ಸಿ.ಟಿ.ರವಿ, ಕರಂದ್ಲಾಜೆ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ

By Kannadaprabha NewsFirst Published Apr 22, 2020, 1:21 PM IST
Highlights

ಸಚಿವ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಚೋದನಕಾರಿ ಹೇಳಿಕೆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆ. ಇಂತಹವರ ವಿರುದ್ಧವು ಮುಖ್ಯಮಂತ್ರಿಗಳು ಕ್ರಮವನ್ನು ಜರುಗಿಸಬೇಕು ಎಂದು ಜೆಡಿಎಸ್‌ ವಕ್ತಾರ ಎನ್‌.ಆರ್‌. ರವಿಚಂದ್ರೇಗೌಡ ಆಗ್ರಹಿಸಿದ್ದಾರೆ.

ಮೈಸೂರು(ಏ.22): ಕೊರೋನಾ ವಿರುದ್ಧ ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಪೋಲಿಸ್‌ ಅಧಿಕಾರಿಗಳು ಸಮಾಜದ ಸ್ವಾಸ್ಥ್ಯ ಕೆಡದಂತೆ ಕೊರೋನಾ ವಿರುದ್ಧ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ.

ಆದರೆ, ಸಚಿವ ಸಿ.ಟಿ. ರವಿ, ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರಚೋದನಕಾರಿ ಹೇಳಿಕೆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆ. ಇಂತಹವರ ವಿರುದ್ಧವು ಮುಖ್ಯಮಂತ್ರಿಗಳು ಕ್ರಮವನ್ನು ಜರುಗಿಸಬೇಕು ಎಂದು ಜೆಡಿಎಸ್‌ ವಕ್ತಾರ ಎನ್‌.ಆರ್‌. ರವಿಚಂದ್ರೇಗೌಡ ಆಗ್ರಹಿಸಿದ್ದಾರೆ.

ಪ್ರತಿ ಜಿಲ್ಲೇಲಿ 2, ಮೇ ತಿಂಗಳೊಳಗೆ 60 ಕೋವಿಡ್‌ ಲ್ಯಾಬ್‌: ಸುಧಾಕರ್

ಕೊರೋನಾ ವೈರಸ್‌ ರಾಜಕೀಯವನ್ನು ಮೀರಿದ್ದು, ಇಲ್ಲಿ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದು, ಇಲ್ಲಿ ಯಾರು ಕೂಡ ರಾಜಕೀಯವನ್ನು ಬೆರೆಸಬಾರದು. ಇದರಿಂದ ಬಡವರು, ಅನಕ್ಷರಸ್ಥರು ತಮ್ಮ ಜೀವವನ್ನು ಕಳೆದುಕೊಳ್ಳುತ್ತಾರೆ. ಅವರ ಅಜ್ಞಾನದಿಂದ ಇಡೀ ಸಮುದಾಯಕ್ಕೆ ಕಂಠಕವಾಗುತ್ತಾರೆ.

'ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ ಅಂತವ್ರ ಕೈ-ಕಾಲು ಮುರಿಯಿರಿ'

ಎಲ್ಲಾ ಜಾತಿ, ಧರ್ಮದ ಜನರು ಕೊರೋನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸಹಕರಿಸಬೇಕು. ಪಾದರಯನಪುರದಲ್ಲಿ ಶುಶ್ರೂಷೆಗೆ ಕರೆದುಕೊಂಡು ಹೋಗಲು ಬಂದಿದ್ದ ವೈದರು, ಪೊಲೀಸರು, ಆಶಾ ಕಾರ್ಯಕರ್ತೆಯರ ಮೇಲೆ ದಾಳಿಮಾಡಿ ಸೀಲ್ಡ್‌ ಡೌನ್‌ ಮುರಿದಿರುವುದು ಖಂಡನಿಯ. ಇಲ್ಲಿ ಯಾರೋ ಕೆಲವು ಕಿಡಿಗೇಡಿಗಳು ಮಾಡುವ ಕೆಲಸದಿಂದ ಮುಗ್ಧ ಜನರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

click me!