ಸ್ತನ ಕ್ಯಾನ್ಸರ್‌ಗೆ ಸಿದ್ಧವಾಯ್ತು ಔಷಧ : ಈ ಬೀಜದಿಂದ ನಿವಾರಣೆ

Kannadaprabha News   | Asianet News
Published : Jan 28, 2021, 11:27 AM IST
ಸ್ತನ ಕ್ಯಾನ್ಸರ್‌ಗೆ ಸಿದ್ಧವಾಯ್ತು ಔಷಧ :  ಈ ಬೀಜದಿಂದ ನಿವಾರಣೆ

ಸಾರಾಂಶ

ಮಹಿಳೆಯರನ್ನು ಕಾಡುವ ಮಾರಕ ಸ್ತನ ಕ್ಯಾನ್ಸರ್‌ಗೆ ಇದೀಗ ಔಷಧ ಸಿದ್ಧವಾಗಿದೆ. ಯಾವುದೇ ಅಡ್ಡಪರಿಣಾಮ ಇಲ್ಲ ಈ ಬೀಜದಿಂದಲೇ ಕಾಯಿಲೆ ನಿವಾರಣೆ ಮಾಡಬಹುದಾಗಿದೆ. 

ಮೈಸೂರು (ಜ.28): ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್ ನಿವಾರಣೆಗೆ ಸಂಬಂಧಿಸಿದಂತೆ ಮೈಸೂರು ವಿವಿ ಔಷಧ ಅಭಿವೃದ್ಧಿ ಪಡಿಸಿದೆ. 

ಮೈಸೂರು ವಿಶ್ವವಿದ್ಯಾಲಯದ ಸಾವಯವ ರಸಾಯನ ಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ಬಸಪ್ಪ ಅವರು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ಔಷಧ ಬೀಜವನ್ನು ಆವಿಷ್ಕರಿಸಿದ್ದಾರೆ. 

ಇದು ಕ್ಯಾನ್ಸರ್ ಔಷಧ ಕ್ಷೇತ್ರದಲ್ಲಿ ಬದಲಾವಣೆ ತರಲಿದೆ. ಪ್ರಸ್ತುತ ಕಿಮೋ ಥೆರಪಿ ಚಿಕಿತ್ಸೆ ಮೂಲಕ ಗುಣಪಡಿಸುವ  ಪ್ರಯತ್ನ ನಡೆಯುತ್ತಿದೆ ಎಂದರು. 

ಸ್ತನದ ಮೇಲಿನ ಡಿಂಪಲ್ಸ್ ಸ್ತನ ಕ್ಯಾನ್ಸರಿನ ಸಂಕೇತವಾಗಿರಬಹುದು !

ಜೊತೆಗೆ ರಲೋಕ್ಸಿಫೈನ್ ಮತ್ತು ಟಮೋಕ್ಸಿಕಿನ್ ಎನ್ನುವ ಔಷಧಗಳನ್ನು ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿದೆ. 

ಈಗಾಗಲೇ ಸ್ತನ ಕ್ಯಾನ್ಸರ್ ವಿರುದ್ಧ ಬಳಸಲಾಗುತ್ತಿರುವ ಈ ಔಷಧ ಮನುಷ್ಯನ ರೋಗ ನಿರೋಧಕ ಕಣಗಳ ಕಾರ್ಯವನ್ನೇ ಬದಲಾಯಿಸುವ  ಸಾಧ್ಯತೆ ಇರುವುದರಿಂದ  ಬಸಪ್ಪ ಅವರು ಆವಷ್ಕರಿಸಿರುವ  ಔಷಧ ಬೀಜವು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. 

ಸದ್ಯಕ್ಕೆ ಈ ಔಷಧ ಬೀಜಕ್ಕೆ ಎಎಂಟಿಎ ಎಂದು ಹೆಸರಿಡಲಾಗಿದೆ.  ಈ ಬೀಜದ ಕುರಿತು  ಮೊಲಕ್ಯುಲಸ್ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಸದ್ಯದಲ್ಲೇ  ಲೇಖನ ಪ್ರಕಟವಾಗಲಿದೆ ಎಂದಿದ್ದಾರೆ. 

PREV
click me!

Recommended Stories

ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ
Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!