* ವಾರಿಯರ್ಸ್‌ಗೆ ಸನ್ಮಾನ ರಾಜ್ಯಕ್ಕೆ ಮಾದರಿ: ಬಿಎಸ್‌ವೈ
* ರೇಣುಕಾಚಾರ್ಯ ಕಾರ್ಯಕ್ಕೆ ಯಡಿಯೂರಪ್ಪ ಮೆಚ್ಚುಗೆ
* ಶಾಸಕನಿಗೆ ಹೇಗೆ ಸಾಮಾಜಿಕ ಬದ್ಧತೆ, ಇಚ್ಛಾಶಕ್ತಿ ಇರಬೇಕೆಂಬುದಕ್ಕೆ ನಮಗೆಲ್ಲರಿಗೂ ರೇಣು ಮಾದರಿ
ದಾವಣಗೆರೆ/ಹೊನ್ನಾಳಿ(ಅ.20): ಕೊರೋನಾ(Coronavirus) ಸಂಕಷ್ಟದ ಪರಿಸ್ಥಿತಿಯಲ್ಲಿ ನಮ್ಮ, ನಿಮ್ಮೆಲ್ಲರ ಪ್ರಾಣ ಕಾಪಾಡಿದ ವಾರಿಯರ್ಸ್‌ಗೆ ನ್ಯಾಮತಿಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸನ್ಮಾನಿಸುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿಯಾದ, ಆದರ್ಶದ ಕಾರ್ಯಕ್ರಮ. ರಾಜ್ಯವ್ಯಾಪಿ ಇಂತಹ ಕಾರ್ಯಕ್ರಮಗಳು ಆಗಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಶ್ಲಾಘಿಸಿದ್ದಾರೆ.
ನ್ಯಾಮತಿ ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಆವರಣದಲ್ಲಿ ಮಂಗಳವಾರ ಕೊರೋನಾ ವಾರಿಯರ್ಸ್‌ಗೆ(Corona Warriors) ಸನ್ಮಾನ ಸಮಾರಂಭ ಉದ್ಘಾಟಿಸಿ, ಕ್ಷೇತ್ರದ ಜನತೆ ತಮಗೆ ನೀಡಿದ ಸೂಪರ್ ಕೊರೋನಾ ವಾರಿಯರ್ ಪ್ರಶಸ್ತಿ-ಸನ್ಮಾನ ಸ್ವೀಕರಿಸಿ ಮಾತನಾಡಿದರು. ಒಂದೂವರೆ ವರ್ಷದಿಂದ ಇಡೀ ದೇಶ, ವಿಶ್ವವನ್ನೇ ಕೊರೋನಾ(Coronavirus) ಮಹಾಮಾರಿ ಇನ್ನಿಲ್ಲದಂತೆ ಕಾಡಿತು. ಈ ಸ್ಥಿತಿಯಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆ(Police) ಸೇವೆಯನ್ನು ಎಷ್ಟೇ ಬಣ್ಣಿಸಿದರೂ ಸಾಲದು. ತಮ್ಮ ಪ್ರಾಣದ ಹಂಗು ತೊರೆದು, ಎಲ್ಲರ ಪ್ರಾಣ ಕಾಪಾಡಿದ್ದಾರೆ ಎಂದರು.
undefined
ಕೊರೋನಾ ಕಾಲದಲ್ಲಿ ಶಾಸಕ ರೇಣುಕಾಚಾರ್ಯ(MP Renukacharya) ಅವಳಿ ತಾಲೂಕಿನ ಮನೆ ಮನೆಗೆ ಹೋಗಿ ಕೊರೋನಾ ವಿರುದ್ಧ ಜಾಗೃತಿ ಮೂಡಿಸಿದರು. ಲಾಕ್‌ಡೌನ್(Lockdown) ವೇಳೆ ಅಸಂಘಟಿತರು, ಕಡು ಬಡವರಿಗೆ(Poor) ಆಹಾರ ಕಿಟ್, ಉಚಿತ ಊಟ, ಔಷಧಿ ನೀಡಿದರು. ಅಷ್ಟೇ ಅಲ್ಲ, ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿಸಲು ಕೋವಿಡ್ ಕೇರ್ ಸೆಂಟರ್‌ನಲ್ಲಿ(Covid Care Center) ವಾಸ್ತವ್ಯ ಮಾಡಿದ ದೇಶದ(India) ಏಕೈಕ ಶಾಸಕ ರೇಣುಕಾಚಾರ್ಯ ಎಂದು ಯಡಿಯೂರಪ್ಪ ಶ್ಲಾಘಿಸಿದರು.
ಬೊಮ್ಮಾಯಿ ಸಾರಥ್ಯ ಅಂದ್ರೆ ಮುಂದಿನ ಸಿಎಂ ಅವರೇ ಎಂದರ್ಥ: ರೇಣುಕಾಚಾರ್ಯ
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್(K Sudhakar) ಮಾತನಾಡಿ, ಶಾಸಕನಿಗೆ ಹೇಗೆ ಸಾಮಾಜಿಕ ಬದ್ಧತೆ, ಇಚ್ಛಾಶಕ್ತಿ ಇರಬೇಕೆಂಬುದಕ್ಕೆ ನಮಗೆಲ್ಲರಿಗೂ ರೇಣುಕಾಚಾರ್ಯ ಮಾದರಿ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಎಸ್ಪಿ ಸಿ.ಬಿ.ರಿಷ್ಯಂತ್, ಜಿಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ, ಡಿಎಚ್‌ಓ ಡಾ.ನಾಗರಾಜ ಸೇರಿದಂತೆ ಅವಳಿ ತಾಲೂಕಿನ ಕೊರೋನಾ ವಾರಿಯರ್ಸ್ಗಳಿಗೆ ಹೂಮಳೆ ಸುರಿಸಿ, ಸನ್ಮಾನಿಸಲಾಯಿತು.