Assembly Election Karnataka: 2023ಕ್ಕೆ ಜೆಡಿಎಸ್‌ ಅಧಿಕಾರಕ್ಕೆ ತರಲು ತಯಾರಿ

By Kannadaprabha News  |  First Published Nov 29, 2021, 1:18 PM IST
  • ರೈತರು ಉಳಿಯ ಬೇಕಾದರೆ ರಾಜ್ಯದ ಅಭಿವೃದ್ಧಿ ಹೊಂದಬೇಕಾದರೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ
  • ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ಸಾ ರಾ ಕರೆ

 ಕೆ.ಆರ್‌. ನಗರ (ನ.29):  ರೈತರು  ಉಳಿಯ ಬೇಕಾದರೆ ರಾಜ್ಯದ ಅಭಿವೃದ್ಧಿ ಹೊಂದಬೇಕಾದರೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಆದ್ದರಿಂದ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ (JDS) ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ 2023ರ ವಿಧಾನ ಸಭಾ ಚುನಾವಣೆಯಲ್ಲಿ (Assembly Election Karnataka) ಮತ್ತೆ ಜೆಡಿಎಸ್‌ (JDS) ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಿ ಎಂದು ಶಾಸಕ ಸಾ.ರಾ. ಮಹೇಶ್‌ (Sa Ra Mahesh) ಕಾರ್ಯಕರ್ತರಿಗೆ ಕರೆ ನೀಡಿದರು.  ಪಟ್ಟಣದ ಎಚ್‌.ಡಿ. ದೇವೇಗೌಡ (HD Devegowda) ಸಮುದಾಯದ ಭವನದಲ್ಲಿ ಮೈಸೂರು - ಚಾಮರಾಜನಗರ (Mysuru - chamarajanagar) ವಿಧಾನ ಪರಿಷತ್‌ ಜೆಡಿಎಸ್‌ (JDS) ಅಭ್ಯರ್ಥಿ ಸಿ.ಎನ್‌. ಮಂಜೇಗೌಡರ  ಪರವಾಗಿ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ (HD Kumaraswamy ) ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಕೆ.ಆರ್‌. ನಗರ ತಾಲೂಕಿನ ರೈತರ 100 ಕೋಟಿಗೂ ಹೆಚ್ಚು ಸಾಲ ಮನ್ನಾ ಮಾಡಿದ್ದಾರೆ ಎಂದು ತಿಳಿಸಿದರು.

ಕೆ.ಆರ್‌. ನಗರ (KR Nagar) ಮತ್ತು ಸಾಲಿಗ್ರಾಮ ತಾಲೂಕಿನ ಒಟ್ಟು 34 ಪಂಚಾಯಿತಿಗಳಿಂದ 549 ಸದಸ್ಯರಲ್ಲಿ 349 ಹೆಚ್ಚು ಸದಸ್ಯರು ಜೆಡಿಎಸ್‌ (JDS) ಸದಸ್ಯರಿದ್ದು 25 ಪಂಚಾಯಿತಿಗಳಲ್ಲಿ ನಮ್ಮ ಪಕ್ಷದವರೆ ಅಧ್ಯಕ್ಷರಾಗಿರುವುದರಿಂದ ಆಯಾ ಪಂಚಾಯಿತಿಗಳಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಅಭ್ಯರ್ಥಿಯಾದ ಸಿ.ಎನ್‌. ಮಂಜೇಗೌಡರಿಗೆ (Manjegowda) ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಅವರು ಮನವಿ ಮಾಡಿದರು.

Tap to resize

Latest Videos

undefined

ಹಿಂದೆ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಿ ಆಯ್ಕೆಯಾದವರು 12 ವರ್ಷಗಳಿಂದ ಅಧಿಕಾರ ಉಂಡು ನಮ್ಮ ಪಕ್ಷದ ಕಾರ್ಯಕರ್ತರ ಶ್ರಮದಿಂದ ನಮ್ಮ ನಾಯಕರ ಆರ್ಶೀವಾದಿಂದ ಗೆದ್ದು ನಮ್ಮಗೆ ಮತ ಕೇಳದೇ ಬಿಜೆಪಿ - ಕಾಂಗ್ರೆಸ್‌ಗೆ (BJP - Congress) ಮತ ಕೇಳುತ್ತಿರುವುದು ಎಷ್ಟು ಸರಿ ಅಂತವರಿಗೆ ಮುಂದೆ ಜನರೇ ಪಾಠ ಕಲಿಸುತ್ತಾರೆ ಎಂದು ಸಂದೇಶ ನಾಗರಾಜ್‌ (Sandesh Nagaraj) ವಿರುದ್ದ ಪರೋಕ್ಷವಾಗಿ ವ್ಯಂಗವಾಡಿದರು.

ಸಿ.ಎನ್‌. ಮಂಜೇಗೌಡರು ಸೈನಿಕರಾಗಿ ಸೇವೆ ಸಲ್ಲಿಸಿ ಪ್ರಾಮಾಣಿಕವಾಗಿ ತಮ್ಮ ಸೇವೆಯನ್ನು ರಾಜಕೀಯಕ್ಕೆ (Politics) ತೊಡಗಿಸಿಕೊಂಡು, ಗ್ರಾಪಂ ಸದಸ್ಯರಾಗಿ, ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ (Assembly Constituency) ಅಭ್ಯರ್ಥಿಯಾಗಿ ಕಡಿಮೆ ಅಂತರದಿಂದ ಪರಾಜಿತರಾಗಿ ಕಾಂಗ್ರೆಸ್‌ನಿಂದ (Congress) ನಮ್ಮ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಬಂದಿರುವ ಇವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮೈಸೂರು - ಚಾಮರಾಜನಗರ ವಿಧಾನ ಪರಿಷತ್‌ ಚುನಾವಣೆಯಲ್ಲಿ (MLC Election) ಸಿ.ಎನ್‌. ಮಂಜೇಗೌಡರು ಅಭ್ಯರ್ಥಿ ಎನ್ನದೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರೇ ಅಭ್ಯರ್ಥಿ ಎಂದು ತಿಳಿದು ಮತ ನೀಡಿ ಎಂದರು.

ಎರಡು ರಾಷ್ಟ್ರೀಯ ಪಕ್ಷಗಳು ಲೂಟಿ ಪಕ್ಷಗಳು. ಇವರ ನಾಯಕರನ್ನು ನೋಡಬೇಕಾದರೆ ದೆಹಲಿಗೆ ಹೋಗಬೇಕಾಗುತ್ತದೆ. ಅಕ್ಕಿ ಕೊಟ್ಟೆ, ಅಕ್ಕಿ ಕೊಟ್ಟೆಎಂದು ಹೇಳುವ ಸಿದ್ದರಾಮಯ್ಯ (Siddaramaiah) ಅವರು ಹಿಂದಿನ ಸರ್ಕಾರ . 3ಗೆ 25 ಕೆ.ಜಿ ನೀಡುತಿದ್ದ ಅಕ್ಕಿಯನ್ನು . 7 ಕೆಜಿಗೆ ಇಳಿಸಿದೆ. ಇವರ ಸಾಧನೆ 5 ವರ್ಷಗಳ ಅವO್ಛಯಲ್ಲಿ ಒಂದೆ ಒಂದು ಆಶ್ರಯ ಮನೆಯನ್ನು ನೀಡದ ಏನು ಅಧಿಕಾರ ನಡೆಸಿದರು. ಇತ್ತ ಬಿಜೆಪಿಯವರು 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ನೀಡಿದ ಆಶ್ರಯ ಮನೆಗಳಿಗೆ ಹಣವನ್ನೆ ನೀಡಿಲ್ಲ ಎಂದು ಆರೋಪಿಸಿದರು.

ಅಭ್ಯರ್ಥಿ ಸಿ.ಎನ್‌. ಮಂಜೇಗೌಡ ಮಾತನಾಡಿ, ವಿಧಾನ ಪರಿಷತ್‌ ಚುನಾವಣೆ ಮುಂದಿನ 2023ರ ವಿಧಾನಸಭಾ ಚುನಾವಣೆಗೆ ಮುನ್ನುಡಿ ಆಗಲಿದೆ. ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮತ್ತೊಂದು ಬಾರಿ ಮುಖ್ಯಮಂತ್ರಿಯಾಗಿ ಮಾಡಬೇಕಾಗಿದ್ದು ಆದ್ದರಿಂದ ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ಅನಿರ್ವಾಯವಾಗಿರುವುದರಿಂದ ಜೆಡಿಎಸ್‌ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ್‌, ಮೂಳೆ ತಜ್ಞ ಡಾ. ಮೊಹಬೂಬ್‌ ಖಾನ್‌, ನವ ನಗರ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ಬಸಂತ್‌, ತಾಲೂಕು ಜೆಡಿಎಸ್‌ ವಕ್ತಾರ ಕೆ.ಎಲ್‌. ರಮೇಶ್‌, ಎರಡು ತಾಲೂಕು ಅಧ್ಯಕ್ಷರಾದ ಹಂಪಾಪುರ ಕುಮಾರ್‌, ಮೆಡಿಕಲ್‌ ರಾಜಣ್ಣ, ಮುಖಂಡರಾದ ಮಿರ್ಲೆ ಧನಂಜಯ, ಎಂ.ಟಿ. ಅಣ್ಣೆಗೌಡ, ಎಂ.ಟಿ. ಕುಮಾರ್‌, ಹನಸೋಗೆ ನಾಗರಾಜ್, ಹೆಬ್ಬಾಳ್‌ ಸುಜಯ್‌ಕುಮಾರ್‌, ಅಂಕನಹಳ್ಳಿ ತಿಮ್ಮಪ್ಪ, ಹೊಸೂರು ಮಧುಚಂದ್ರ, ರಾಜಲಕ್ಷ್ಮಿ, ಶ್ರುತಿ ಪುಟ್ಟರಾಜು, ಮುಬಾರಕ್‌, ಕಿಶೋರ್‌, ಮನು ಮೊದಲಾದವರು ಇದ್ದರು.

ಜೆಡಿಎಸ್‌ ಪಕ್ಷವನ್ನು ಅಪ್ಪ ಮಕ್ಕಳ ಪಕ್ಷ ಎಂದು ಹೇಳುವ ಕಾಂಗ್ರೆಸ್‌ ಮುಖಂಡರು ರಾಷ್ಟಮಟ್ಟದಲ್ಲಿ ಕಾಂಗ್ರೆಸ್‌ ಅಮ್ಮ ಮಗನ ಪಕ್ಷವೇ? ರಾಜ್ಯದಲ್ಲಿ ಅಪ್ಪ ಮಗನ ಪಕ್ಷ ಎನ್ನಾಬೇಕೇ ಮತ್ತು ಬಿಜೆಪಿಯನ್ನು ಅಣ್ಣ-ತಮ್ಮಂದಿರ ಪಕ್ಷ ಎನ್ನಬೇಕೆ? ಎಲ್ಲ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣ ಇದ್ದೇ ಇದೆ. ಆದರೆ ಯಾವ ಪಕ್ಷದಿಂದ ರಾಜ್ಯದ ಅಭಿವೃದ್ಧಿ ಎಂಬುದು ಮುಖ್ಯ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

click me!