ಪಂಚಮಸಾಲಿ ಹೋರಾಟ: ಪೊಲೀಸರಿಂದಲೇ ಕಲ್ಲು ತೂರಾಟ, ಕೂಡಲ ಶ್ರೀ

By Girish Goudar  |  First Published Dec 11, 2024, 4:29 PM IST

ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದು ಬಿಡಬೇಕು. ಪಂಚಮಸಾಲಿ ಮೀಸಲಾತಿ ಹತ್ತಿಕ್ಕಲು ಕಂಡ ಕಂಡಲ್ಲಿ ಬ್ಯಾರಿಕೇಡ್‌ ಹಾಕಿದ್ರು. ಲಿಂಗಾಯತರ ಮೇಲೆ ಹಲ್ಲೆ ಮಾಡಿದ್ದು, ಲಿಂಗಾಯತ ವಿರೋಧಿ ಸರ್ಕಾರ ಇದು. ಲಿಂಗಾಯತ ಸಮಾಜ ಸರ್ಕಾರದ ಮೇಲೆ ಸಿಟ್ಟಾಗಿದೆ: ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ


ಬೆಳಗಾವಿ(ಡಿ.11):  2A ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಹೋರಾಟ ಮಾಡುತ್ತಾ ಬಂದಿದೆ. ಕಳೆದ ನಾಲ್ಕು ವರ್ಷಗಳಿಂದ ಶಾಂತ ರೀತಿಯ ‌ಹೋರಾಟ‌ ಮಾಡ್ತಾ ಬಂದಿದ್ವಿ. ನ್ಯಾಯಯುತ ಹೋರಾಟಕ್ಕೆ ನಿರಂತರ ‌ಪ್ರಯತ್ನ ಮಾಡಿದ್ದೆವು.  ಎಂದಿಗೂ ನಮ್ಮ ಜನ ಅಶಾಂತಿಗೆ ಅವಕಾಶ ಕೊಟ್ಟಿಲ್ಲ. 12 ಜಿಲ್ಲೆಗಳಲ್ಲಿ ಹೋರಾಟ ಮಾಡಿದಾಗ ಯಾವುದೇ ದೌರ್ಬಲ್ಯ ಆಗಿಲ್ಲ. ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದನೆ ಮಾಡಿಲ್ಲ ಎಂದು ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, ಸುವರ್ಣ ಸೌಧ ಬಳಿ ನ್ಯಾಯ ಕೇಳಬೇಕು ಎಂದು ಉಗ್ರ ಹೋರಾಟ ಮಾಡಿದ್ವಿ. ನಮ್ಮ ಪದಾಧಿಕಾರಿಗಳಿಗೆ ಪೊಲೀಸ್ ಇಲಾಖೆಯಿಂದ ನಿರಂತರ ಬೆದರಿಕೆ ಹಾಕಲಾಗಿದೆ. ರ್ಯಾಲಿಗೆ ಬರುವ ಟ್ರ್ಯಾಕ್ಟರ್ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊಡಸಿದ್ರು. ಕೊಂಡಸಕೊಪ್ಪ ಬಳಿ ರ್ಯಾಲಿ ಮಾಡಿ ಸಿಎಂ ಸಿದ್ದರಾಮಯ್ಯ ಒತ್ತಡ ತರುಲು ಪ್ರಯತ್ನ ಮಾಡಿದ್ದೆವು ಎಂದು ಹೇಳಿದ್ದಾರೆ. 

Tap to resize

Latest Videos

ಸಿಎಂ, ಪೋಲಿಸರ ಪ್ರೀ ಪ್ಲ್ಯಾನ್‌ನಿಂದ ಲಾಠಿ ಚಾರ್ಜ್‌: ಸಿದ್ದು ಸರ್ಕಾರದ ವಿರುದ್ಧ ಜಯಮೃತುಂಜಯ ಶ್ರೀಗಳ ಆಕ್ರೋಶ

ಮೂರು ಜನ ಸಚಿವರು ಒಳ್ಳೆಯ ಮಾತು ಹೇಳಿದ್ರೆ ಮುಗಿತ್ತಿತ್ತು. ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದೇವೆ ಎಂದ್ರು, ಮಹಾದೇವಪ್ಪನವರು 10 ಜನ ಬನ್ನಿ ಎಂದ್ರು ಹೇಳಿದ್ರು ಹೋಗತ್ತಾ ಇದ್ವಿ‌. ಜನರು ಸಿಎಂ ಸಿದ್ದರಾಮಯ್ಯ ಅವರೇ ಬರಬೇಕು ಅಂದ್ರು. ಸಿಎಂ ಬರಲ್ಲ ಎಂದು ಎಡಿಜಿಪಿ ಹೇಳಿದ್ರು. ಸಿಎಂ ಇದ್ದ ಜಾಗಕ್ಕೆ ಹೋಗೊಣ ಎಂದು ನಾವು ತೀರ್ಮಾನ ಮಾಡಿದ್ವಿ.  ಸಿವಿಲ್ ಬಟ್ಟೆಯಲ್ಲಿ ಇದ್ದ ಕೆಲ ಪೊಲೀಸರು ಕಲ್ಲು ತೂರಾಟ ಮಾಡಿದ್ರು.  ಪೊಲೀಸರು ದ್ವೇಷದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ವಕೀಲರ ಮೇಲೆ ಹಲ್ಲೆ ಮಾಡಿದ್ದಾರೆ, ಹೃದಯಕ್ಕೆ ಚುಚ್ಚುವ ರೀತಿಯಲ್ಲಿ ಹೊಡೆದಿದ್ದಾರೆ‌. ನಮ್ಮ ಹೋರಾಟಗಾರರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವಂತೆ ಯಾವ ಸಿಎಂ ಸಹ ಹೇಳಿರಲಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಲಿಂಗಾಯತ ಟಾರ್ಗೆಟ್ ಮಾಡುವ ಅವಶ್ಯಕತೆ ಇರಲಿಲ್ಲ. ನಮ್ಮ ಸಮಾಜದ ಶಾಸಕರನ್ನು ಟಾರ್ಗೆಟ್ ಮಾಡೋದು. ಮೀಸಲಾತಿ ಕೊಡಲು ಆಗಲ್ಲ ಎಂದು ಹೇಳಿದ್ರೆ, ನಾವು ಬೇರೆ ಮಾರ್ಗ ಹಿಡಿಯುತ್ತೇವೆ ಎಂದು ತಿಳಿಸಿದ್ದಾರೆ. 

undefined

ಬಸವಣ್ಣನ ಕಾಲದಲ್ಲಿ ಕೊಂಡಿ ಮಂಚಣ್ಣ ಲಿಂಗಾಯತ ಮೇಲೆ ಹಲ್ಲೆ ಮಾಡಿದ್ರು. ಲಿಂಗಾಯತರ ಮೇಲೆ ಹಲ್ಲೆ ಮಾಡಿದ ಅಪಖ್ಯಾತಿಗೆ ಈ ಸರ್ಕಾರ ಗುರಿಯಾಗಿದೆ‌. ಕೂಡಲೇ ಸರ್ಕಾರ ಕ್ಷಮಾಪಣೆ ‌ಕೇಳಬೇಕು. ಪ್ಲ್ಯಾನ್ ಮಾಡಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೈದ‌ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ನಮ್ಮ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಹಲ್ಲೆ ಮಾಡಿದವರ ಮೇಲೆ ಕೇಸ್ ದಾಖಲು ಮಾಡಲು ಸಮಾಜದ ಮುಖಂಡರಿಗೆ ಕರೆ ನೀಡಿದ್ದೇವೆ ಎಂದು ಹೇಳಿದ್ದಾರೆ. 

ಎಡಿಜಿಪಿ ಸ್ವತಃ ಕೈಯಲ್ಲಿ ಲಾಠಿ ಹಿಡಿದು ಲಾಠಿಚಾರ್ಚ್ ಮಾಡಿದ್ರು. ಜನರನ್ನು ಶಾಂತಗೊಳಿಸುವ ಕೆಲಸ ಎಡಿಜಿಪಿ ಮಾಡಬೇಕಿತ್ತು. ಲಿಂಗಾಯತ ಮೇಲಿನ ದುಷ್ಕೃತ್ಯಕ್ಕೆ ಕ್ಷಮೆ ಕೇಳಬೇಕು. ಡಿಸೆಂಬರ್ ‌12ರಂದು ಜಿಲ್ಲೆ, ತಾಲೂಕು, ಗ್ರಾಮದಲ್ಲಿ ಪ್ರತಿಭಟನೆ ಮಾಡಬೇಕು. ನಾನು ಹಿರೇಬಾಗೇವಾಡಿ, ಹತ್ತರಗಿ ಟೋಲ್ ಬಳಿ ಧರಣಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಲ್ಲ. ನ್ಯಾಯಯುತ ಹೋರಾಟ ಮುಂದುವರೆಯಲಿದೆ. ಇನ್ನೂ ಮುಂದೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.  ಸಿಎಂ ಸಿದ್ದರಾಮಯ್ಯ ಲಿಂಗಾಯತ ‌ವಿರೋಧಿ ಎಂಬುದು ಅನುಮಾನ ಕಾಡುತ್ತಿದೆ.  ಹಲ್ಲೆಗೆ ಒಳಗಾದ ಗಾಯಾಳುಗಳ ಮನೆಗೆ ನಾನೇ ಹೋಗಿ ಬರ್ತಿನಿ ಎಂದು ಶ್ರೀಗಳು ತಿಳಿಸಿದ್ದಾರೆ. 

ಮಾತುಕತೆಗೆ ಕರೆದಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶ್ರೀಗಳು,  ಸಿಎಂ ಹೇಳಿದ್ರೆ ನಾವ್ಯಾಕೆ ಹೀಗೆ ಹೋದಾಟ ಮಾಡ್ತಾ ಇದ್ವಿ. ಮಾದ್ಯಮಗಳು, ಹೆಬ್ಬಾಳ್ಕರ್ ಮೂಲಕ ಹೇಳಬಹುದಿತ್ತು. ಸಿಎಂ ಈ ರೀತಿ ಸುಳ್ಳು ಹೇಳುವ ಪ್ರಯತ್ನ ಮಾಡಿದ್ರು. ಜಿಲ್ಲಾಧಿಕಾರಿ ಟ್ರ್ಯಾಕ್ಟರ್ ನಿರ್ಬಂಧ ಮಾಡಿದ್ರು‌. ಹೀಗಾಗಿ ಹೈಕೋರ್ಟ್ ‌ಮೊರೆ ಹೋಗಿದ್ವಿ. ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡೋ‌ ಪ್ರಶ್ನೆಯೇ ಇಲ್ಲ. ನೀವು ಸಮ್ಮನೆ ಬಿಟ್ಟಿದ್ರೆ ನಾವು ಹೋಗಿ ಬರ್ತಾ ಇದ್ವಿ, ಪ್ರತಿಭಟನಾಕಾರರ ಮೇಲೆ ಲಾಠಿ‌ಚಾರ್ಚ್ ಮಾಡೋ ಯತ್ನ ಯಾಕೆ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ. 

ಬಾಣಂತಿಯರ ಸಾವಿನ ಸರಣಿ: 7 ತಿಂಗಳಲ್ಲಿ 326 ಬಲಿ, ಬೆಂಗಳೂರಿನಲ್ಲಿಯೇ 50 ಸಾವು

ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುವುದು ಬಿಡಬೇಕು. ಪಂಚಮಸಾಲಿ ಮೀಸಲಾತಿ ಹತ್ತಿಕ್ಕಲು ಕಂಡ ಕಂಡಲ್ಲಿ ಬ್ಯಾರಿಕೇಡ್‌ ಹಾಕಿದ್ರು. ಲಿಂಗಾಯತರ ಮೇಲೆ ಹಲ್ಲೆ ಮಾಡಿದ್ದು, ಲಿಂಗಾಯತ ವಿರೋಧಿ ಸರ್ಕಾರ ಇದು. ಲಿಂಗಾಯತ ಸಮಾಜ ಸರ್ಕಾರದ ಮೇಲೆ ಸಿಟ್ಟಾಗಿದೆ. ಲಾಠಿ‌ಚಾರ್ಚ್ ಮೊದಲು ಮಾತುಕತೆ ಬನ್ನಿ ಎಂದು ಹೇಳಬೇಕಿತ್ತು. ಸೋಮವಾರದಿಂದ ಅಧಿವೇಶನ ಮುಗಿಯುವವರೆಗೆ ಧರಣಿ‌ ಮಾಡುತ್ತೇವೆ ಎಂದು ಶ್ರೀಗಳು ಘೋಷಣೆ ಮಾಡಿದ್ದಾರೆ. 
ಹೊಟ್ಟೆ ಕಿಚ್ಚು, ಹಳೆಯ ಸೇಡಿನಿಂದ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಲಾಠಿ ಚಾರ್ಜ್ ಗೆ ಸಿಎಂ ಆದೇಶ ಮಾಡಿಲ್ಲ ಎಂದರೆ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ನಮ್ಮ ಸಮುದಾಯದ ಸಚಿವರು, ಶಾಸಕರು ರಾಜೀನಾಮೆ ಕೊಟ್ರೆ ಪ್ರಯೋಜನ ಇಲ್ಲ. ಎಲ್ಲ ಶಾಸಕರು ವಿಧಾನಸಭೆಯಲ್ಲಿ ಧ್ವನಿ ಎತ್ತಿ ಎಂದು ಶ್ರೀಗಳು ಆಗ್ರಹಿಸಿದ್ದಾರೆ. 

ಅಮಾಯಕರ ಮೇಲಿನ ದಬ್ಬಾಳಿಕೆಯನ್ನು ಪ್ರಶ್ನೆ ಮಾಡಿ. ನಿಮ್ಮ ಮೇಲೆ ಸಮುದಾಯದ ಜನ ಮುನಿಸಿಕೊಳ್ಳುವ ಸಾಧ್ಯತೆ ಇದೆ. ರಾಷ್ಟ್ರೀಯ ಅಧ್ಯಕ್ಷ ಬಗ್ಗೆ ಯಾಕೆ ಚಿಂತನೆ ಮಾಡ್ತಿರಿ. ಪದವಿ ಅಲ್ಲ ಜನ ಸಾಮಾನ್ಯರ ಮಾತು ಕೇಳಿ ಹೋರಾಟ ‌ಮಾಡ್ತಿವಿ. ಸಿದ್ದರಾಮಯ್ಯ ಜಾಣ ಮುಖ್ಯಮಂತ್ರಿ ಇದ್ದಾರೆ. ನಮಗೆ 2A ಮೀಸಲಾತಿ ಕೊಡಲಾಗದಿದ್ರೆ 2D ಮೀಸಲಾತಿ ಆದ್ರು ಕೊಡಿ. ಸರ್ವಾಧಿಕಾರಿ ಧೋರಣೆಯನ್ನು ಖಂಡನೆ ಮಾಡ್ತಿವಿ. ಮಫ್ತಿಯಲ್ಲಿ ಇದ್ದ ಪೊಲೀಸರು ಕಲ್ಲು ತೂರಾಟ ಮಾಡಿದ್ದಾರೆ ‌ಎಂದು ಸ್ವಾಮೀಜಿ ‌ಆರೋಪಿಸಿದ್ದಾರೆ. 

click me!