ನನಗೆ ಸಿಡಿನೂ ಗೊತ್ತಿಲ್ಲ, ಸೀರೆನೂ ಗೊತ್ತಿಲ್ಲ ಎಂದ ಬಿಜೆಪಿ ನಾಯಕ

By Kannadaprabha NewsFirst Published Feb 4, 2021, 11:12 AM IST
Highlights

ಬುಡಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು ನನಗೆ ಬಹಳ ನೋವಾಗಿದೆ| ನಾನು ಬುಡಾ ಅಧ್ಯಕ್ಷನಾದಾಗ ಬಿಜೆಪಿ ಕಾರ್ಯಕರ್ತರಲ್ಲ, ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರು ಖುಷಿ ಪಟ್ಟಿ​ದ್ದರು| ಹಬ್ಬ ಮಾಡಿ ಹೋಳಿಗೆ ಊಟ ಮಾಡಿದ್ದರು| ನನ್ನ ಅಧ್ಯಕ್ಷ ಸ್ಥಾನದಿಂದ ತೆಗೆದಾಗ ಕಾಂಗ್ರೆಸ್‌, ಜನತಾದಳದ ಕಾರ್ಯಕರ್ತರು ನೋವು ಪಟ್ಟು ಸಾಮಾನ್ಯ ಕಾರ್ಯ​ಕ​ರ್ತರ ಪರಿ​ಸ್ಥಿತಿ ಏನು ಎಂದು ಪ್ರಶ್ನಿ​ಸಿ​ದ್ದರು:ರಾಮಲಿಂಗಪ್ಪ| 

ಹೊಸಪೇಟೆ(ಫೆ.04): ನಾನು ಬ್ಲಾಕ್‌ಮೇಲ್‌ ಮಾಡೋನಲ್ಲ, ನನಗೆ ಸಿಡಿನೂ ಗೊತ್ತಿಲ್ಲ, ಸೀರೆನೂ ಗೊತ್ತಿಲ್ಲ ಎಂದು ಬುಡಾ ಮಾಜಿ ಅಧ್ಯಕ್ಷ ಕೆ.ಎ. ರಾಮಲಿಂಗಪ್ಪ ಮಾರ್ಮಿಕವಾಗಿ ನುಡಿದರು.

ನಗ​ರ​ದಲ್ಲಿ ಬುಧ​ವಾರ ಸುದ್ದಿ​ಗೋ​ಷ್ಠಿ​ಯಲ್ಲಿ ಪ್ರಶ್ನೆಗೆ ಉತ್ತ​ರಿ​ಸಿದ ಅವರು, ನಾನು ಬುಡಾ ಅಧ್ಯಕ್ಷ ಸ್ಥಾನ ಕೇಳಿರಲಿಲ್ಲ. ಸಿಎಂ ಆಫೀಸ್‌ನಿಂದಲೇ ಕರೆ ಬಂದಿತ್ತು. ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮತ್ತೆ ಮೊದಲಿದ್ದವರಿಗೆ ಅಧಿಕಾರ ನೀಡಲಾಗಿದೆ. ಇದು ರೆಡ್ಡಿ ಬ್ರದರ್ಸ್‌ಗೆ ಹಿನ್ನಡೆ, ಮೂಲ ಬಿಜೆಪಿಗರ ಮುನ್ನಡೆ ಅಲ್ಲ. ಬಿಜೆಪಿ ಮುನ್ನಡೆ ಅಷ್ಟೇ. ನಾನು ವ್ಯಕ್ತಿ ಪೂಜೆ ಮಾಡುವು​ನಲ್ಲ, ಪಕ್ಷದ ಪೂಜೆ ಮಾಡುತ್ತೇನೆ ಎಂದ​ರು.

ಬುಡಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದು ನನಗೆ ಬಹಳ ನೋವಾಗಿದೆ. ನಾನು ಬುಡಾ ಅಧ್ಯಕ್ಷನಾದಾಗ ಬಿಜೆಪಿ ಕಾರ್ಯಕರ್ತರಲ್ಲ, ಕಾಂಗ್ರೆಸ್‌, ಜೆಡಿಎಸ್‌ ಕಾರ್ಯಕರ್ತರು ಖುಷಿ ಪಟ್ಟಿ​ದ್ದರು. ಹಬ್ಬ ಮಾಡಿ ಹೋಳಿಗೆ ಊಟ ಮಾಡಿದ್ದರು. ನನ್ನ ಅಧ್ಯಕ್ಷ ಸ್ಥಾನದಿಂದ ತೆಗೆದಾಗ ಕಾಂಗ್ರೆಸ್‌, ಜನತಾದಳದ ಕಾರ್ಯಕರ್ತರು ನೋವು ಪಟ್ಟು ಸಾಮಾನ್ಯ ಕಾರ್ಯ​ಕ​ರ್ತರ ಪರಿ​ಸ್ಥಿತಿ ಏನು ಎಂದು ಪ್ರಶ್ನಿ​ಸಿ​ದ್ದರು ಎಂದ​ರು.

ವಾಡಾ ಅಧ್ಯಕ್ಷ ಸ್ಥಾನ ನಾನೊಲ್ಲೆ: ಸಿಎಂ ಬಿಎಸ್‌ವೈಗೆ ಪತ್ರ ಬರೆದ ಬಿಜೆಪಿ ಮುಖಂಡ

ಪಕ್ಷದ ಜಿಲ್ಲಾಧ್ಯಕ್ಷರ ಗಮನಕ್ಕೆ ಬಾರದೆ ಇದೆಲ್ಲ ಆಗಿವೆ. ಯಾರು ಒತ್ತಡ ತಂದು ನನ್ನನ್ನು ಅಧ್ಯಕ್ಷ ಸ್ಥಾನ​ದಿಂದ ಕೇಳಿ​ಸಿ​ದ್ದಾರೋ ಅವ​ರಿಗೆ ಕೋಟಿ ಕೋಟಿ ನಮ​ನ​ಗಳು. ರಾಮಲಿಂಗಪ್ಪ ಬಳ್ಳಾರಿಗಷ್ಟೇ ಗೊತ್ತಿದ್ದ, ಈ ಘಟ​ನೆ​ಯಿಂದ ರಾಜ್ಯಕ್ಕೆ ಗೊತ್ತಾ​ಯಿತು. ಅವ​ರಿಗೆ ಹೂವಿನ ಹಾರ ಹಾಕು​ತ್ತೇನೆ. ಪಕ್ಷ ಕಟ್ಟುವ ವ್ಯಕ್ತಿ ನಾನಾ​ಗಿ​ದ್ದರೂ ನನ್ನನ್ನು ತುಳಿ​ದಿ​ದ್ದಾರೆ. ತುಳಿ​ದಷ್ಟು ನಾನು ಬೆಳೆ​ಯುವೆ. ನನಗೆ ಅಧಿ​ಕಾರ ಮುಖ್ಯ​ವಲ್ಲ, ಪಕ್ಷ ಮುಖ್ಯ ಎಂದು ಮಾರ್ಮಿ​ಕ​ವಾಗಿ ಹೇಳಿ​ದ​ರು.
ಅಧ್ಯಕ್ಷ ಸ್ಥಾನ​ದಿಂದ ಕೆಳ​ಗಿ​ಸಿ​ರು​ವುದು ಅವ​ಮಾ​ನ​ವಾ​ಗಿದೆ, ನೋವಾ​ಗಿದೆ. ಆದರೆ, ಪಕ್ಷಕ್ಕೆ ಯಾರೇ ಬಂದರೂ, ಪಕ್ಷ ಬಿಟ್ಟು ಹೋದರೂ ನಾನು ಪಕ್ಷ​ದ​ಲ್ಲಿಯೇ ಇದ್ದೇನೆ. ಹೀಗಾಗಿ ನಾನು ಯಾರಿಗೂ ಬ್ಲಾಕ್‌​ಮೇಲ್‌ ಮಾಡು​ವ​ವ​ನಲ್ಲ ಎಂದ​ರು.
ನನ್ನ ಗುರಿ ಪಕ್ಷ ಬೆಳೆಸುವುದು. ಹತ್ತು ವಿಧಾನಸಭೆ ಕ್ಷೇತ್ರ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ ಇರಬೇಕು. ವ್ಯಕ್ತಿ ಪೂಜೆ ಮಾಡೋರು, ಬುಡಾ ಅಧ್ಯಕ್ಷ ಸ್ಥಾನ ತೆಗೆದುಕೊಂಡು ಬಂದಿದ್ದಾರೆ ವಿನಃ ಸುಲಭವಾಗಿ ಅಲ್ಲ ಎಂದು ಹೇಳಿ​ದ​ರು.

ಇಂದು ಯಡಿಯೂರಪ್ಪನವರು ಸರ್ಕಾರ ಉಳಿಸಿಕೊಂಡಿದ್ದಾರೆ. ನಮಗೆ ಅಷ್ಟೇ ಸಾಕು, ನನಗೆ ಪದವಿ ಮುಖ್ಯವಲ್ಲ. ಸರ್ಕಾರ ಇದ್ದರೆ ತಾನೇ ನಮ್ಮ ಭಾಗದ ಶಾಸ​ಕರು ಸಚಿ​ವ​ರಾ​ಗೋದು, ಅವರು ಸಚಿ​ವ​ರಾ​ದರೆ ನಾನು ಮೊದಲು ಖುಷಿ ಪಡು​ತ್ತೇನೆ ಎಂದ​ರು.
 

click me!