Bengaluru: ಅರಮನೆ ಮೈದಾನದ ಜಾಗಕ್ಕಾಗಿ ಮೈಸೂರು ರಾಜಮನೆತನಕ್ಕೆ 3 ಸಾವಿರ ಕೋಟಿ ನೀಡಲಿರುವ ರಾಜ್ಯ ಸರ್ಕಾರ!

By Santosh Naik  |  First Published Dec 11, 2024, 2:04 PM IST

ಮೈಸೂರು ಮಹಾರಾಜರ ಕಾನೂನುಬದ್ಧ ವಾರಸುದಾರರಿಗೆ ಬೆಂಗಳೂರು ಅರಮನೆ ಭೂಮಿಗೆ ₹3,000 ಕೋಟಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಈ ಮೊತ್ತವು ಟಿಡಿಆರ್ ಪ್ರಮಾಣಪತ್ರಗಳ ರೂಪದಲ್ಲಿ ಆರು ವಾರಗಳಲ್ಲಿ ಪಾವತಿಸಬೇಕು.


ಬೆಂಗಳೂರು (ಡಿ.11):  ಜಯಮಹಲ್ ರಸ್ತೆ ಮತ್ತು ಬಳ್ಳಾರಿ ರಸ್ತೆಗೆ ಹೊಂದಿಕೊಂಡಿರುವ 15 ಎಕರೆ 39 ಗುಂಟಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮೈಸೂರು ಮಹಾರಾಜರ ಕಾನೂನು ವಾರಸುದಾರರಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರದ ರೂಪದಲ್ಲಿ ರಾಜ್ಯ ಸರ್ಕಾರ ಆರು ವಾರಗಳಲ್ಲಿ 3,000 ಕೋಟಿ ರೂಪಾಯಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮಂಗಳವಾರದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಈ ಹೊಸ ಬೆಳವಣಿಗೆ ಇದು ಸರ್ಕಾರದ ಇತ್ತೀಚಿನ ನಿಲುವಿಗೆ ವಿರುದ್ಧವಾಗಿದೆ .

ತೀರ್ಪಿನ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಳ್ಳಾರಿ ರಸ್ತೆಗೆ ಹೊಂದಿಕೊಂಡಿರುವ ಬೆಂಗಳೂರು ಅರಮನೆ ಭೂಮಿಗೆ ಪ್ರತಿ ಚದರ ಮೀಟರ್‌ಗೆ ರೂ 2,83,500 ಮತ್ತು ಜಯಮಹಲ್ ರಸ್ತೆಗೆ ಚದರ ಮೀಟರ್‌ಗೆ ರೂ 2,04,000 ಮಾರ್ಗಸೂಚಿ ಮೌಲ್ಯವನ್ನು ನಿಗದಿಪಡಿಸಬೇಕಾಗಿದೆ. ಇದು ಸರಿಸುಮಾರು ರೂ 3,000 ಕೋಟಿ ಅಥವಾ ಪ್ರತಿ ಎಕರೆಗೆ ರೂ 194 ಕೋಟಿಗಳ TDR ಪರಿಹಾರಕ್ಕೆ ಕಾರಣವಾಗಲಿದೆ. ಸುಮಾರು 3 ಲಕ್ಷ ಚದರ ಮೀಟರ್‌ನ ಹೆಚ್ಚುವರಿ ನಿರ್ಮಾಣ ಪ್ರದೇಶವನ್ನು ನಿರ್ಮಿಸಲು 3,000 ಕೋಟಿ ರೂಪಾಯಿ ಮೌಲ್ಯದ TDR ಪ್ರಮಾಣಪತ್ರಗಳನ್ನು ಬಿಲ್ಡರ್‌ಗಳು ಲೋಡ್ ಮಾಡಬಹುದಾದ್ದರಿಂದ ಈ ಪ್ರದೇಶವು ಬಹುಮಹಡಿ ಕಟ್ಟಡಗಳಿಂದ ಆವೃತ್ತವಾಗಲಿದೆ ಅನ್ನೋದು ನಿಶ್ಚಯವಾಗಿದೆ.

ರಿಯಲ್‌ ಎಸ್ಟೇಟ್‌ ಲಾಬಿ: ಏಪ್ರಿಲ್ 2024 ರಲ್ಲಿ, ರಾಜ್ಯ ಸರ್ಕಾರವು ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1996 ರ ಪ್ರಕಾರ ಪ್ರತಿ ಚದರ ಮೀಟರ್‌ಗೆ ರೂ 120.68 ರಂತೆ ಅರಮನೆಯ ಭೂಮಿಯ ಮೌಲ್ಯವನ್ನು ನಿರ್ಧಾರ ಮಾಡಿತ್ತು. ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಲು ಪಕ್ಕದ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಮಾರ್ಗದರ್ಶಿ ಮೌಲ್ಯವನ್ನು ಗಣನೆಗೆ ತೆಗೆದುಕೊಂಡಿದೆ, ಇದು ಸರ್ಕಾರದ ಅಂದಾಜುಗಿಂತ ಸರಿಸುಮಾರು 2,00,000 ಪಟ್ಟು ಹೆಚ್ಚಾಗಿದೆ.

Tap to resize

Latest Videos

ಹಾಗಿದ್ದರೂ, ಗಮನಿಸಬೇಕಾದ ಸಂಗತಿಯೆಂದರೆ, ಬೆಂಗಳೂರು ಅರಮನೆಯ ಭೂಮಿಗೆ ಸರ್ಕಾರವು ಮೌಲ್ಯವನ್ನು ನಿಗದಿಪಡಿಸಿದೆ, ಆದರೆ ಕಂದಾಯ ಇಲಾಖೆಯು 1957 ಕರ್ನಾಟಕ ಮುದ್ರಾಂಕ ಕಾಯ್ದೆಯ ಸೆಕ್ಷನ್ 45 (ಬಿ) ಅಡಿಯಲ್ಲಿ ಮಾರ್ಗದರ್ಶಿ ಮೌಲ್ಯವನ್ನು ಸೂಚಿಸದ ಕಾರಣ ಅದಕ್ಕೆ ಕಾನೂನಿನ ಬೆಂಬಲವಿಲ್ಲ. ಸರಿಯಾದ ಮಾರ್ಗದರ್ಶನದ ಮೌಲ್ಯವನ್ನು ತಿಳಿಸಲು ಬಿಬಿಎಂಪಿಯು ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ ಅನೇಕ ಪತ್ರಗಳನ್ನು ಬರೆದರೂ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!

ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಆಗಿನ ಆಯುಕ್ತರಾಗಿದ್ದ ಮಮತಾ ಬಿ.ಆರ್ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಸಾರ್ವಜನಿಕ ಹಿತಾಸಕ್ತಿಯಿಂದ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ಟೀಕಿಸಿದ್ದರು.“ಸರಕಾರದ ಸಂಪೂರ್ಣ ನಿರ್ಲಕ್ಷ್ಯವು ಇಡೀ ಅರಮನೆಯ ಆಸ್ತಿಯನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಇದು ಸ್ಪಷ್ಟವಾಗಿ ರಿಯಲ್ ಎಸ್ಟೇಟ್ ಮಾಫಿಯಾವನ್ನು ಒಳಗೊಂಡಿರುವ ಬೃಹತ್ ಹಗರಣವಾಗಿದೆ, ”ಎಂದು ಕರ್ನಾಟಕ ರಾಷ್ಟ್ರ ಸಮಿತಿ, ರಾಜಕೀಯ ಸಂಘಟನೆಯು ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದೆ.

2025ರಲ್ಲಿ ಷೇರು ಮಾರುಕಟ್ಟೆಗೆ ಬರಲಿದೆ ಪ್ರಖ್ಯಾತ ಕಂಪನಿಗಳ IPO, ಇದರ ಮೌಲ್ಯವೇ 1.5 ಲಕ್ಷ ಕೋಟಿ!

"ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು ಪಕ್ಷವು ಮಾರ್ಚ್‌ನಲ್ಲಿ ಸರ್ಕಾರಕ್ಕೆ ಪತ್ರ ಬರೆದಿತ್ತು, ಆದರೆ ಸರ್ಕಾರದ ಉದ್ದೇಶಪೂರ್ವಕ ನಿರ್ಲಕ್ಷ್ಯವು ರಾಜ್ಯದ ಬೊಕ್ಕಸಕ್ಕೆ ಮತ್ತು ಬೆಂಗಳೂರಿನ ದುಸ್ಥಿತಿಗೆ ಅಸಹನೀಯ ಹೊರೆಯನ್ನು ಉಂಟುಮಾಡುತ್ತಿದೆ. ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಪಕ್ಷ ಒತ್ತಾಯಿಸಿದೆ.
"ಎರಡು ವಿಭಿನ್ನ ಸಂದರ್ಭಗಳಲ್ಲಿ, ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ಮೂಲಕ ಮತ್ತು ಮಾರುಕಟ್ಟೆ ಮೌಲ್ಯವನ್ನು ಒದಗಿಸದೆ ಸಾರ್ವಜನಿಕ ಉದ್ದೇಶಗಳಿಗಾಗಿ ಯಾವುದೇ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಿದ್ದರೂ, ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿ ಟಿಡಿಆರ್ ನೀಡಲು ಸರ್ಕಾರ ಸಿದ್ಧವಾಗಿಲ್ಲ. ಬೆಂಗಳೂರು ಅರಮನೆ ಕಾಯಿದೆ 1996ನ್ನು ವಿಸ್ತೃತ ಪೀಠ ಎತ್ತಿ ಹಿಡಿದರೆ ನಗದೀಕರಿಸಿದ ಹಣವನ್ನು ಹಿಂತಿರುಗಿಸಲಾಗುವುದು ಎಂದು ನಾವು ಭರವಸೆ ನೀಡುತ್ತೇವೆ ಎಂದು ಅರ್ಜಿದಾರ ಚದುರಂಗ ಕಾಂತರಾಜ್ ಅರಸ್ ತಿಳಿಸಿದ್ದರು.

click me!