ಕೋಲಾರ (ಡಿ.28): ವಿಧಾನ ಪರಿಷತ್ ಸದಸ್ಯ (MLC) ಇಂಚರ ಗೋವಿಂದ ರಾಜು ಋುಣದಲ್ಲಿ ನಾನು ಇಲ್ಲ. ಬದಲಿಗೆ ಅವರೇ ನನ್ನ ಋುಣದಲ್ಲಿದ್ದು, ಅದನ್ನು ಅವರು ಮರೆತಿದ್ದಾರೆ ಎಂದು ಶಾಸಕ ಕೆ.ಶ್ರೀನಿವಾಸಗೌಡ (MLC K Shrinivas Gowda) ತಿರುಗೇಟು ನೀಡಿದರು. ನಗರದ ತಮ್ಮ ನಿವಾಸದಲ್ಲಿ ಸೋಮವಾರ ಇಫ್ಕೋ ಟೋಕಿಯೋದಿಂದ (Tokyo) ಉನ್ನತ ಶಿಕ್ಷಣ ಪಡೆಯುತ್ತಿರುವ ನಾಲ್ಕು ವಿದ್ಯಾರ್ಥಿಗಳಿಗೆ 2,84,400 ರು.ಗಳ ಚೆಕ್ ವಿತರಿಸಿ ಮಾತನಾಡಿದ ಅವರು, ಶಾಸಕ ಶ್ರೀನಿವಾಸಗೌಡ ಸತ್ತ ಹಾವು ಇದ್ದಂದೆ ಎಂದು ಗೋವಿಂದರಾಜು ಟೀಕಿಸಿದ್ದಕ್ಕೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಗೋವಿಂದರಾಜು ಸಸ್ಪೆಂಡ್ ಆಗಿದ್ದರು
undefined
ಗೋವಿಂದರಾಜು ಶಿರಸಿಯ (sirsi) ಕೆಎಸ್‌ಆರ್‌ಟಿಸಿ (KSRTC) ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಮರಗಳ ಸಾಗಣೆಯ ಆರೋಪದಲ್ಲಿ ಅಮಾನತು ಗೊಂಡಿದ್ದರು. ಆಗ ನಾನು ಶಾಸಕನಾಗಿದ್ದೆ. ಗೋವಿಂದರಾಜು ರವರ ಅಣ್ಣ ಬಲ ರಾಮಪ್ಪ ನನ್ನ ಬಳಿ ಬಂದಾಗ ಆಗಿನ ಸಚಿವ ಪಿಜಿಆರ್ ಸಿಂಧ್ಯ ಅವರ ಬಳಿ ಕರೆದುಕೊಂಡು ಹೋಗಿ ಅರೋಪದಿಂದ ಮುಕ್ತಗೊಳಿಸಿದ್ದೆ. ಇದು ಅವರಿಗೆ ಜ್ಞಾಪಕವಿಲ್ಲವೇ, ಗೋವಿಂದರಾಜು ರಾಜಕಾರಣ (Politics) ಪ್ರವೇಶಿಸಲು ನಾನೇ ಕಾರಣ. ಅದೆಲ್ಲವನ್ನೂ ಅವರು ಮರೆತಿದ್ದಾರೆ ಎಂದರು.
ನಾನು ಕಾಂಗ್ರೆಸ್‌ನಲ್ಲಿದ್ದಾಗ (Congress) ಸಚಿವನಾಗಿದ್ದೆ (Minister), ಜನತಾದಳವು (JDS) ಕೇವಲ ಅಪ್ಪ-ಮಕ್ಕಳ ಸ್ವತ್ತು ಅಗಿದೆ. ಗುಲಾಮನಂತೆ ಉಸಿರು ಗಟ್ಟಿನ ವಾತಾವರಣದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಕ್ಷವನ್ನು ಬಿಟ್ಟು ನನಗೆ ಗೌರವ ನೀಡುವಂತ ಕಾಂಗ್ರೆಸ್‌ಗೆ (Congress) ಮರಳಿದ್ದೇನೆ. ಗೋವಿಂದರಾಜು ಜೆಡಿಎಸ್‌ನಲ್ಲಿ (JDS) ಗುರುತಿಸಿಕೊಂಡು ಅಪ್ಪ-ಮಕ್ಕಳನ್ನು ಒಲೈಸಿ ಕೊಂಡು ಸ್ಥಾನಮಾನ ಪಡೆದಿರುವ ಹುಮ್ಮಸ್ಸಿನಲ್ಲಿ ಮೆಚ್ಚುಗೆ ಗಿಟ್ಟಿಸಲು ನನ್ನ ಬಗ್ಗೆ ಮಾತನಾಡಿದ್ದಾರೆ. ಅವೆಲ್ಲವೂ ಇರಲಿ, ಹಂತ-ಹಂತವಾಗಿ ಅಪ್ಪ-ಮಕ್ಕಳ ಬಗ್ಗೆ ಅವರಿಗೇ ಅರ್ಥವಾಗುತ್ತದೆ ಎಂದು ಕಿಚಾಯಿಸಿದರು.
ಯರಗೋಳ್ ನನ್ನ ಕನಸಿನ ಕೂಸು
ಯರಗೋಳ್ ಯೋಜನೆ ಕಾಮಗಾರಿಯಲ್ಲಿ ಪೈಪ್ ಲೈನ್ (Pipe Line) ಜೋಡಣೆ ಕಾಮಗಾರಿಗೆ ಇನ್ನು ಸುಮಾರು 3 - 4 ತಿಂಗಳು ಬೇಕಾಗುತ್ತದೆ. ಡ್ಯಾಮ್‌ನಲ್ಲಿ (Dam) ನೀರು ಭರ್ತಿಯಾಗಿದೆ. ಯರಗೋಳ್ ನನ್ನ ಕನಸಿನ ಕೂಸು ಆಗಿದ್ದು ಬಂಗಾರಪೇಟೆ, ಕೋಲಾರ (Kolar), ಮಾಲೂರಿಗೆ ಕುಡಿಯುವ ನೀರು (Drinking Water) ಪೂರೈಕೆ ಆಗುವುದನ್ನು ಕಣ್ಣಾರೆ ನೋಡಬೇಕೆನ್ನುವುದು ನನ್ನ ಆಸೆ ಎಂದರು.
ಇಪ್ಕೋ ಸೇವಾ ಸಂಸ್ಥೆಯಿಂದ ಕಳೆದ ಸುಮಾರು 25 ವರ್ಷಗಳಿಂದ ಅರೋಗ್ಯ ಮತ್ತು ಶಿಕ್ಷಣಕ್ಕೆ (education) ನೂರಾರು ಕೋಟಿ ರೂ ನೆರವು ನೀಡುತ್ತಾ ಬಂದಿರುವೆ. ನಾನು ಅಧಿಕಾರದಲ್ಲಿ ಇರುವಷ್ಟುಕಾಲವು ಮುಂದುವರೆಸುತ್ತೇನೆ ಇದರಿಂದ ಸಾವಿರಾರು ಮಂದಿಗೆ ನೆರವು ಸಿಕ್ಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂ.ಎಸ್ ಅಧ್ಯಕ್ಷ ನಾಗನಾಳ ಸೋಮಣ್ಣ, ಮುಖಂಡರಾದ ಖಾಜಿಕಲ್ಲಹಳ್ಳಿ ಮುನಿರಾಜು, ಟಮಕ ವೆಂಕಟೇಶ್, ಅಂಚೆ ಅಶ್ವಥ್, ಕಲ್ಲಂಡೂರು ಕೃಷ್ಣಪ್ಪ, ಕೃಷ್ಣೆಗೌಡ, ಮಾಜಿ ನಗರಸಭೆ ಸದಸ್ಯ ಚನ್ನವೀರಯ್ಯ ಮುಂತಾದವರಿದ್ದರು.
ಸತ್ತ ಹಾವಿನಂತೆ ಎಂದಿದ್ದ ಮುಖಂಡರ : ಕೋಲಾರ (Kolar) ಶಾಸಕ ಕೆ.ಶ್ರೀನಿವಾಸಗೌಡರು (K Shrinivas Gowda) ಸತ್ತ ಹಾವಿನಂತಿದ್ದು ಅವರು ಜೆಡಿಎಸ್ (JDS) ಬಿಡುವುದರಿಂದ ನಮ್ಮ ಪಕ್ಷಕ್ಕೆ ಯಾವುದೇ ಹಾನಿ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಕಿಡಿಕಾರಿದ್ದರು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರಂತೆ. ಶಾಸಕರು ಪಕ್ಷ ಬಿಟ್ಟು ಹೋಗಲು ನೆಪ ಹುಡುಕಿಕೊಂಡಿದ್ದಾರೆ. ಅವರಿಗೆ ಟಿಕೆಟ್ ಕೊಡಿಸುವ ವಿಷಯದಲ್ಲಿ ನಾನು ಘೋರ ತಪ್ಪು ಮಾಡಿದ್ದೇನೆ. ಹೀಗಾಗಿ ಜಿಲ್ಲೆಯ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದಿದ್ದರು.
ಕಾಂಗ್ರೆಸ್‌ಗೆ ದುರಂತ ಕಟ್ಟಿಟ್ಟಬುತ್ತಿ
ಶ್ರೀನಿವಾಸಗೌಡರು ಯಾರನ್ನೂ ಬೆಳೆಸಿಲ್ಲ. ಕೇವಲ ಮೂರು ಗ್ರಹಗಳನ್ನು ಮಾತ್ರವೇ ಬೆಳೆಸಿದ್ದಾರೆ. ಈಗ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆಯಿಲ್ಲ. ಅತ್ತ ಸ್ವರ್ಗಕ್ಕೂ ಹೋಗಲಾರದೆ, ನರಕಕ್ಕೂ ಹೋಗಲಾರದೆ ಅಂತರ್ ಪಿಶಾಚಿಯಾಗಿದ್ದು, ಹಾಗೆಯೇ ಇರಲಿ. ಅವರು ಹೋದರೆ ನಮ್ಮ ಪಕ್ಷಕ್ಕೆ ಅನುಕೂಲವಾಗಲಿದೆ. ಆದರೆ, ಕಾಂಗ್ರೆಸ್‌ಗೆ ಮಾತ್ರ ದುರಂತ ಮಾತ್ರ ಕಟ್ಟಿಟ್ಟಬುತ್ತಿ ಎಂದು ಲೇವಡಿ ಮಾಡಿದ್ದರು.
ಕೆಸಿ ವ್ಯಾಲಿಯಿಂದ ಬೆಳೆಗಳು ಹಾಳು
ಕೆಸಿ ವ್ಯಾಲಿ (KC Vally) ನೀರಿನಿಂದ ನಮ್ಮ ಜಿಲ್ಲೆಯಲ್ಲಿ ಬೆಳೆದ ಟೊಮೆಟೋ, ರೇಷ್ಮೆ ಬೆಳೆಗೆ ಹಳದಿ ಕಾಮಾಲೆ ರೋಗ ಬಂದಿದೆ. ಹೀಗೆಯೇ ಮುಂದುವರೆದರೆ ರೈತರ ಗತಿಯೇನು ಎಂದು ಕೆಸಿವ್ಯಾಲಿ ನೀರನ್ನು ಎಚ್ಡಿಕೆ (HD Kumaraswamy) ಕೊಚ್ಚೆ ನೀರು ಅಂದಿರುವುದು ಸತ್ಯ. ನಾನೂ ಹೇಳುತ್ತಿದ್ದೇನೆ ಅದು ಕೊಚ್ಚೇ ನೀರು ಎಂದಿದ್ದರು.