ಅಪ್ಪುಗೆ ವರನಟನ ಫೋಟೊ ಗಿಫ್ಟ್ ನೀಡಿದ ಅಭಿಮಾನಿಗಳು| ಮುಗುಳ್ನಗೆಯೊಂದಿಗೆ ಅಭಿಮಾನಿಗಳ ಕಾಣಿಕೆ ಸ್ವೀಕರಿಸಿದ ಪುನೀತ್| ಕೋವಿಡ್ ಹಿನ್ನೆಲೆಯಲ್ಲಿ ಚಿತ್ರೀಕರಣ ತಡವಾಗಿ ಆರಂಭ|
ಹೊಸಪೇಟೆ(ಅ.15): ಬಹುನಿರೀಕ್ಷಿತ ಜೇಮ್ಸ್ ಚಿತ್ರದ ಶೂಟಿಂಗ್‌ಗಾಗಿ ಹೊಸಪೇಟೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಗಮಿಸಿದ್ದಾರೆ. ಕಮಲಾಪುರದ ಬಳಿಯ ಆರೇಂಜ್ ಕೌಂಟಿಯಲ್ಲಿ ಶೂಟಿಂಗ್ ಆರಂಭಗೊಂಡಿದ್ದು, ನಾಲ್ಕು ದಿನಗಳ ವರೆಗೆ ರೆಸಾರ್ಟ್‌ನಲ್ಲೇ ಶೂಟಿಂಗ್ ನಡೆಯಲಿದೆ.
ನಾಲ್ಕು ದಿನ ರೆಸಾರ್ಟ್‌ನಲ್ಲಿ ಶೂಟಿಂಗ್ ಬಳಿಕ ಗಂಗಾವತಿ ಬಳಿ ಶೂಟಿಂಗ್ ನಡೆಯಲಿದೆ. ಗಂಗಾವತಿಯಲ್ಲಿ ಭವ್ಯ ಸೆಟ್ ಹಾಕಲಾಗಿದೆ. ತೆಲುಗು ನಟ ಶ್ರೀಕಾಂತ್ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ನಿರ್ದೇಶಕ ಚೇತನ್ ಕುಮಾರ ನಿರ್ದೇಶನದ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ನಿರ್ಮಾಪಕ ಕಿಶೋರ್ ಪತ್ತಿಕೊಂಡ ಅವರ ಮೊದಲ ಚಿತ್ರವಾಗಿದ್ದು, ಕಿಶೋರ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.
ಜೇಮ್ಸ್ ಶೂಟಿಂಗ್‌ಗೆ ಹೊಸಪೇಟೆಗೆ ಪುನೀತ್ ರಾಜಕುಮಾರ್
ಕೋವಿಡ್ ಹಿನ್ನೆಲೆಯಲ್ಲಿ ಚಿತ್ರೀಕರಣ ತಡವಾಗಿ ಆರಂಭವಾಗುತ್ತಿದೆ. ಶೂಟಿಂಗ್ ಶುಭಾರಂಭವಾಗಿದ್ದು, ಬಿಗ್ ಬಜೆಟ್‌ನ ಚಿತ್ರದಲ್ಲಿ ಅಪ್ಪು ಅಭಿನಯಿಸುತ್ತಿರುವುದರಿಂದ ಅವರ ಅಭಿಮಾನಿಗಳು ಅವರನ್ನು ಕಾಣಲು ರೆಸಾರ್ಟ್‌ಗೆ ಆಗಮಿಸುತ್ತಿದ್ದಾರೆ. ರೆಸಾರ್ಟ್ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದ್ದು, ಯಾರನ್ನೂ ಒಳಬಿಡಲಾಗುತ್ತಿಲ್ಲ.
ಅಪ್ಪುಗೆ ಡಾ. ರಾಜ್ ಫೋಟೋ ಗಿಫ್ಟ್
ವರನಟ ಡಾ. ರಾಜ್‌ಕುಮಾರ ಜತೆಗೆ ಅಪ್ಪು ಇರುವ ಫೋಟೋವನ್ನು ಅವರ ಅಭಿಮಾನಿಗಳು ಆರೇಂಜ್ ಕೌಂಟಿ ರೆಸಾರ್ಟ್ ಬಳಿ ನೀಡಿದರು. ಬೆಳಗ್ಗೆಯಿಂದಲೇ ಅವರ ಬರುವಿಕೆಗಾಗಿ ಹೊಸಪೇಟೆಯ ಹೊರವಲಯದಲ್ಲಿ ಕಾದಿದ್ದ ಅವರ ಅಭಿಮಾನಿಗಳು ಅವರನ್ನು ಬರಮಾಡಿಕೊಂಡು ರೆಸಾರ್ಟ್ ವರೆಗೆ ಬೀಳ್ಕೊಟ್ಟರು. ವರನಟ ಡಾ. ರಾಜಕುಮಾರ್ ಜತೆಗೆ ಪುನೀತ್ ಇರುವ ಫೋಟೋವನ್ನು ಅವರಿಗೆ ಕಾಣಿಕೆ ನೀಡಿದರು. ಮುಗುಳ್ನಗೆಯೊಂದಿಗೆ ಅಭಿಮಾನಿಗಳ ಕಾಣಿಕೆ ಸ್ವೀಕರಿಸಿದರು. ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಕಿಚಿಡಿ ವಿಶ್ವ, ಜೋಗಿ ತಾಯಪ್ಪ, ಮೂರ್ತಿ, ಸೋಮ, ಮಹಾರಾಜ, ಗುಜ್ಜಲ್ ಮಂಜು ಮತ್ತಿತರರಿದ್ದರು.