ತುಮಕೂರು : ಜೆಡಿಎಸ್‌ ವಿಕೆಟ್ ಪತನ : ಕಾಂಗ್ರೆಸ್ ಸೇರ್ಪಡೆ

By Kannadaprabha News  |  First Published Apr 23, 2024, 12:15 PM IST

ಪಟ್ಟಣದ ಎಂಎಜಿ ಬಸ್‌ ಮಾಲೀಕ ಫಯಾಜ್‌ ಹಾಗೂ ಬೆಂಬಲಿಗರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್, ಮಾಜಿ ಸಚಿವ ವೆಂಕಟರಮಣಪ್ಪ, ಶಾಸಕ ಎಚ್‌.ವಿ.ವೆಂಕಟೇಶ್‌ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್‌ ಸೇರ್ಪಡೆಯಾದರು.


ಪಾವಗಡ: ಪಟ್ಟಣದ ಎಂಎಜಿ ಬಸ್‌ ಮಾಲೀಕ ಫಯಾಜ್‌ ಹಾಗೂ ಬೆಂಬಲಿಗರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್, ಮಾಜಿ ಸಚಿವ ವೆಂಕಟರಮಣಪ್ಪ, ಶಾಸಕ ಎಚ್‌.ವಿ.ವೆಂಕಟೇಶ್‌ ಸಮ್ಮುಖದಲ್ಲಿ ಸೋಮವಾರ ಕಾಂಗ್ರೆಸ್‌ ಸೇರ್ಪಡೆಯಾದರು.

ಕೆಪಿಪಿಸಿ ಉಪಾಧ್ಯಕ್ಷ ನಿಖಿತ್‌ರಾಜ್‌, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಸುದೇಶ್‌ಬಾಬು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೊಹಮ್ಮದ್ ಫಜಲುಲ್ಲಾ ಸಾಬ್, ಜಿಲ್ಲಾ ಕಾಂಗ್ರೆಸ್‌ ಅಲ್ಪ ಸಂಖ್ಯಾತ ಘಟಕದ ಷಾಬಾಬು, ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

Latest Videos

undefined

50ಕ್ಕೂ ಹೆಚ್ಚು ಮಂದಿ ಕೈಗೆ

 ಕೊಪ್ಪಳ :  ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ಕೊಪ್ಪಳ ತಾಲೂಕಿನ ಅಬ್ಬಿಗೇರಿ, ನೀರಲಗಿ, ಕವಲೂರು, ಕೊಪ್ಪಳ ನಗರದ ಪಿರ್ದೋಸ್ ನಗರ, ದೇವರಾಜ ಅರಸ್ ಕಾಲನಿ, ಭಾಗ್ಯನಗರದ ಬೇಂದ್ರೆ ನಗರ, ಪ್ರಶಾಂತ ನಾಯಕ, ಗವಿ ಹೂಗಾರ, ನವೀನ ಗಿಣಿಗೇರಿ, ಅಕ್ಬರ್ ಸಾಬ್, ಅಜಗರ ಅಲಿ, ಅಲ್ತಾಫ್, ದೇವೇಂದ್ರ ಮುಂತಾದವರು ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.ಪ್ರಸನ್ನ ಗಡದ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಎಚ್. ಪೂಜಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್, ರಾಮಣ್ಣ ಚೌಡಿಕಿ, ರಾಮಣ್ಣ ಕಲನವರ್, ಶಿವಮೂರ್ತಿ ಗುತ್ತೂರ್, ನಾಗನ ಗೌಡ, ಸಿದ್ದೇಶ್ ದದೆಗಲ್, ಕೆಪಿಸಿಸಿ ಜಿಲ್ಲಾ ಮಾಧ್ಯಮ ವಕ್ತಾರ ಪರಶುರಾಮ್ ಕೆರೆಹಳ್ಳಿ ಹಾಗೂ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸಂಗಣ್ಣ ಕರಡಿ ಕೈಗೆ

ಬೆಂಗಳೂರು (ಏ.18): ಬಿಜೆಪಿಯಿಂದ ಸ್ಪರ್ಧಿಸಲು ಈ ಬಾರಿ ಟಿಕೆಟ್‌ ಸಿಗಲಿಲ್ಲ ಎಂದು ಬೇಸತ್ತು ಸಂಸದ ಸ್ಥಾನ ಹಾಗೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕರಡಿ ಸಂಗಣ್ಣ ಬುಧವಾರ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರು. ಅವರ ಜೊತೆಗೆ ದಾಸರಹಳ್ಳಿ ಕೃಷ್ಣಮೂರ್ತಿ, ಎ.ಎಸ್‌.ಪುಟ್ಟಸ್ವಾಮಿ, ಸ್ವಾತಿ ಚಂದ್ರಶೇಖರ್‌ ಮೊದಲಾದವರು ಕೂಡ ಕಾಂಗ್ರೆಸ್‌ ಸೇರಿದರು.

ನಿರೀಕ್ಷೆಯಂತೆ ಕೊಪ್ಪಳದ ಬಿಜೆಪಿ ಸಂಸದ ಕರಡಿ ಸಂಗಣ್ಣಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ಬಾವುಟ ನೀಡಿದ ಕರಡಿ ಸಂಗಣ್ಣನವರನ್ನ ಪಕ್ಷಕ್ಕೆ ಬರಮಾಡಿಕೊಂಡರು. ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು,ಇವತ್ತು ಸಂಭ್ರಮದ ದಿನ.ಇವತ್ತು ನಾನು ಕಾಂಗ್ರೆಸ್ ಸೇರಲು ಸವದಿ ಕಾರಣ. ಸಿದ್ದರಾಮಯ್ಯ ಜೊತೆ ಕೆಲಸ ಮಾಡಿದ್ದೇನೆ. ಡಿಕೆ ಶಿವಕುಮಾರ್ ಪಕ್ಷೇತರರವಾಗಿ ಗೆದ್ದಾಗ ನಾನು ಗೆದ್ದಿದ್ದೆ ಎಂದು ಹೇಳಿದರು. 

ಹೆಚ್‌ಜಿ. ರಾಮುಲು ಅವರು ನನ್ನ ರಾಜಕೀಯ ಗುರು.  ಖಾದ್ರಿ ಅವರನ್ನ ನೆನಪು ಮಾಡಿಕೊಳ್ಳುತ್ತೇನೆ. ಕಾಂಗ್ರೆಸ್ ಪಕ್ಷದ ಸಿದ್ದಾಂತ ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂಬ ಚಾಲೆಂಜ್ ಮಾಡಿದ್ದೇವೆ ಎಂದರು. ನಾನು ಅಧಿಕಾರಕ್ಕೆ ಬಂದಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದೇನೆ. ಕಾಂಗ್ರೆಸ್ ‌ಪಕ್ಷ ಸೇರ್ಪಡೆ ಖುಷಿ ಕೊಟ್ಟಿದೆ. ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ, ತ್ಯಾಗ ಬಲಿದಾನ ಮಾಡಿದ ಪಕ್ಷ ಎಂದು ಕಾಂಗ್ರೆಸ್‌ ಪಕ್ಷವನ್ನು ಹಾಡಿ ಹೊಗಳಿದರು.

click me!