BSYವಿರೋಧಿ ಹೇಳಿಕೆ ನೀಡಿದ್ದ ಯತ್ನಾಳ ಪರ JDS ಬ್ಯಾಟಿಂಗ್ : ಏನಿದರ ರಹಸ್ಯ..?

Published : Nov 03, 2020, 09:16 AM IST
BSYವಿರೋಧಿ ಹೇಳಿಕೆ ನೀಡಿದ್ದ ಯತ್ನಾಳ ಪರ JDS ಬ್ಯಾಟಿಂಗ್ : ಏನಿದರ ರಹಸ್ಯ..?

ಸಾರಾಂಶ

ಬಿಎಸ್‌ವೈ ವಿರೋಧಿ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಪರ ಇದೀಗ ಜೆಡಿಎಸ್ ಮುಖಂಡರೋರ್ವರು ಬ್ಯಾಟಿಂಗ್ ಮಾಡಿದ್ದಾರೆ

ವಿಜಯಪುರ (ನ.03):  ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಪಕ್ಷ ವಿರೋಧಿಯಾಗಿಲ್ಲ. ಜನಪರವಾದ ಧ್ವನಿಯಾಗಿದೆ ಎಂದು ಜೆಡಿಎಸ್‌ ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.

ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಬೆಂಗಳೂರಿನ ನೆರೆ ಸಂತ್ರಸ್ತರಿಗೆ 25 ಸಾವಿರ ರು. ಹಾಗೂ ಈ ಭಾಗದಲ್ಲಿ ಮನೆ ಕಳೆದುಕೊಂಡವರಿಗೆ 10 ಸಾವಿರ ಪರಿಹಾರ ಧನ ನೀಡಿ ಮಲತಾಯಿ ಧೋರಣೆ ಅನುಸರಿಸಲಾಗಿದೆ. 

ಭರ್ಜರಿ ಕೊಡುಗೆ ಮೂಲಕ ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದ ಯತ್ನಾಳ್ ಮನವೊಲಿಕೆಗೆ ಯತ್ನ

ಅದಕ್ಕಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಆಡಳಿತ ಪಕ್ಷದವರಾಗಿದ್ದರೂ ಖಂಡಿಸಿ, ವಿರೋಧಿಸಿದ್ದಾರೆ. ಇದು ಅವರ ಜನಪರ ನಿಲುವು ಆಗಿದೆ. ಯತ್ನಾಳ ಅವರ ಹೇಳಿಕೆ ಪಕ್ಷವಿರೋಧಿಯಾಗಿಲ್ಲ. ಇದಕ್ಕೆ ಯತ್ನಾಳರನ್ನು ಉತ್ತರ ಕರ್ನಾಟಕದ ಹುಲಿ. ನ್ಯಾಯಕ್ಕಾಗಿ ಅವರು ಸದಾ ಧ್ವನಿ ಎತ್ತುತ್ತಾರೆ. ಇದನ್ನು ಜನಪರವಾದ ಧ್ವನಿಯಾಗಿದೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಶಾಸಕ ದೇವಾನಂದ ಹೇಳಿದರು.

PREV
click me!

Recommended Stories

ಅರಣ್ಯ ಸಿಬ್ಬಂದಿ ಗುಂಡಿಗೆ 3 ಬೇಟೆಗಾರರು ಬಲಿ ಪ್ರಕರಣ; ಶವ ಏಕೆ ಮೈಸೂರಿಗೆ ತಂದರು? ಸಂಸದರ ಸಂಶಯದ ಪ್ರಶ್ನೆಗೆ ಉತ್ತರ ಇಲ್ಲ!
ಉತ್ತರಕನ್ನಡದಲ್ಲಿ ಉಲ್ಟಾ, ವಿಜಯಪುರದಲ್ಲಿ ಅರ್ಧಕ್ಕೆ ಹಾರಾಡಿದ ರಾಷ್ಟ್ರಧ್ವಜ!