ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ : BJP ಮುಖಂಡಗೆ ಜೆಡಿಎಸ್ ಲೀಡರ್ ಟಾಂಗ್

By Kannadaprabha News  |  First Published Sep 14, 2020, 2:45 PM IST

ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಮಾಜಿ ಜೆಡಿಎಸ್ ಹಾಲಿ ಬಿಜೆಪಿ ಮುಖಂಡರೋರ್ವರ ವಿರುದ್ಧ ಜೆಡಿಎಸ್ ಮುಖಂಡರೋರ್ವರು ಹರಿಹಾಯ್ದಿದ್ದಾರೆ.


ಚನ್ನಪಟ್ಟಣ (ಸೆ.14): 18 ವರ್ಷಗಳಿಂದ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಂಎಲ್‌ಸಿ ಪುಟ್ಟಣ್ಣ ಅಧಿಕಾರವನ್ನು ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡು, ತಮ್ಮನ್ನು ಗೆಲ್ಲಿಸುತ್ತಿರುವ ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ. ಇದರಿಂದಾಗಿ ಶಿಕ್ಷಕ ಸಮುದಾಯದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎ.ಪಿ.ರಂಗನಾಥ್‌ ಆರೋಪಿಸಿದರು.

ನಗರದ ಹೊರ ವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಟಿನಡೆಸಿದ ಅವರು, ಇದುವರಗೆ ಬೋಗಸ್‌ ಮತದಾರರನ್ನು ಸೃಷ್ಟಿಮಾಡಿಕೊಂಡು ವಾಮಮಾರ್ಗದಿಂದ ಪುಟ್ಟಣ್ಣ ಗೆಲುವು ಸಾಧಿಸುತ್ತಿದ್ದರು. ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡು ಗೆಲುವು ಸಾಧಿಸಿ ಪಕ್ಷಾಂತರ ಮಾಡಿದ್ದೇ ಇವರ ಸಾಧನೆ. ಈ ಬಾರಿ ಗೆದ್ದೆ ಗೆಲ್ಲುವೆ ಎಂಬ ಭ್ರಮೆಯೊಂದಿಗೆ ಬಿಜೆಪಿ ಸೇರಿದ್ದು, ಮತದಾರರು ಇವರಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದರು.

Tap to resize

Latest Videos

ಉಲ್ಟಾ ಹೊಡೆದು ಮತ್ತೊಂದು ಹುದ್ದೆಗೆ ಪಟ್ಟು ಹಿಡಿದ ಶಾಸಕ ...

ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಪುಟ್ಟಣ್ಣ ಬೆಂಬಲಿಸಿದ ಅಭ್ಯರ್ಥಿಯ ವಿರುದ್ಧ ಮತ ನೀಡುವ ಮೂಲಕ ಅವರಿಗೆ ಈ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಇದೀಗ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪ್ರಜ್ಞಾವಂತ ಶಿಕ್ಷಕರು ನನ್ನನ್ನು ಗೆಲ್ಲಿಸುವ ಮೂಲಕ ಪುಟ್ಟಣ್ಣ ಅವರನ್ನು ಖಾಯಂ ಆಗಿ ಮನೆಗೆ ಕಳುಹಿಸಲಿದ್ದು, ಪುಟ್ಟಣ್ಣ ಅವರ ಸೋಲಿನ ಶಕೆ ಚನ್ನಪಟ್ಟಣದಿಂದಲೇ ಆರಂಭ ಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿರಾ ಭಿನ್ನಮತ ಕಾಂಗ್ರೆಸ್‌ಗೆ ತಲೆನೋವು ...

ಸುದ್ದಿಗೋಷ್ಟಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜು, ನಗರ ಜೆಡಿಎಸ್‌ ಅಧ್ಯಕ್ಷ ರಾಂಪುರ ರಾಜಣ್ಣ, ಬೆಂಗಳೂರು ನಗರ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಕುಮಾರ್‌, ವಕೀಲ ದಿಲೀಪ್‌ಕುಮಾರ್‌, ಕೆಂಚೇಗೌಡ, ಮಧುಕರ್‌ ಉಪಸ್ಥಿತರಿದ್ದರು.

click me!