ಬಿಜೆಪಿಗೆ ಮುಖಂಡರಿಗೆ ಇಮ್ರಾನ್ ಸವಾಲು

Kannadaprabha News   | Asianet News
Published : Jan 11, 2020, 10:20 AM IST
ಬಿಜೆಪಿಗೆ ಮುಖಂಡರಿಗೆ ಇಮ್ರಾನ್ ಸವಾಲು

ಸಾರಾಂಶ

ಬಿಜೆಪಿ ಮುಖಂಡರಿಗೆ ಇಮ್ರಾನ್ ಖಾನ್ ಸವಾಲು ಹಾಕಿದ್ದಾರೆ. ತಾಕತ್ ಇದ್ದರೆ ಈ ಕೆಲಸ ಮಾಡಿ ತೋರಿಸಿ ಎಂದು ಹೇಳಿದ್ದಾರೆ. 

ಬೆಂಗಳೂರು [ಜ.11] : ‘ಆರ್‌ಎಸ್‌ಎಸ್‌ನ, ಬಿಜೆಪಿಯ ದಲ್ಲಾಳಿಗಳೇ, ನಿಮಗೆ ತಾಕತ್‌ ಇದ್ದರೆ ಚೀನಾ ವಶಪಡಿಸಿಕೊಂಡ ಜಾಗವನ್ನು ವಾಪಸ್‌ ತೆಗೆದುಕೊಂಡು ಬನ್ನಿ’ ಎಂದು ಜೆಡಿಎಸ್‌ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಕ್ರಮದಿಂದ ಶಾಂತಿಗೆ ಭಂಗವಾಗಿದೆ. ಭಾರತ ಎಷ್ಟುಹಿಂದುಗಳಿಗಾಗಿ ಇದೆಯೋ, ಅಷ್ಟೇ ಮುಸ್ಲಿಮರಿಗಾಗಿಯೂ ಇದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಂವಿಧಾನವನ್ನು ಉಲ್ಲಂಘನೆ ಮಾಡುತ್ತಿದೆ. ಸಂವಿಧಾನವನ್ನು ಮುಗಿಸಲು ಈಗ ಮುಂದಾಗಿದ್ದಾರೆ.

ಇವತ್ತು ಜನರು ಮನೆಯಿಂದ ಹೊರ ಬಾರದಿದ್ದರೆ ನಿಮ್ಮ ಮಕ್ಕಳು, ಕುಟುಂಬಸ್ಥರನ್ನು ನಿಮ್ಮ ಮುಂದೆಯೇ ಎತ್ತಾಕಿಕೊಂಡು ಹೋಗಲಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.

PREV
click me!

Recommended Stories

ಚಿಕ್ಕಬಳ್ಳಾಪುರದಲ್ಲಿ ಮಾನವ ಹಕ್ಕುಗಳ ದಿನಾಚರಣೆ: ಸಾವಿರಾರು ಜನರಲ್ಲಿ ನಾಯಕತ್ವ ಬಿತ್ತಿದ ನವಶಕ್ತಿ ನಾಟಕ
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ