಿತ್ತು ಎಚ್ ಡಿ ದೇವೇಗೌಡರ ದೆ. ಏನಾಗಿತ್ತು. ?
ಹಾಸನ (ಡಿ.16): ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಇನ್ನೂ ರಾಜಕೀಯಕ್ಕೆ ಪ್ರವೇಶ ಪಡೆದಿರಲಿಲ್ಲ.
ಅಪ್ಪಟ ಒಣ ಭೂಂಈ ಪ್ರದೇಶ ಹರದನಹಳ್ಳಿಯಲ್ಲಿ ದೇವೇಗೌಡರ ವಾಸ್ತವ್ಯವಿತ್ತು. ವೃತ್ತಿಯಿಂದ ಪಿಡಬ್ಲ್ಯೂ ಡಿ ಗುತ್ತಿಗೆದಾರರಾಗಿದ್ದ ದೇವೇಗೌಡರಿಗೆ ಅಂದು ರಾಜಕೀಯ ಆಕಾಂಕ್ಷೆಗಳು ಇರಲಿಲ್ಲ.
undefined
ಇಂತಹ ಸಂದರ್ಭದಲ್ಲಿ ಅವರ ಪತ್ನಿ ಚೆನ್ನಮ್ಮ ಅವರಿಗೆ 16 ಡಿಸೆಂಬರ್ 1956 ರಂದು ಕುಮಾರಸ್ವಾಮಿ ಮೂರನೇ ಮಗುವಾಗಿ ಜನಿಸಿದರು.
'ಶೀಘ್ರ ಕುಮಾರಸ್ವಾಮಿಗೆ ಸಿಎಂ ಪಟ್ಟ : ಅಲ್ಲಿಂದಲೇ ಬಂತು ಹೇಳಿಕೆ' ...
ಆಗ ಜಾತಕ ಕೇಳಲು ಕು ಪುರೋಹಿತರ ಬಳಿ ಹೋದಾಗ ದೇವೇಗೌಡರಿಗೆ ಅಚ್ಚರಿ ಕಾದಿತ್ತು. ಕುಮಾರಸ್ವಾಮಿ ಜನಿಸಿದ ಘಳಿಗೆ ನೋಡಿದ ಪುರೋಹಿತರು ಈತ ರಾಜಯೋಗದಲ್ಲಿ ಜನಿಸಿದ್ದಾನೆ. ಮುಂದೆ ನಾಡು ಮೆಚ್ಚುನ ಮಗುವಾಗಿ ಬೆಳೆಯುತ್ತಾನೆ ಎಂದಿದ್ದರು.
ಅಂತೆಯೇ ಮುಂದೆ ಕುಮಾರಸ್ವಾಮು ಜನನಾಯಕರಾಗಿ ಬೆಳೆದರು. ಮಗ ರಾಜಯೋಗದಲ್ಲಿ ಹುಟ್ಟಿದ್ದರಿಂದ ಮುಂದೆ ಏನಾಗುತ್ತಾನೆ ಎಂಬ ಕುತೂಹಲ ಇರಲಿಲ್ಲ.
ಆದರೆ ಕುಮಾರಸ್ವಾಮಿ ಹುಟ್ಟಿದ ನಾಲ್ಕೇ ವರ್ಷಕ್ಕೆ ದೇವೇಗೌಡರು ರಾಜಕೀಯ ಪ್ರವೇಶಿಸಿದರು. ಮೊದಲ ಪ್ರವೇಶದಲ್ಲೇ ತಾಲೂಕು ಬೋರ್ಡ್ ಸದಸ್ಯರಾಗಿ ಆಯ್ಕೆಯಾದರು.
1962ರಲ್ಲಿ ದೇವೇಗೌಡರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ನಂತರ ಹಿಂದಿರುಗಿ ನೋಡಲೇ ಇಲ್ಲ.