ಎಲ್ಲಾ ಸ್ಥಾನಗಳಲ್ಲಿ ಗೆದ್ದು ಬೀಗಿದ ದಳಪತಿಗಳು : 13 ಸ್ಥಾನ ಜೆಡಿಎಸ್ ವಶ

Kannadaprabha News   | Asianet News
Published : Apr 04, 2021, 11:08 AM ISTUpdated : Apr 04, 2021, 01:03 PM IST
ಎಲ್ಲಾ ಸ್ಥಾನಗಳಲ್ಲಿ ಗೆದ್ದು ಬೀಗಿದ ದಳಪತಿಗಳು : 13 ಸ್ಥಾನ ಜೆಡಿಎಸ್ ವಶ

ಸಾರಾಂಶ

ದಳಪತಿಗಳು ಚುನಾವಣೆಯೊಂದರಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದು ಬೀಗಿದ್ದಾರೆ. ಒಟ್ಟು 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಜೆಡಿಎಸ್ ತನ್ನ ವಶಕ್ಕೆ ಪಡೆದುಕೊಂಡಿದೆ. 

 ಸಾಲಿಗ್ರಾಮ (ಏ.04): ಸಾಲಿಗ್ರಾಮದ ಪ್ರತಿಷ್ಠಿತ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಚುನಾವಣೆಯಲ್ಲಿ ಎಲ್ಲ 13 ಸ್ಥಾನಗಳಲ್ಲೂ ಜೆಡಿಎಸ್ ಬೆಂಬಲಿತರು  ಆಯ್ಕೆಯಾಗಿದ್ದಾರೆ. ಮಹಿಳಾ ಮೀಸಲು ಎರಡು ಸ್ಥಾನ ಹಾಗೂ ಪ. ಜಾರಿ ಹಿಂದುಳಿದ ಎ ಮೀಸಲು ತಲಾ ಒಂದು ಸ್ಥಾನ ಸೇರಿದಂತೆ ನಾಲ್ಕು ಮಂದಿ ಅವಿರೋಧ ಆಯ್ಕೆಯಾಗಿದರೆ ಉಳಿದ 9 ನಿರ್ದೇಶಕರ ಸ್ಥಾನಗಳಿಗೆ  ಚುನಾವಣೆ ನಡೆಯಿತು.

ಮಾಜಿ ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಸಂಬಂಧಿ ಭರತ್ 493 ಮತ ಪಡೆಯುವ ಮೂಲಕ ಮೊದಲ ಸ್ಥಾನ  ಪಡೆದರು. ಉಳಿದಂತೆ ಆನಂದಕುಮಾರ್, ಮಾಜಿ ಅಧ್ಯಕ್ಷ ಎಸ್‌.ಎ.ಮಹೇಶ್, ಹರೀಶ್, ಮಂಜೇಗೌಡ, ಎಸ್.ಡಿ.ಕುಮಾರ್, ಶ್ರೀನಿವಾಸ್ ಅವರು ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದರು. 

ಈಶ್ವರಪ್ಪ- ಯಡಿಯೂರಪ್ಪ ಅಸಮಾಧಾನ ಶಮನಕ್ಕೆ ಮುಂದಾದ ಹೈಕಮಾಂಡ್!

ಹಿಂದುಳಿದ ಬಿ ವರ್ಗದಿಂದ ಮಂಜುನಾತ್ ಹಾಗೂ ಪ. ಪಂಗಡದಿಂದ ಎಸ್.ಎಂ ರಾಮನಾಯಕ್  ಆಯ್ಕೆಯಾದರು.  ಮಹಿಳಾ ಮೀಸಲಿನಲ್ಲಿ ಲೀಲಾವತಿ, ಕಾಮಾಕ್ಷಮ್ಮ, ಹಿಂದುಳಿದ ಎ ವರ್ಗದಿಂದ ಕೊಟೆಗೌಡ, ಪ.ಜಾತಿ ಮೀಸಲಿನಿಂದ ಶಿವಯ್ಯ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀಧರ್ ತಿಳಿಸಿದರು. 

ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಕಾರ್ಯದರ್ಶಿ ಹೋವಿಂದರಾಜು ಸಿಬ್ಬಂದಿ ಕೃಷ್ಣ, ಅನಂತ, ರಮೇಗೌಡ, ಸಂದೀಪ್ ಪಾಲ್ಗೊಮಡಿದ್ದರು. ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ಗ್ರಾಪಂ  ಮಾಜಿ ಅಧ್ಯಕ್ಷ ಎಸ್ ಆರ್ ದಿನೇಶ್ ಇದ್ದರು.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ