ಸಮಾಜ ಬಾಂಧವರು ಸಾಗರೋಪಹಾದಿ ಸಂಖ್ಯೆಯಲ್ಲಿ ಪಾಲ್ಗೊಂಡು ಪಂಚಮಸಾಲಿ ಸ್ವಾಭಿಮಾನ ಸಮಾವೇಶ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬೈಲಹೊಂಗಲ(ನ.18): ಸ್ವಾತಂತ್ರ್ಯದ ಸಂಗ್ರಾಮದ ಬೆಳ್ಳಿ ಚುಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮನ ಐಕ್ಯ ಸ್ಥಾನ, ಗಂಡು ಮೆಟ್ಟಿನ ಹೋರಾಟಕ್ಕೆ ಹೆಸರು ವಾಸಿಯಾದ ಈ ನಾಡಿನಲ್ಲಿ ಸಮಾಜ ಬಾಂಧವರು ಸಾಗರೋಪಹಾದಿ ಸಂಖ್ಯೆಯಲ್ಲಿ ಪಾಲ್ಗೊಂಡು ಪಂಚಮಸಾಲಿ ಸ್ವಾಭಿಮಾನ ಸಮಾವೇಶ ಯಶಸ್ವಿಗೊಳಿಸಬೇಕೆಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.
ಅವರು ಗುರುವಾರ ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಪಂಚಮಸಾಲಿ ಸ್ವಾಭಿಮಾನ ಸಮಾವೇಶ ನಡೆಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ನಾಡು ಕ್ರಾಂತಿಕಾರಿಗಳ ನಾಡು ಕಿತ್ತೂರು ನಾಡಿನ ಪುಣ್ಯಭೂಮಿಯ ಪ್ರತಿ ಕಣಕಣದಲ್ಲಿ ಆಗಾಧ ಶಕ್ತಿ ಹೊಂದಿದ್ದು ಬೈಲಹೊಂಗಲದ ಚೆನ್ನಮ್ಮನ ಐಕ್ಯ ಸ್ಥಾನದಿಂದ ಪಾದಯಾತ್ರೆ ಮೂಲಕ 2012ರಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ ಸಂದರ್ಭದಿಂದ ಇಲ್ಲಿಯವರೆಗೆ ಸರ್ಕಾರ ಟೊಳ್ಳು ಭರವಸೆ ನೀಡುತ್ತಾ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ ವಿನಃ ಯಾವುದೇ ಕಾರ್ಯರೂಪಕ್ಕೆ ತಂದಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳಿಗಿನ್ನೂ ಇಲ್ಲ ಶೂ-ಸಾಕ್ಸ್ ಭಾಗ್ಯ: ಬರಿಗಾಲಲ್ಲಿ ಶಾಲೆಗೆ ಬರುತ್ತಿದ್ದಾರೆ ಬಡವರ ಮಕ್ಕಳು..!
ಡಿ.5ರಂದು ಬೃಹತ್ ಸಮಾವೇಶ:
ಈಗ ಹೋರಾಟ ಅಂತಿಮ ಘಟ್ಟಕ್ಕೆ ತಲುಪಿ ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ ಎನ್ನುವ ತಾರ್ಕಿಕ ಅಂತ್ಯಕ್ಕೆ ಬಂದಿದ್ದು, ಈಗ ಮೈ ಮರೆಯದೇ ಸಮಾಜದ ಎಲ್ಲ ಬಂಧುಗಳು ಒಗ್ಗಟ್ಟಾಗಿ ಪಂಚಮಸಾಲಿ ಬಡ ಮಕ್ಕಳಿಗೆ 2ಎ ಮೀಸಲಾತಿ ದೊರಕಿಸಿಕೊಡಲು ಬರುವ ಡಿ.5 ರಂದು ಹೊಸೂರ ರಸ್ತೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆಯ ಮೈದಾನದಲ್ಲಿ ಬೃಹತ್ ಸ್ವಾಭಿಮಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕುಟುಂಬ ಸದಸ್ಯರು ಎಲ್ಲರೂ ಭಾಗವಹಿಸಿ ಸರ್ಕಾರದ ಕಣ್ಣು ತೆರೆಸಬೇಕು. ಈ ಕಾರ್ಯಕ್ರಮಕ್ಕೆ ಪಂಚಮಸಾಲಿ ಸಮಾಜದ ನಾಯಕ ಕೇಂದ್ರದ ಮಾಜಿ ಸಚಿವ, ಹಾಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಹುಬ್ಬಳ್ಳಿ- ಧಾರವಾಡ ಶಾಸಕ ಅರವಿಂದ ಬೆಲ್ಲದ, ಎಚ್.ಎಸ್.ಶಿವಶಂಕರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಸಚಿವರಾದ ಶಶಿಕಾಂತ ನಾಯಕ, ಎ.ಬಿ.ಪಾಟೀಲ ಹಾಗೂ ಇನ್ನು ಅನೇಕ ಪಂಚಮಸಾಲಿ ನಾಯಕರು ಆಗಮಿಸಲಿದ್ದಾರೆ ಎಂದರು.
Chikkodi: ಕೋರ್ಟ್ ಆದೇಶ ಮಾಡಿದರೂ ಪರಿಹಾರ ನೀಡದ ಅಧಿಕಾರಿಗಳ ವಾಹನಗಳು ಸೀಜ್!
ತಾಲೂಕಾಧ್ಯಕ್ಷ ಶ್ರೀಶೈಲ ಬೋಳಣ್ಣವರ, ಮಹಾಂತೇಶ ತುರಮರಿ, ನಿಂಗಪ್ಪ ಪಿರಗೋಜಿ, ಡಾ.ಮಂಜುನಾಥ ಮುದಕನಗೌಡರ, ಜಗದೀಶ ಬೂದಿಹಾಳ, ರಾಜಶೇಖರ ಮೂಗಿ, ಕಾರ್ತಿಕ ಪಾಟೀಲ, ಶಂಕರ ಮಾಡಲಗಿ, ನಿಂಗಪ್ಪ ಚೌಡಣ್ಣವರ ಮಾತನಾಡಿದರು. ಜಿಲ್ಲಾಧ್ಯಕ್ಷ ಆರ್.ಕೆ.ಪಾಟೀಲ, ಎಮ್.ವೈ.ಸೋಮಣ್ಣವರ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮುರಗೇಶ ಗುಂಡ್ಲೂರ, ಬಸನಗೌಡ ಚಿಕ್ಕನಗೌಡರ, ಮಹಾಂತೇಶ ಮತ್ತಿಕೊಪ್ಪ, ಬಾಬು ಕುಡಸೋಮಣ್ಣವರ, ವೀರಬಸ್ಸು ಮುನವಳ್ಳಿ, ನಾಗರಾಜ ಮರಕುಂಬಿ, ಎಸ್.ಬಿ.ಪಾಟೀಲ, ಮಹಾಂತೇಶ ಕಳ್ಳಿಬಡ್ಡಿ, ಗುರುಪಾದ ಕಳ್ಳಿ, ಶ್ರೀಕಾಂತ ಸುಂಕದ, ಸಚಿನ ಪಟಾತ, ಮಹಾಂತೇಶ ಹೊಸಮನಿ, ಅಶೋಕ ಹುದ್ದಾರ, ಎಸ್.ಡಿ.ಗಂಗಣ್ಣವರ, ಮಡಿವಾಳಪ್ಪ ಹೋಟಿ, ಶಿವಾನಂದ ಕುಡಸೋಮಣ್ಣವರ, ಸಂಜಯ ಗಡತರನವರ, ಆಯ್.ಎಲ್.ಪಾಟೀಲ, ಮಹಾಂತೇಶ ಹೊಸೂರ, ಸಂಜಯ ಗಿರೆಪ್ಪಗೌಡರ, ಬಸವರಾಜ ಬೋಳಗೌಡರ, ಶಿವಾನಂದ ಶಿದ್ನಾಳ, ಮಹಾಂತೇಶ ಕಮತ, ಪ್ರಕಾಶ ಭರಮಗೌಡರ, ಉಮೇಶ ಬೋಳೆತ್ತಿನ, ವೀರಣಗೌಡ ಸಂಗಣ್ಣವರ, ವೀರಭದ್ರಪ್ಪ ಈಟಿ, ಮಹೇಶ ಹರಕುಣಿ, ಅಮಿತ ಪಾಟೀಲ, ವಿಜಯ ಬೋಳಣ್ಣವರ ತಾಲೂಕಿನ ಎಲ್ಲ ಗ್ರಾಮಗಳ ಮುಖಂಡರು ಸೇರಿದಂತೆ ನೂರಾರು ನಾಗರಿಕರು ಉಪಸ್ಥಿತರಿದ್ದರು.
ವಿರೇಶ ಹಲಕಿ ಸ್ವಾಗತಿಸಿದರು. ಮೀಸಲಾತಿ ಹಕ್ಕೋತ್ತಾಯ ಸಮಿತಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು. ರಾಜ್ಯ ಮಹಿಳಾ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಹಿಣಿ ಪಾಟೀಲ ವಂದಿಸಿದರು.