ಆ ಮುಖಂಡನ ಅಕ್ರಮ ಚರಿತ್ರೆ ದಾಖಲೆಯೇ ನನ್ನಲ್ಲಿದೆ : ಜೆಡಿಎಸ್ ಶಾಸಕರ ಸ್ಫೋಟಕ ಹೇಳಿಕೆ

Kannadaprabha News   | Asianet News
Published : Jan 28, 2021, 11:41 AM IST
ಆ ಮುಖಂಡನ ಅಕ್ರಮ ಚರಿತ್ರೆ ದಾಖಲೆಯೇ ನನ್ನಲ್ಲಿದೆ : ಜೆಡಿಎಸ್ ಶಾಸಕರ ಸ್ಫೋಟಕ ಹೇಳಿಕೆ

ಸಾರಾಂಶ

ಜೆಡಿಎಸ್ ಮುಖಂಡರೋರ್ವರು ಮಂಡ್ಯದ ಮತ್ತೋರ್ವ ಮುಖಂಡಗೆ ಬಹಿರಮಗ ಸವಾಲು ಹಾಕಿದ್ದಾರೆ. ಅವರ ಅಕ್ರಮ ಚರಿತ್ರೆ ದಾಖಲೆಗಳೇ ನನ್ನಲ್ಲಿವೆ ಎಂದು ಹೇಳಿದ್ದಾರೆ. 

 ಶ್ರೀರಂಗಪಟ್ಟಣ (ಜ.28):  ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡರ ಅಕ್ರಮ ಚರಿತ್ರೆಗೆ ಸಂಬಂಧಿಸಿದ ಕಂತೆ ಕಂತೆ ದಾಖಲೆಗಳು ನನ್ನ ಬಳಿ ಇವೆ. ನಾನೇನಾದರೂ ಅಕ್ರಮವೆಸಗಿದ್ದಲ್ಲಿ ಕಾನೂನಾತ್ಮಕ ಹೋರಾಟಕ್ಕೆ ಧುಮುಕಲಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಅವರಿಗೆ ಬಹಿರಂಗ ಸವಾಲು ಹಾಕಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘ ಹಾಗೂ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ, ಜೆಡಿಎಸ್‌ ದೋಸ್ತಿ ಖಚಿತ: ಹೊರಟ್ಟಿ ಸಭಾಪತಿ!

ನನ್ನ ರಾಜಕೀಯ ಜೀವನ ಬಿಳಿ ಹಾಳೆ ಇದ್ದ ಹಾಗೆ ಪರಿಶುದ್ಧ. 420 ಕೇಸ್‌ ಅಡಿ ಜಾಮೀನು ಪಡೆದು ಓಡಾಡುತ್ತಿರುವ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ನನ್ನ ವಿರುದ್ಧ ಆರೋಪ ಮಾಡುವ ಮುನ್ನ ತನ್ನ ಜೀವನ ಚರಿತ್ರೆಯನ್ನೊಮ್ಮೆ ನೆನಪಿಸಿಕೊಳ್ಳಲಿ ಎಂದು ಗುಡುಗಿದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ:

ಅರಕೆರೆ ಮುಖ್ಯ ರಸ್ತೆ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ರಮೇಶ್‌ ಬಂಡಿಸಿದ್ದೇಗೌಡ, ತಾವು ಶಾಸಕರಾಗಿದ್ದ ಅವಧಿಯಲ್ಲಿ ಸರ್ಕಾರಕ್ಕೆ ವಂಚಿಸಿ ಎಷ್ಟುಜಿ-ಕ್ಯಾಟೆಗರಿ ಸೈಟುಗಳನ್ನು ತಮಗೆ ಹಾಗೂ ಕುಟುಂಬದವರಿಗೆ ಕೊಡಿಸಿದ್ದಾರೆ. ಜೊತೆಗೆ ದರ್ಖಾಸು ಕಮಿಟಿಯಲ್ಲಿ ಬಡವರಿಗೆ ಜಮೀನು ಮಂಜೂರು ಮಾಡಿ ಬಳಿಕ ತಾನೇ ಆ ಜಾಗವನ್ನು ಕಬಳಿಸಿರುವ ಬಗ್ಗೆ ಕೇಸ್‌ ದಾಖಲುಗೊಂಡಿರುವುದನ್ನು ಮರೆತಂತಿದೆ ಎಂದು ವ್ಯಗ್ಯವಾಡಿದರು.

ಬಿಜೆಪಿ -ಜೆಡಿಎಸ್ ದೋಸ್ತಿ : ಪಟ್ಟ ಬಿಟ್ಟುಕೊಡಲು ಕಮಲ ಪಾಳಯ ಒಪ್ಪಿಗೆ?

ಅಕ್ರಮ ಕಲ್ಲುಗಣಿಗಾರಿಕೆಗೆ ಕ್ರಮ ತೆಗೆದುಕೊಳ್ಳಿ: ತಾಲ್ಲೂಕಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮವಾಗಿ ನಡೆಯುತ್ತಿರುವ ದೊಡ್ಡ ದೊಡ್ಡ ಕ್ರಷರ್‌ ಗಳ ವಿರುದ್ದ ಕ್ರಮ ಕೈಗೊಳ್ಳದ ಅಧಿಕಾರಿಗಳು, ನೆಪ ಮಾತ್ರಕ್ಕೆ ಸಣ್ಣ-ಪುಟ್ಟಕ್ರಷರ್‌ಗಳ ಮೇಲೆ ದಾಳಿಯಿಟ್ಟು ಅವರ ಟ್ರಾಕ್ಟರ್‌ ಇನ್ನಿತರೆ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ. ಕಾಟಾಚಾರಕ್ಕೆ ದಾಳಿ ಮಾಡುತ್ತಿರುವ ಅಧಿಕಾರಿಗಳನ್ನು ಇನ್ನು ಮುಂದೆ ಮೇಲಿಂದ ಮೇಲೆ ಕಾನೂನು ಕ್ರಮಗಳ ಬಗ್ಗೆ ವರದಿ ಪಡೆದು ಅಕ್ರಮ ಕಲ್ಲು ಗಣಿಗಾರಿಕೆಗಳಿಗೆ ಬ್ರೇಕ್‌ ಹಾಕುವುದಾಗಿ ಶಾಸಕರು ಭರವಸೆ ನೀಡಿದರು.

ಕ್ರೀಡಾಂಗಣ ಅಭಿವೃದ್ಧಿಗೆ ಒತ್ತು: ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಗೆ 50 ಲಕ್ಷ ರು. ಬಿಡುಗಡೆ ಮಾಡುವಂತೆ ಸಂಬಂಧಪಟ್ಟಇಲಾಖೆಗೆ ಪತ್ರ ಬರೆಯಲಾಗಿದೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಬಿಡುಗಡೆಯಾಗಿದ್ದ 40 ಲಕ್ಷ ರು. ಹಣವನ್ನು ಅಂದಿನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಮ್ಮ ಕ್ಷೇತ್ರಕ್ಕೆ ಕೊಂಡೊಯ್ದರೆಂದು ಬೇಸರ ವ್ಯಕ್ತಪಡಿಸಿದರಲ್ಲದೆ, ತಾಲೂಕಿನ ಏಕೈಕ ಕ್ರೀಡಾಂಗಣ ಅಭಿವೃದ್ಧಿ ಆಗಬೇಕಿದ್ದು, ಅಭಿವೃದ್ಧಿಗೆ ತುರ್ತು ಕ್ರಮ ವಹಿಸುವ ಭರವಸೆ ನೀಡಿದರು.

PREV
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು