ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ಜನಸೇವಕ

By Kannadaprabha News  |  First Published Feb 5, 2020, 8:43 AM IST

ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ‘ಜನಸೇವಕ’ ಯೋಜನೆ, ಕಾರ್ಮಿಕರ ಕುಂದುಕೊರತೆಗಳ ಪರಿಹಾರಕ್ಕಾಗಿ ‘ಕಾರ್ಮಿಕ ಸಹಾಯವಾಣಿ’ ಸೇರಿದಂತೆ ವಿವಿಧ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ.


ಬೆಂಗಳೂರು(ಫೆ.05): ನಾಗರಿಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ‘ಜನಸೇವಕ’ ಯೋಜನೆ, ಕಾರ್ಮಿಕರ ಕುಂದುಕೊರತೆಗಳ ಪರಿಹಾರಕ್ಕಾಗಿ ‘ಕಾರ್ಮಿಕ ಸಹಾಯವಾಣಿ’ ಸೇರಿದಂತೆ ವಿವಿಧ ಯೋಜನೆಗಳಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚಾಲನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ‘ಆಶಾದೀಪ ಯೋಜನೆ’ ಅಂತರ್ಜಾಲ ಮತ್ತು ವಾರ್ತಾ ಇಲಾಖೆಯ ಜನಸ್ನೇಹಿ ಸಹಾಯ ವೇದಿಕೆ ಯೋಜನೆಗಳಿಗೆ ಚಾಲನೆ ನೀಡಿದ ಅವರು, ಜನಸಾಮಾನ್ಯರ ಅನುಕೂಲಕ್ಕಾಗಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

Tap to resize

Latest Videos

‘ಜನಸೇವಕ’ ಯೋಜನೆ:

ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಜನಸೇವಕ ಯೋಜನೆ ಕುರಿತು ಮಾಹಿತಿ ನೀಡಿ, ಈ ಯೋಜನೆಯನ್ನು ಪೈಲಟ್‌ ಆಧಾರದಲ್ಲಿ 2019 ಮಾರ್ಚ್‌ 3ರಂದು ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜಾರಿಗೆ ತರಲಾಗಿತ್ತು. ಈ ಯೋಜನೆಯಲ್ಲಿ ಈವರೆಗೆ ಸುಮಾರು 30 ಸಾವಿರಕ್ಕಿಂತಲೂ ಹೆಚ್ಚು ಸೇವೆಗಳನ್ನು ನಾಗರಿಕರಿಗೆ ತಲುಪಿಸಲಾಗಿದೆ. ನಾಗರಿಕರು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ತಮಗೆ ಅನುಕೂಲವೆನಿಸಿದ ವೇಳೆಯಲ್ಲಿ ಸೇವೆಗಳನ್ನು ಪಡೆಯಬಹುದು. ಇದರಿಂದ ಮಧ್ಯವರ್ತಿಗಳ ಮೇಲೆ ಆವಲಂಬಿತರಾಗಬೇಕಿಲ್ಲ. ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ ಎಂದಿದ್ದಾರೆ.

ನಾಗರಿಕರು ಜನಸೇವಕ ಸಹಾಯವಾಣಿಗೆ ಕೇಂದ್ರಕ್ಕೆ ಕರೆ ಮಾಡಿ(080-44554455) ತಮಗೆ ಬೇಕಾದ ಸೇವೆಗಾಗಿ ಮನವಿ ಸಲ್ಲಿಸಬೇಕು. ಸಹಾಯವಾಣಿ ಕೇಂದ್ರದ ಸಿಬ್ಬಂದಿ ನಾಗರಿಕರ ಮನವಿಗೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿಗಳು, ಸೇವಾ ಶುಲ್ಕ ಇತ್ಯಾದಿ ಮಾಹಿತಿ ನೀಡುತ್ತಾರೆ. ಅದಕ್ಕೆ ಸಮ್ಮತಿ ಸಿಕ್ಕಿದ ಬಳಿಕ ಲಭ್ಯತೆ ಅನುಸಾರ ಸಮಯ ನಿಗದಿಪಡಿಸಲಾಗುತ್ತದೆ.

ಜಿಪಂ ಅಧ್ಯಕ್ಷರು ರಾಜೀನಾಮೆ ನೀಡಲು ಆರ್‌.ಅಶೋಕ್‌ ಸೂಚನೆ

ಬಳಿಕ ನಿಯೋಜಿತ ಜನ ಸೇವಕ ಸಿಬ್ಬಂದಿಯು, ನಾಗರಿಕರು ಕೋರಲಾದ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಅವರ ಮನೆಗೆ ಭೇಟಿ ನೀಡುತ್ತಾರೆ. ನಾಗರಿಕರು ಅರ್ಜಿ ಭರ್ತಿ ಮಾಡಲು ಜನಸೇವಕ ಸಿಬ್ಬಂದಿ ಸಹಕಾರ ನೀಡುತ್ತಾರೆ. ಅಗತ್ಯವಿದ್ದಲ್ಲಿ ಯಾವುದೇ ದಾಖಲಾತಿಯನ್ನು ಸ್ಕಾ್ಯನ್‌ ಮಾಡಿ ಅಪ್‌ಲೋಡ್‌ ಮಾಡುತ್ತಾರೆ. ಜನ ಸೇವಕ ಸಿಬ್ಬಂದಿಯ ಸೇವೆಗೆ .115 ಸೇವಾ ಶುಲ್ಕ ನಿಗದಿಪಡಿಸಲಾಗಿದೆ. ಪ್ರಸ್ತುತ ಟಿ.ದಾಸರಹಳ್ಳಿ, ರಾಜಾಜಿನಗರ, ಮಹಾದೇವಪುರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಈ ಯೋಜನೆ ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಗರದ ಇತರ ಕ್ಷೇತ್ರಗಳಿಗೂ ವಿಸ್ತರಿಸುವುದಾಗಿ ತಿಳಿಸಿದರು.

ಇಲಾಖಾವಾರು ಸೇವೆ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬಿಬಿಎಂಪಿ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಪೊಲೀಸ್‌ ಇಲಾಖೆಯ ಒಟ್ಟು 53 ಸೇವೆಗಳನ್ನು ಈ ಯೋಜನೆಯಲ್ಲಿ ನಾಗರಿಕರು ಪಡೆಯಬಹುದು.

ಸಮಯ ಕಾಯ್ದಿರಿಸಲು ಸಂಪರ್ಕ ಕೇಂದ್ರ- 080-44554455, ಮೊಬೈಲ್‌ ಆ್ಯಪ್‌: ಕರ್ನಾಟಕ ಮೊಬೈಲ್‌ ಅಪ್ಲಿಕೇಶನ್‌ ಆಥವಾ ವೆಬ್‌ಸೈಟ್‌: ಡಿಡಿಡಿ.ka್ಟ್ಞaಠಿaka.ಜಟ.ಜ್ಞಿ ಸಂಪರ್ಕಿಸಬಹುದು.

ಜನಸ್ನೇಹಿ ಸಹಾಯ ವೇದಿಕೆ

ಸಾರ್ವಜನಿಕ ಹಿತಾಸಕ್ತಿಯ ಕುಂದು ಕೊರತೆಗಳನ್ನು ಮೊಬೈಲ್‌: 9980299802 ಸಂಖ್ಯೆಗೆ ವಾಟ್ಸಪ್‌ ಕಳುಹಿಸುವ ಮೂಲಕ ಅಥವಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟ್ವೀಟರ್‌ ಖಾತೆ ಃka್ಟ್ಞaಠಿakaಙdಜಿp್ಟಮೂಲಕ ಟ್ವೀಟ್‌ ಮಾಡುವ ಮೂಲಕ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಬಹುದು. ಯಾವುದೇ ಇಲಾಖೆಗೆ ಸಂಬಂಧಿಸಿದ ಅಹವಾಲುಗಳನ್ನು ಈ ವೇದಿಕೆಯಲ್ಲಿ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದೆ.

ಕಾರ್ಮಿಕ ಸಹಾಯವಾಣಿ

ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಸೂಕ್ತ ಮಾಹಿತಿ ನೀಡಲು ಮತ್ತು ಕುಂದು ಕೊರತೆಗಳ ಬಗ್ಗೆ ದೂರನ್ನು ಸ್ವೀಕರಿಸಿ ಪರಿಹಾರ ಕಲ್ಪಿಸಲು ಕಾರ್ಮಿಕ ಇಲಾಖೆ ಬನ್ನೇರುಘಟ್ಟರಸ್ತೆಯಲ್ಲಿರುವ ಪ್ರಧಾನ ಕಚೇರಿಯ ಆವರಣದಲ್ಲಿ ‘ಆಶಾದೀಪ’ ಯೋಜನೆಯಡಿ ಕಾರ್ಮಿಕ ಸಹಾಯವಾಣಿ ಕೇಂದ್ರ ತೆರೆದಿದೆ. ದಿನದ 24 ಗಂಟೆಗಳು ವರ್ಷದ 365 ದಿನಗಳೂ ಈ ಕೊಠಡಿ ಕಾರ್ಯ ನಿರ್ವಹಿಸುತ್ತದೆ. ಕಾರ್ಮಿಕರು ಶುಲ್ಕ-ರಹಿತ ಸಹಾಯವಾಣಿ ಸಂಖ್ಯೆ: 155214ಗೆ ಕರೆ ಮಾಡಿ ಅಹವಾಲು ನೋಂದಾಯಿಸಬಹುದು. ಅಲ್ಲದೇ ವಾಟ್ಸಪ್‌ ಸಂಖ್ಯೆ: 9333333684 ಮೂಲಕ ದಾಖಲಿಸಬಹುದು.

ಆನೇಕಲ್‌ ಅಭಿವೃದ್ಧಿಗೆ ವಿಶೇಷ ಅನುದಾನ: ಬಿಎಸ್‌ವೈ

ಈ ಸಹಾಯವಾಣಿ ಕೈಗಾರಿಕಾ ರಾಸಾಯನಿಕ ಅಪಘಾತಗಳು ಮತ್ತು ವಿಪತ್ತುಗಳ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ತುರ್ತು ನಿಯಂತ್ರಣಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ಜತೆಗೆ ಮಹಿಳಾ ಕಾರ್ಮಿಕರಿಗೆ ಸಕಾಲಿಕ ನೆರವು ನೀಡಲಿದ್ದು, ಮಹಿಳೆ ಕೆಲಸದಿಂದ ಮನೆಗೆ ತಡವಾಗಿ ತೆರಳುವ ಸಂದರ್ಭದಲ್ಲಿ ಆಕೆ ಸುರಕ್ಷಿತವಾಗಿ ಮನೆಗೆ ತಲುಪುವರೆಗೆ ನಿಗಾ ವಹಿಸಲು ನಿಯಂತ್ರಣಾ ಕೊಠಡಿಯ ಸಹಾಯ ಕೋರಬಹುದಾಗಿದೆ.

click me!