ಮುಂದುವರಿದ JDS-ಕೈ ಮೈತ್ರಿ : ಮೈಸೂರು ಮೇಯರ್ ಆಗಿ ರುಕ್ಮಿಣಿ ಮಾದೇಗೌಡ

By Suvarna News  |  First Published Feb 24, 2021, 1:22 PM IST

ಮೈಸೂರಿನಲ್ಲಿ ಜೆಡಿಎಸ್‌ ಕಾಂಗ್ರೆಸ್ ಮೈತ್ರಿ ಮುಂದುವರಿದಿದೆ.  ಕೈ ಎತ್ತುವ ಮೂಲಕ ಜೆಡಿಎಸ್‌ ಗೆ ಕಾಂಗ್ರೆಸ್ ಸದಸ್ಯರು ಬೆಂಬಲ ಕೊಟ್ಟಿದ್ದು ಜೆಡಿಎಸ್ ಅಭ್ಯರ್ಥಿ ರುಕ್ಮಿಣಿ ಮೈಸೂರು ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.


ಮೈಸೂರು (ಫೆ.24):  ಸಾಕಷ್ಟು ಚರ್ಚೆಗೆ ಆಸ್ಪದವಾಗಿ ಕುತೂಹಲ ಸೃಷ್ಟಿಸಿದ್ದ ಮೈಸೂರು ಮೇಯರ್ ಚುನಾವಣೆಗೆ ತೆರೆ ಬಿದ್ದಿದೆ.  ರುಕ್ಮಿಣಿ ಮಾದೇಗೌಡ ಮೈಸೂರು ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 
 
ಮೈಸೂರಿನಲ್ಲಿ ಮತ್ತೆ ಕಾಂಗ್ರೆಸ್ - ಜೆಡಿಎಸ್ ನಡುವಿನ ಮೈತ್ರಿ ಮುಂದುವರಿದಿದೆ. ಕೈ ಎತ್ತುವ ಮೂಲಕ ಕಾಂಗ್ರೆಸ್ ಸದಸ್ಯರು ತಮ್ಮ ಬೆಂಬಲ ಸೂಚಿಸಿದ್ದು ಜೆಡಿಎಸ್‌ ಅಭ್ಯರ್ಥಿ ರುಕ್ಮಿಣಿ ಮಾದೇಗೌಡ ನೂತನ ಮೇಯರ್ ಆಗಿ ಆಯ್ಕೆಯಾದರು.   ಜೆಡಿಎಸ್-ಕಾಂಗ್ರೆಸ್ ಮೈತ್ರಿಯಿಂದ ಇದೇ ಮೊದಲ ಬಾರಿ ಮೇಯರ್ ಆಗುವ ಬಿಜೆಪಿ ಕನಸು ಭಗ್ನವಾಗಿದೆ. 

ಮೈಸೂರು ಮೇಯರ್‌ ಚುನಾವಣೆ: ಮೈತ್ರಿ ಬಗ್ಗೆ ದೇವೇಗೌಡ್ರು, ಕುಮಾರಣ್ಣ ಪ್ಲ್ಯಾನೇ ಬೇರೆ! ...

Tap to resize

Latest Videos

ಜೆಡಿಎಸ್ ಅಭ್ಯರ್ಥಿ ಪರ ಕಾಂಗ್ರೆಸ್ನ ಎಲ್ಲಾ ಸದಸ್ಯರು  ಮತ ಹಾಕಿದರು.  ರುಕ್ಮಿಣಿ ಪರ 43 ಮತಗಳು ಬಂದಿದ್ದು , ಜೆಡಿಎಸ್ 20, ಕಾಂಗ್ರೆಸ್ 20, ಪಕ್ಷೇತರ 3 ಸದಸ್ಯರು ಮತ ಚಲಾಯಿಸಿದರು. 

ಈ ಮೂಲಕ ಮೈಸೂರಿನ 23ನೇ ಮೇಯರ್ ಆಗಿ ರುಕ್ಮಿಣಿ ಮಾದೇಗೌಡ ಅವರು ಆಯ್ಕೆಯಾಗಿದ್ದು,  ಚುನಾವಣಾ ಅಧಿಕಾರಿ ಪ್ರಕಾಶ್ ಅಧಿಕೃತ ಘೋಷಣೆ ಮಾಡಿದರು. 

ಉಪ ಮೇಯರ್ ಚುನಾವಣೆಗೆ ಜೆಡಿಎಸ್‌ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ತಮ್ಮ ನಮಪತ್ರ ವಾಪಸ್ ಪಡೆದಿದ್ದು, ಕಾಂಗ್ರೆಸ್‌ ಅನ್ವರ್ ಬೇಗ್ ಉಪ ಮೇಯರ್ ಆಗಿ ಆಯ್ಕೆಯಾದರು. 

'ಡಿಕೆಶಿ ಮೇಲೂ ಒತ್ತಡ ಹಾಕಿದ್ದಾರೆ : ಟಾರ್ಗೆಟ್ 2023 - ಕಿಂಗ್ ಮೇಕರ್ ಸ್ಥಾನ ಬಿಟ್ಟು ಕೊಡಲ್ಲ' .

ಸಮೀವುಲ್ಲಾ ನಾಮಪತ್ರ ವಾಪಸ್‌ನಿಂದ ಕಾಂಗ್ರೆಸ್‌ಗೆ ಉಪಮೇಯರ್ ಸ್ಥಾನ ದೊರೆಯಿತು. ಈ ಮೂಲಕ ಮತ್ತೆ ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಮುಂದುವರಿಯಿತು.  ಹಲವು ದಿನಗಳ ಚರ್ಚೆಗೆ ಕಾರಣವಾಗಿದ್ದ ಮೈಸೂರು ಮೇಯರ್ ಚುನಾವಣಾ ಕುತೂಹಲಕ್ಕೆ ಈ ಮೂಲಕ ತೆರೆ ಬಿದ್ದಂತಾಯಿತು. 

ನೂತನ ಮೇಯರ್ ಮೊದಲ ಪ್ರತಿಕ್ರಿಯೆ : ಮೇಯರ್ ಆಗಿ ಆಯ್ಕೆ ಆಗಿದಕ್ಕೆ ತುಂಬಾ ಸಂತೋಷ ಆಗಿದೆ. ನಮ್ಮ ನಾಯಕರು ಕುಮಾರಸ್ವಾಮಿ, ಸಾ.ರಾ.ಮಹೇಶ್, ಜಿಟಿ.ದೇವೇಗೌಡರಿಗೆ ಧನ್ಯವಾದ. ಕಾಂಗ್ರೆಸ್ ನ ತನ್ವೀರ್‌ಸೇಠ್, ಧೃವನಾರಾಯಣ್ ಸೇರಿ ಎಲ್ಲರೂ ಸಪೋರ್ಟ್ ಮಾಡಿದ್ದರು. ನಮ್ಮ ಹಾಗೂ ಕಾಂಗ್ರೆಸ್ ಸದಸ್ಯರ ಬೆಂಬಲದಿಂದ ಅಧಿಕಾರ ಪಡೆದಿದ್ದೇನೆ.  ಮೈಸೂರನ್ನು ಮತ್ತೆ ನಂಬರ್ 1 ಕ್ಲೀನ್ ಸಿಟಿ ಮಾಡಲು ಶ್ರಮಿಸುವೆ ಎಂದು  ನೂತನ ಮೇಯರ್ ರುಕ್ಮಿಣಿ ಮಾದೇಗೌಡ ಹೇಳಿದರು.

click me!