ಜಮೀರ್‌ ಅಹಮದ್‌ಗೆ ಖಡಕ್ ವಾರ್ನಿಂಗ್ : 'ಕ್ಷಮೆ ಕೇಳಿ-ಪರಿಣಾಮ ಗಂಭೀರವಾಗುತ್ತೆ'

By Kannadaprabha NewsFirst Published Apr 10, 2021, 12:16 PM IST
Highlights

ಅನ್ಯ ಚಟುವಟಿಕೆ ಮಾಡ್ಕೊಂಡಿದ್ದ ಜಮೀರ್‌ ಅಹಮದ್ ಅವರನ್ನ ರಾಜಕೀಯಕ್ಕೆ ಕರೆತಂದಿದ್ದೆ  ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ. ಅವರ  ಬಗ್ಗೆ ಮಾತನಾಡುವ ಮೊದಲು ಯೋಚನೆ ಮಾಡಲಿ. ಪರಿಣಾಮ ಗಂಭೀರವಾಗಿರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. 

ಬೆಂಗಳೂರು (ಏ.10):   ಕುಮಾರಸ್ವಾಮಿ ಟೀಕಿಸುವ ನೈತಿಕತೆ ಜಮೀರ್ ಗೆ ಇಲ್ಲ.  ಕೂಡಲೇ ಕ್ಷಮೆ ಕೇಳದಿದ್ದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಾಗಮಂಗಲ JDS ಶಾಸಕ ಸುರೇಶ್ ಗೌಡ  ಎಚ್ಚರಿಕೆ ನೀಡಿದ್ದಾರೆ. 

ನಾಗಮಂಗಲದಲ್ಲಿಂದು ಮಾತನಾಡಿದ ಸುರೇಶ್ ಗೌಡ ಅನ್ಯ ಚಟುವಟಿಕೆಗಳಲ್ಲಿದ್ದ ವ್ಯಕ್ತಿಯನ್ನ ರಾಜ್ಯ ಮಟ್ಟದ ನಾಯಕರನನ್ನಾಗಿ ಮಾಡಿದ್ಯಾರು ಎಂಬುದನ್ನ ಮರೆತಿದ್ದಾರೆ. ಕುಮಾರಸ್ವಾಮಿ ಹೆಸರೇಳಿಕೊಂಡು ಗೆದ್ದು ಅಧಿಕಾರಕ್ಕೆ ಬಂದವರು ಜಮೀರ್. ಜನರ ತೀರ್ಮಾನವನ್ನೇ ಮಾರಾಟ ಮಾಡಿಕೊಂಡವರಿಗೆ ಎಚ್ ಡಿಕೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಕ್ ಪ್ರಹಾರ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದವರಿಗೂ ಜಮೀರ್ ಅವಶ್ಯಕತೆ ಇದೆ. ಹಾಗಾಗಿ ಸೇರಿಸಿಕೊಂಡಿದ್ದಾರೆ.  ಸರ್ಕಸ್ ನಲ್ಲಿ ಮಧ್ಯ ಮಧ್ಯ ಕೆಲ ವೇಷ ಬಂದು ಹೋಗುವ ಹಾಗೆ ಇವರನ್ನು ಬಿಡುತ್ತಾರೆ ಎಂದು ಪರೋಕ್ಷವಾಗಿ ಜಮೀರ್ ಕಾಮಿಡಿ  ಎಂದು ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ. 

ಕುಮಾರಸ್ವಾಮಿಗೆ 'ಕರಿಯ' ಎಂದ ಜಿಗರ್‌ಥಂಡಾ, ಡೊಂಕು ಬಾಲ, ಹರಕು ಬಾಯಿ ಜಮೀರ್..!

ಎಚ್ ಡಿ ಕೆ ಪ್ರೀತಿಸುವ ಎಲ್ಲಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ.  ಗೌರವವಿದ್ದರೆ ಕುಮಾರಸ್ವಾಮಿ ಬಳಿ ಕ್ಷಮೆ ಕೇಳಬೇಕು.  ಇಲ್ಲವಾದೆ ಪ್ರತೀ ಕ್ಷೇತ್ರಕ್ಕೆ ಹೋದಾಗಲೂ ಪರಿಣಾಮ ಎದುರಿಸಬೇಕಾಗುತ್ತದೆ.  

ಜಮೀರ್ ಅಂಡ್ ಟೀಮ್ ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡಿದರೆ ಸ್ಟೇಟ್ ಲೀಡರ್ ಅಂದುಕೊಂಡಿದ್ದಾರೆ. ಆದ್ದರಿಂದ ತಾವು ದೊಡ್ಡವರೆಂದು ತೋರಿಸಿಕೊಳ್ಳಲು ಇಂತಹ ಹೇಳಿಕೆ ನೀಡುತ್ತಿರುತ್ತಾರೆ ಎಂದು ಸುರೇಶ್ ಗೌಡ ವಾಗ್ದಾಳಿ ನಡೆಸಿದರು. 

click me!