ಜೆಡಿಎಸ್ ತೆಕ್ಕೆಗೆ ಒಲಿಯಿತು ಅಧಿಕಾರ

By Kannadaprabha NewsFirst Published Feb 4, 2021, 11:35 AM IST
Highlights

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾದ ಬೆನ್ನಲ್ಲೇ ಇದೀಗ ಅಧಿಕಾರವು ಜೆಡಿಎಸ್ ತೆಕ್ಕೆಗೆ ಒಲಿದಿದೆ.  ಪೈಪೋಟಿಯಲ್ಲಿ ಜೆಡಿಎಸ್‌ಗೆ ಜಯ ಸಿಕ್ಕಿದೆ.

ಭೇರ್ಯ (ಫೆ.04):  ಸಾಲಿಗ್ರಾಮ ತಾಲೂಕು ಶೀಗೇವಾಳು ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ ಪಾಲಾಗಿದೆ.

ಅಧ್ಯಕ್ಷರಾಗಿ ಜೆಡಿಎಸ್‌ ಬೆಂಬಲಿತರಾದ ತುಳಿಸಿರಾಮ್‌ ಹಾಗೂ ಉಪಾಧ್ಯಕ್ಷರಾಗಿ ಡಿ.ಎಸ್‌.ಶಶಿಕಲಾ ಆಯ್ಕೆಯಾದರು.   ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುಳಿ ವರ್ಗ ಎ(ಅ) ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾಗಿತ್ತು.

 ಅಧ್ಯಕ್ಷ ಸ್ಥಾನಕ್ಕೆ ತುಳಸಿರಾಮ್‌ ಹಾಗೂ ಕಾಳಮ್ಮನಕೊಪ್ಪಲು ಕೃಷ್ಣೇಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಎಸ್‌.ಶಶಿಕಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ತುಳಸಿರಾಮ್‌ 10 ಮತಗಳನ್ನು ಪಡೆದು ಕೊಂಡು ಅಧ್ಯಕ್ಷರಾಗಿ ಆಯ್ಕೆಯಾದರು, ಇವರ ಪ್ರತಿಸ್ಪರ್ಧಿ ಕಾಳಮ್ಮನಕೊಪ್ಪಲು ಕೃಷ್ಣೇಗೌಡ 7 ಮತಗಳನ್ನು ಪರಾಭವಗೊಂಡರು.

ಬಿಜೆಪಿ ಜೊತೆ ಜೆಡಿಎಸ್ ಹೋಗುತ್ತಿರುವುದಕ್ಕೆ ಕೊನೆಗೂ ಕಾರಣ ಬಿಚ್ಚಿಟ್ಟ ಕುಮಾರಣ್ಣ ...

ಉಪಾಧ್ಯಕ್ಷರಾಗಿ ಡಿ.ಎಸ್‌.ಶಶಿಕಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಎಂದು ಚುನಾವಣಾಧಿಕಾರಿ ಜಿ.ಪಂ. ಎಇಇ ಆನಂದಮೂರ್ತಿ ಹಾಗೂ ಜೆಇ ಸ್ವಾಮಿ ತಿಳಿಸಿದರು. 

ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ತಾಲೂಕು ಜಾದಳ ಮಾಜಿ ಅಧ್ಯಕ್ಷ ಚಂದ್ರಶೇಖರ್‌ ಹಾರಹಾಕಿ ಅಭಿನಂದಿಸಿ ಮಾತನಾಡಿದ ಅವರು ಶಾಸಕ ಸಾ.ರಾ.ಮಹೇಶ್‌ ಅವರ ಅಭಿವೃದ್ಧಿ ಕಾರ್ಯಕ್ಕೆ ಕೆ.ಆರ್‌.ನಗರ ಹಾಗೂ ಸಾಲಿಗ್ರಾಮ ತಾಲೂಕಿನಲ್ಲಿ ಈಗಾಲೇ 11 ಗ್ರಾಮ ಪಂಚಾಯ್ತಿಯಲ್ಲಿ ಜಾದಳ ಅಧಿಕಾರ ಹಿಡಿದಿದ್ದು, ನಾಳೆ ನಾಡಿದ್ದು ನಡೆಯುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸಹ ನಮ್ಮ ಪಕ್ಷದ ಅಭ್ಯರ್ಥಿಗಳೇ ಅಧಿಕಾರ ಹಿಡಿಯಲಿದ್ದಾರೆ ತಿಳಿಸಿದರು.

click me!