ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಭಕ್ತರು ವೈವಿಧ್ಯಮಯ ಖಾದ್ಯವನ್ನು ತಂದುಕೊಡುತ್ತಲೇ ಇದ್ದಾರೆ. ಲಾರಿ ಮಾಲೀಕರ ಸಂಘದ ವತಿಯಿಂದ 4 ಕ್ವಿಂಟಲ್ ಕರದಂಟು ಹಾಗೂ ಗಿಣಿಗೇರಿ ಗ್ರಾಮಸ್ಥರಿಂದ 6 ಕ್ವಿಂಟಲ್ ಬುಂದಿ ನೀಡಿದ್ದಾರೆ.
ಕೊಪ್ಪಳ (ಜ.12) : ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಮಹಾದಾಸೋಹಕ್ಕೆ ಭಕ್ತರು ವೈವಿಧ್ಯಮಯ ಖಾದ್ಯವನ್ನು ತಂದುಕೊಡುತ್ತಲೇ ಇದ್ದಾರೆ. ಲಾರಿ ಮಾಲೀಕರ ಸಂಘದ ವತಿಯಿಂದ 4 ಕ್ವಿಂಟಲ್ ಕರದಂಟು ಹಾಗೂ ಗಿಣಿಗೇರಿ ಗ್ರಾಮಸ್ಥರಿಂದ 6 ಕ್ವಿಂಟಲ್ ಬುಂದಿ ನೀಡಿದ್ದಾರೆ. ತಾಲೂಕಿನ ಹಿರೇಸಿಂದೋಗಿ ಗ್ರಾಮಸ್ಥರು ಸುಮಾರು 18 ಚಕ್ಕಡಿಯಲ್ಲಿ ದವಸ, ಧಾನ್ಯ ಹಾಗೂ 4 ಕ್ವಿಂಟಲ್ ಮಾದಲಿಯನ್ನು ಮೆರವಣಿಗೆ ಮೂಲಕ ಆಗಮಿಸಿ ಕೊಟ್ಟಿದ್ದಾರೆ.
ನಗರದ ಬಳ್ಳಾರಿ ಡೆಕೋರೇಶನ್ ಮಾಲೀಕರಾದ ಚೆನ್ನಪ್ಪ ಹಾಗೂ ಹೇಮಾ ಬಳ್ಳಾರಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಬಳ್ಳಾರಿ ಸೇವಾ ಟ್ರಸ್ಟ್ ವತಿಯಿಂದ ರಥೋತ್ಸವ ದಿನದಿಂದ ಐದು ದಿನಗಳವರೆಗೆ ಜಾತ್ರೆಗೆ ಬರುವ ಭಕ್ತಾದಿಗಳಿಗೆ ತಮ್ಮ ಅಂಗಡಿಯ ಮುಂದೆ ಬೆಳಗ್ಗೆ ಉಪಾಹಾರ, ಚಹಾ ಮತ್ತು ಮಧ್ಯಾಹ್ನ ಪಲಾವು, ಅನ್ನ, ಸಾಂಬಾರು, ಚಿತ್ರಾನ್ನ, ಮಜ್ಜಿಗೆ ವಿತರಿಸುವ ಸೇವೆ ಕೈಗೊಂಡಿದ್ದಾರೆ. ಮಹಾದಾಸೋಹದಲ್ಲಿ ಬುಧವಾರ ರೊಟ್ಟಿ, ದಾಲ್, ಬುಂದಿ, ಮಾದಲಿ, ಹಾಲು, ತುಪ್ಪ, ಶೇಂಗಾ ಹೋಳಿಗೆ, ಕರದಂಟು, ಅನ್ನ, ಸಾಂಬಾರು, ಪುಡಿಚಟ್ನಿ, ಉಪ್ಪಿನಕಾಯಿ ಪ್ರಸಾದ ವಿತರಿಸಲಾಯಿತು.
undefined
Koppal: ಅಜ್ಜನ ಜಾತ್ರೆಯಲ್ಲಿ 15 ಲಕ್ಷ ಜೋಳದ ರೊಟ್ಟಿ, 30 ಟನ್ ಹೋಳಿಗೆ!
ಡಿಸಿ ಪತ್ನಿ ಸೇವೆ:
ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವರ ಪತ್ನಿ ಜಾತ್ರಾ ಮಹೋತ್ಸವ(Gavisiddeshwar jatra mahotsav)ದಲ್ಲಿ ಪ್ರಸಾದ ವಿತರಣಾ ಸೇವೆ ಮಾಡಿದರು. ಸರದಿಯಲ್ಲಿ ಭಕ್ತರಿಗೆ ಸಿಹಿ ಬಡಿಸಿದರು.
ಹರಿದುಬಂದ ಜನಸಾಗರ:
ಜಾತ್ರಾ ಮಹೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಕ್ತ ಹಿತಚಿಂತನಾ ಕಾರ್ಯಕ್ರಮಗಳು ಸಂಪನ್ನಗೊಂಡ ಬಳಿಕವೂ ನಾಲ್ಕನೇ ದಿನವೂ ಮಠಕ್ಕೆ ಜನಸಾಗರವೇ ಹರಿದು ಬಂದಿತು. ದಾಸೋಹಕ್ಕೂ ನಾಲ್ಕನೇ ದಿನವೂ ಜನಸಾಗರ ಹರಿದು ಬಂದಿದ್ದು ಇದೇ ಮೊದಲ ವರ್ಷ. ಈ ಹಿಂದಿನ ಜಾತ್ರೆಗಳಲ್ಲಿ ನಾಲ್ಕನೇ ದಿನ ಆಗಮಿಸುವ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿತ್ತು. ಆದರೆ, ಈ ಬಾರಿ ಜನರು ಆಗಮಿಸುವುದು ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. Koppal News: ಹೊನ್ನು, ಮಣ್ಣಿಗಿಂತ ಐಡಿಯಾ ಜಗತ್ತನ್ನು ಆಳುತ್ತವೆ: ಗವಿಸಿದ್ದೇಶ್ವರ ಸ್ವಾಮಿ