ನಿಂತಿಲ್ಲ BJP ಆಪರೇಷನ್ : ಮತ್ತೋರ್ವ JDS ಶಾಸಕಗೆ ಬಿಗ್ ಆಫರ್

By Web Desk  |  First Published Sep 6, 2019, 3:14 PM IST

ರಾಜ್ಯದಲ್ಲಿ ದೋಸ್ತಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಇನ್ನೂ ಕೂಡ ಆಪರೇಷನ್ ಕಮಲ ನಿಂತಿಲ್ಲ. ನನಗೂ ಭರ್ಜರಿ ಆಫರ್ ನೀಡಿದ್ದರು ಎಂದು ಜೆಡಿಎಸ್ ಶಾಸಕರೋರ್ವರು ಹೇಳಿದ್ದಾರೆ. 


ರಾಮನಗರ [ಸೆ.06] : ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಕೂಡ ಆಪರೇಷನ್ ಕಮಲ ಇನ್ನೂ ನಿಂತಿಲ್ಲ ಎಂದು ಜೆಡಿಎಸ್ ಶಾಸಕರೋರ್ವರು ಹೊಸ ಬಾಂಬ್ ಸಿಡಿಸಿದ್ದಾರೆ. 

ಬಿಡದಿಯಲ್ಲಿ ಇಂದು ಮಾತನಾಡಿರುವ ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜುನಾಥ್  ಬಿಜೆಪಿಗೆ ಬರುವಂತೆ ನನಗೂ ಕೂಡ ಆಫರ್ ಬಂದಿತ್ತು ಎಂದು ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜುನಾಥ್ ಹೇಳಿದ್ದಾರೆ. 

Tap to resize

Latest Videos

ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್, ಅಶ್ವಥ್ ನಾರಾಯಣ್, ಅರವಿಂದ ಲಿಂಬಾವಳಿ ಆಮೀಷ ಒಡ್ಡಿದ್ದರು. ನಿಮ್ಮನ್ನ ಸಚಿವರನ್ನಾಗಿ ಮಾಡುತ್ತೇವೆ. ಹಣ ಕೊಡುತ್ತೇವೆ ಎಂದು‌ ಆಮೀಷ ಒಡ್ಡಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಇಂತಹ ಯಾವುದೇ ರೀತಿಯ ಆಮಿಷಗಳಿಗೆ ನಾನು ಮಣಿಯುವುದಿಲ್ಲ. ಜೆಡಿಎಸ್ ಬಿಟ್ಟು ನಾನೆಲ್ಲಿಯೂ ಹೋಗಲ್ಲ ಎಂದು ಮಂಜುನಾಥ್ ಹೇಳಿದ್ದಾರೆ.

click me!