ಬಸ್‌ ಸ್ಟ್ರೈಕ್‌: ಹುಬ್ಬಳ್ಳಿಯಲ್ಲಿ ಉಚಿತ ಬಸ್‌ ಸೇವೆ..!

Kannadaprabha News   | Asianet News
Published : Apr 10, 2021, 12:11 PM ISTUpdated : Apr 10, 2021, 12:14 PM IST
ಬಸ್‌ ಸ್ಟ್ರೈಕ್‌: ಹುಬ್ಬಳ್ಳಿಯಲ್ಲಿ ಉಚಿತ ಬಸ್‌ ಸೇವೆ..!

ಸಾರಾಂಶ

ಮುಷ್ಕರ ಕೊನೆಯಾಗುವವರೆಗೂ ಈ ಬಸ್‌ ಓಡಾಟ| ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಪಾಟೀಲ ಕಾನ್ವೆಂಟ್‌ ಶಾಲೆಯಿಂದ ರೋಗಿಗಳಿಗೆ ಉಚಿತ ಬಸ್ ಸೇವೆ| ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 6ರವರೆಗೆ ಈ ಸಾರಿಗೆ ಸೇವೆ ಲಭ್ಯ| 

ಹುಬ್ಬಳ್ಳಿ(ಏ.10): ಸಾರಿಗೆ ನೌಕರರ ಮುಷ್ಕರದಿಂದಾಗಿ ಕಿಮ್ಸ್‌ಗೆ ಬರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಶ್ರೀ ಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಪಾಟೀಲ ಕಾನ್ವೆಂಟ್‌ ಶಾಲೆಯಿಂದ ಸಿಬಿಟಿಯಿಂದ ಕಿಮ್ಸ್‌ವರೆಗೆ ಉಚಿತ ಬಸ್‌ ಸೇವೆಯನ್ನು ಶುಕ್ರವಾರದಿಂದ ಪ್ರಾರಂಭಿಸಲಾಗಿದೆ.

ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 6ರವರೆಗೆ ಈ ಸಾರಿಗೆ ಸೇವೆ ಲಭ್ಯವಿದೆ. ಆಸ್ಪತ್ರೆಗೆ ತೆರಳುವವ ರೋಗಿಗಳು, ಸಿಬಿಟಿ, ಚೆನ್ನಮ್ಮ ವೃತ್ತ, ಹಳೇ ಬಸ್‌ ನಿಲ್ದಾಣ, ಹೊಸೂರು ಸರ್ಕಲ್‌, ಹೊಸೂರು ಬಸ್‌ ನಿಲ್ದಾಣಗಳಿಂದ ಸೇವೆ ಪಡೆದುಕೊಳ್ಳಬಹುದಾಗಿದೆ.

4ನೇ ದಿನಕ್ಕೆ ಸಾರಿಗೆ ಮುಷ್ಕರ: ಖಾಸಗಿ ಬಸ್ಸುಗಳ ದರ್ಬಾರ್, KSRTC ಸಿಬ್ಬಂದಿ ಅಮಾನತು

ಸಾರಿಗೆ ನೌಕರರ ಮುಷ್ಕರ ಕೊನೆಗೊಳ್ಳುವವರೆಗೂ ಸಿಬಿಟಿಯಿಂದ ಕಿಮ್ಸ್‌ ಆಸ್ಪತ್ರೆವರೆಗೆ ಉಚಿತ ಬಸ್‌ ಸಂಚಾರ ನೀಡಲಾಗುತ್ತದೆ. ಬೇರೆ, ಬೇರೆ ಜಿಲ್ಲೆ, ತಾಲೂಕುಗಳಿಂದ ಬರುವ ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಸೇವೆ ಸಲ್ಲಿಸಲಾಗುತ್ತಿದೆ ಎಂದು ಪಾಟೀಲ ಕಾನ್ವೆಂಟ್‌ ಶಾಲೆಯ ಸಂಸ್ಥಾಪಕ ಶಿವನಗೌಡ ರುದ್ರಗೌಡ ಪಾಟೀಲ ತಿಳಿಸಿದ್ದಾರೆ.
 

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ