ಇದೆಂತಾ ಹುಡು​ಗಾ​ಟಿಕೆ ನಡೀತಿದೆ : ಎಚ್‌ಡಿಕೆ ಗರಂ

Kannadaprabha News   | Asianet News
Published : Feb 23, 2021, 10:14 AM IST
ಇದೆಂತಾ ಹುಡು​ಗಾ​ಟಿಕೆ ನಡೀತಿದೆ : ಎಚ್‌ಡಿಕೆ ಗರಂ

ಸಾರಾಂಶ

ಇದೆಂತಾ ಹುಡುಗಾಟಿಕೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ ಹೇಳಿದ್ದಾರೆ. 

ತುರುವೇಕೆರೆ (ಫೆ.23):  ಮೀಸಲಾತಿ ವಿಚಾರದಲ್ಲಿ ರಾಜ್ಯದಲ್ಲಿ ಹುಡುಗಾಟಿಕೆ ನಡೆಯುತ್ತಿದ್ದು, ಧಾರ್ಮಿಕ ಗುರುಗಳನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. 

ಎಲ್ಲಾ ಸಮಾಜದವರೂ ಮೀಸಲಾತಿ ಕೇಳುತ್ತಿದ್ದು, ನಾವೂ ಏನಾದರೂ ಕೇಳಬೇಕಲ್ಲ ಅಂತ ನಮ್ಮ ಸ್ವಾಮೀಜಿ ಮುಂದಿ​ಟ್ಟು​ಕೊಂಡು ನಮ್ಮವರೂ ಸಭೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿ​ಸಿ​ದ್ದಾ​ರೆ.\

ಅವಳೆ ನನ್ನ ಕಾಪಾಡಿದ್ದು : ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ

ತುರುವೇಕೆರೆ ತಾಲೂಕು ಸೀಗೇಹಳ್ಳಿಯಲ್ಲಿ ಧಾರ್ಮಿಕ ಸಮಾರಂಭ, ಶೆಟ್ಟಗೊಂಡನಹಳ್ಳಿಯಲ್ಲಿ ನಡೆದ ಹಳ್ಳಿಕಾರ್‌ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಮುಂಬರುವ ದಿನಗಳಲ್ಲಿ ಜಾತಿ, ಜಾತಿಗಳ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ. 

ಮೀಸಲಾತಿ ಎನ್ನುವುದು ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನವಲ್ಲ. ಬದಲಾಗಿ ದ್ವೇಷಕಾರುವ ಸ್ಥಿತಿಗೆ ದಾರಿ ಮಾಡಿಕೊಡಲಿದೆ. ರಾಜಕೀಯ ಸ್ವಾರ್ಥಕ್ಕಾಗಿ ಮೀಸಲಾತಿ ಎನ್ನುವ ಹೋರಾಟ ಸೃಷ್ಟಿಯಾಗಿದೆ ಎಂದ​ರು.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ