ಜೆಡಿಎಸ್ ಪಕ್ಷ ತೊರೆಯಲು ನಿರ್ಧರಿಸಿದ ಹಿರಿಯ ಮುಖಂಡ : ಶೀಘ್ರ ಗುಡ್ ಬೈ

Kannadaprabha News   | Asianet News
Published : Nov 03, 2020, 10:36 AM IST
ಜೆಡಿಎಸ್ ಪಕ್ಷ ತೊರೆಯಲು ನಿರ್ಧರಿಸಿದ  ಹಿರಿಯ ಮುಖಂಡ : ಶೀಘ್ರ ಗುಡ್ ಬೈ

ಸಾರಾಂಶ

ಇದೀಗ ಜೆಡಿಎಸ್‌ಗೆ ಚುನಾವಣೆ ಬೆನ್ನಲ್ಲೇ ದೊಡ್ಡ ಆಘಾತ ಎದುರಾಗಿದೆ. ಹಿರಿಯ ಮುಖಂಡರೋರ್ವರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ತಾವು ಪಕ್ಷ ತೊರೆಯುವುದು ಕನ್ಫರ್ಮ್ ಎಮದು ಹೇಳಿದ್ದಾರೆ. 

ಪಾವಗಡ (ನ.03): ಸ್ಥಳೀಯ ಕಾರ್ಯಕರ್ತರಿಗೆ ರಕ್ಷಣೆ ಹಾಗೂ ನ್ಯಾಯ ಕ್ಲಪಿಸಲು ವಿಫಲರಾದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ತಾಲೂಕು ಜೆಡಿಎಸ್ ಹಿರಿಯ ಮುಖಂಡ  ಹಾಗೂ ಗ್ರಾ ಪಂ ಮಾಜಿ ಅಧ್ಯಕ್ಷ ವಿ ಚಿಂತಲರೆಡ್ಡಿ ಜೆಡಿಎಸ್ ನಿಂದ ದೂರ ಸರಿಯುವ ನಿರ್ಧಾರ ಮಾಡಿದ್ದಾರೆ. 

ಈ ಬಗ್ಗೆ ಇತ್ತೀಚೆಗೆ ಪಟ್ಟಣದಲ್ಲಿ ಮಾತನಾಡಿದ ಚಿಂತನರೆಡ್ಡಿ 45 ವರ್ಷಗಳಿಂದ ಜೆಡಿಎಸ್‌ನಲ್ಲಿ ಸಕ್ರೀಯವಾಗಿ ಸೇವೆ ಸಲ್ಲಿಸಿದ್ದೇನೆ. ಈಗಿನ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ  ಅವರ ಭದ್ರಕೋಟೆಯಲ್ಲಿ ಛಲಬಿಡದೇ ಹೋರಾಟ ನಡೆಸಿ ಜೆಡಿಎಸ್ ಪಕ್ಷ ಸದೃಢವಾಗಿ ಸಂಘಟಿಸಲಾಗಿತ್ತು. 

ಜೆಡಿಎಸ್ ಭದ್ರಕೋಟೆ ಕಟ್ಟುವಲ್ಲಿ ಅಪಾರ ರೀತಿಯ ಶ್ರಮವಹಿಸಿ ಕೆಲಸ ಮಾಡಲಾಗಿದೆ.

ಮತದಾನದ ಬಳಿಕ ಸುವರ್ಣ ನ್ಯೂಸ್ ಜೊತೆ ಜೆಡಿಎಸ್‌ ಅಭ್ಯರ್ಥಿ ಮಾತು .

ಈ ಹಿಂದೆ ಇಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಈಗಿನ  ಮಾಜಿ ಶಾಸಕರಿಗೆ ನಮ್ಮ ಗ್ರಾ ಪಂಚಾಯತ್ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮತ ಕಲ್ಪಿಸಿಕೊಡಲಾಗಿತ್ತು. 

ನಮ್ಮ ಗ್ರಾ ಪಂಚಾಯತ್ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷವನ್ನೇ ನಂಬಿದ ಸಾವಿರಾರು ಮಂದಿ ಕಾರ್ಯಕರ್ತರಿದ್ದಾರೆ. 

ಸಂಕಷ್ಟದ ವೇಳೆ ಅವರಿಗೆ ಸೂಕ್ತ  ನ್ಯಾಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.  ನನ್ನ ಪಕ್ಷದಿಂದಲೂ ಯಾವುದೇ ರಕ್ಷಣೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ. 

PREV
click me!

Recommended Stories

Charmadi Ghat Fire ಚಾರ್ಮಾಡಿ ಘಾಟಿಯಲ್ಲಿ ಹೊತ್ತಿಕೊಂಡ ಬೆಂಕಿ; ನೂರಾರು ಎಕರೆ ಅರಣ್ಯ, ಪ್ರಾಣಿ-ಪಕ್ಷಿಗಳು ಭಸ್ಮ?
ಶಿವಮೊಗ್ಗದಲ್ಲಿ ವೀಣಾ ತ್ರಿಶತೋತ್ಸವ ಕಾರ್ಯಕ್ರಮ: ಸಂಸದ ಯದುವೀರ್ ವೀಣಾವಾದನಕ್ಕೆ ಗಾನಗಂಧರ್ವ ಲೋಕ ಸೃಷ್ಟಿ!