ಮೀಸಲಾತಿ ಕೊಟ್ರೆ ಸಹಕಾರ, ಕೊಡದಿದ್ರೆ ಅಸಹಕಾರ: ಸರ್ಕಾರಕ್ಕೆ ಕೂಡಲ ಶ್ರೀ ಎಚ್ಚರಿಕೆ

By Suvarna News  |  First Published Jul 12, 2022, 2:40 PM IST

*  ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟ ಜಯಮೃತ್ಯುಂಜಯ ಸ್ವಾಮೀಜಿ 
*  2 ಎ ಮೀಸಲಾತಿಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ
*  18 ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ಬಾಕಿ ಉಳಿದಿದೆ 
 


ವರದಿ : ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಜು.12): 2ಎ ಮೀಸಲಾತಿಗೆ ಆ. 22 ಕೊನೆಯ ಡೆಡ್ ಲೈನ್‌ನ್ನು ಸರ್ಕಾರಕ್ಕೆ ನಾವು ಕೊಟ್ಟಿದ್ದೇವೆ. ಸರ್ಕಾರ ನಮಗೆ ಮೀಸಲಾತಿ ಕೊಡುತ್ತೆ ಎಂಬ ಭರವಸೆ ಇದೆ. ಒಂದು ವೇಳೆ ಮೀಸಲಾತಿ ಕೊಡದೆ ಇದ್ರೆ ಮುಂದಿನ ದಿನಗಳಲ್ಲಿ ನಮ್ಮ‌ ಹೋರಾಟ 25 ಲಕ್ಷ ಜನರನ್ನ ಸೇರಿಸಿ ಹೋರಾಟ ಮಾಡಲಾಗುವುದು ಅಂತ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Tap to resize

Latest Videos

ಇಂದು(ಮಂಗಳವಾರ) ನಗರದ ಲಿಂಗಾಯತ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರವಾಗಿ ಸರ್ಕಾರಕ್ಕೆ ಸಮಯವಕಾಶ ಕೊಟ್ಟಿದ್ದೇವೆ. ಧಾರವಾಡ ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಹೋಗಿ ಜನರಿಗೆ 2 ಎ ಮೀಸಲಾತಿಯ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ದೇಶದಲ್ಲಿ ಲಿಂಗಾಯತ ಪಂಚಮಸಾಲಿಗೆ 2 ಎ ಮೀಸಲಾತಿಯನ್ನ‌ ನೀಡಬೇಕು. ನಾವು ಕಳೆದ 20 ತಿಂಗಳಿಂದ ಚಳುವಳಿಯನ್ನ ಆರಂಭ ಮಾಡಿದ್ದೇವೆ, ಪಾದಯಾತ್ರೆ ಮಾಡಿದ್ದೇವೆ,  ಬೆಂಗಳೂರಿನಲ್ಲಿ ಸಭೆ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆ ಸಮಯದಲ್ಲಿ ಭರವಸೆ ಕೊಟ್ಟು ಮತ್ತೆ ನಾಟಕ ವಾಡುತ್ತಿದೆ ಸರ್ಕಾರ ಆಕ್ರೋಶ ಹೊರ ಹಾಕಿದರು.

ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ಅಗತ್ಯ : ಪಂಚಮಸಾಲಿ ಶ್ರೀ

ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ಮಾಡಿದಾಗ ಸರ್ಕಾರ ಭರವಸೆ ಕೊಟ್ಟಿತ್ತು. ಆದರೆ ಸರ್ಕಾರ ಕೊಟ್ಟ ಮಾತಿನಂತೆ‌ ನಡೆದುಕೊಳ್ಳುತ್ತಿಲ್ಲ ರಾಜ್ಯದಲ್ಲಿ 1 ಕೋಟಿ 30 ಲಕ್ಷಕ್ಕೂ ಹೆಚ್ಚು ಜನರು ಪಂಚಮಸಾಲಿ ಸಮುದಾಯಕ್ಕೆ ಸೇರಿದ ಜನರು ಇದ್ದಾರೆ. ಯಡಿಯೂರಪ್ಪ ಅವರು ಭರವಸೆ ಕೊಟ್ಟರು ಬಳಿಕ ಕೈ ಬಿಟ್ರು, ಅವರ ಅಧಿಕಾರದಿಂದ ಕೆಳಗೆ ಇಳಿದ್ರು..ಬಳಿಕ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಭರವಸೆ ಕೊಟ್ರು, ಅವರಿಗೂ ನಾಲ್ಕು ಅವಕಾಶ ಕೊಟ್ಟಾಗಿದೆ. ನಮ್ಮೋರು ಅಂತ ಕೆಲಸ ಆಗುತ್ತೆ ಎಂದು ಕೊಂಡಿದ್ವಿ ಮೂರು‌ ಬಾರಿ‌ ಸಿಎಂ ಬಸವರಾಜ ಬೊಮ್ಮಾಯಿ‌ ಅವರಿಗೆ ಸಮಯ ಕೊಟ್ಟಿದ್ದೇವೆ ರಾಜ್ಯಾದ್ಯಂತ ಬೃಹತ್ ಹೋರಾಟ ಮಾಡುತ್ತಾ ಬಂದಿದೆ. ಜೂನ್ 20 ಕ್ಕೆ ಸಿಸಿ ಪಾಟೀಲ ಅವರ ಮನೆಯಲ್ಲಿ ಸಭೆ ಮಾಡಲಾಗಿದೆ. 8 ತಿಂಗಳಲ್ಲಿ ಹಿಂದುಳಿದ ಆಯೋಗದ ಅಧ್ಯಕ್ಷರು ಸರ್ವೇ ಆರಂಭ ಮಾಡಿದ್ದಾರೆ ಅಂತ ತಿಳಿಸಿದ್ದಾರೆ. 

18 ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ಬಾಕಿ ಉಳಿದಿದೆ. ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಿಎಂ ಆ. 22 ರೊಳಗೆ ಮೀಸಲಾತಿ ಕೊಡುತ್ತೆವೆ ಎಂದು ಭರಸವೆ ಕೊಟ್ಟಿದ್ದಾರೆ. ಸಿಎಂಗೆ ಇದು ಕೊನೆಯ ಕಾಲಾವಕಾಶ ಕೊಟ್ಟಿದ್ದೇವೆ. ಜುಲೈ 30 ಕ್ಕೆ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಹೋರಾಟ ಮಾಡಲಾಗುವುದು ಎಂದರು.

ಧಾರವಾಡ ಡಿಸಿ ಕಚೇರಿಯಲ್ಲಿ ಹೋರಾಟ ಮಾಡಲಾಗುವುದು ಜು. 14 ರಂದು ಅಣ್ಣಿಗೇರಿಯಲ್ಲಿ ಬೃಹತ್ ಜಾಥಾ ಆಯೋಜನೆ ಮಾಡಲಾಗಿದೆ. ಜಾಥಾದಲ್ಲಿ ಬಸನಗೌಡ ಪಾಟೀಲ ಯತ್ನಾಳ ಭಾಗವಹಿಸಲಿದ್ದಾರೆ. ಎಲ್ಲ ಪಂಚಮಸಾಲಿಯ ಎಲ್ಲ ಶಾಸಕರು, ಸಂಸದರು ಬಾಗಿಯಾಗಬೇಕು. ಸಿಎಂ ಮೀಸಲಾತಿ‌ ಕೊಟ್ರೆ ಅವರಿಗೆ ಸನ್ಮಾನ ಮಾಡಿ ತುಲಾಭಾರ ಮಾಡಲಾಗುವುದು. ಈ ಬಾರಿ ನನಗೆ ವಿಶ್ವಾಸವಿದೆ ಈ ಬಾರಿ ಬೊಮ್ಮಾಯಿ‌ ಮಿಸಲಾತಿ ಕೊಡ್ತಾರೆ. ಯತ್ನಾಳ ಅವರು ನನಗೆ ಮಂತ್ರಿ ಸ್ಥಾನ ಬೇಡ ನನಗೆ ಮೀಸಲಾತಿ ಕೊಡಿ ಎಂದ ಏಕೈಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸರ್ಕಾರಕ್ಕೆ‌ ಒತ್ತಾಯ ಮಾಡಿದ್ದಾರೆ ನನಗೆ ಅವರ ಮೇಲೆ ಅಪಾರ ನಂಬಿಕೆ ಇದೆ ಅಂತ ಹೇಳಿದ್ದಾರೆ. 
 

click me!