ಶಿರೂರು ಗುಡ್ಡ ಕುಸಿತ ದುರ್ಘಟನೆ: ತಂದೆಯ ಮೃತದೇಹ ಹುಡುಕಿಕೊಡುವಂತೆ ಹೆಚ್‌ಡಿಕೆಗೆ ಜಗನ್ನಾಥ್ ಪುತ್ರಿಯರ ಮನವಿ..!

By Girish Goudar  |  First Published Jul 20, 2024, 5:32 PM IST

ತಂದೆಯ ಮೃತದೇಹ ದೊರೆಯದೇ 5 ದಿನಗಳಾಗಿದ್ದು, ಅನ್ನ ಆಹಾರ ಕೂಡಾ ಸೇವಿಸಿಲ್ಲ. ಲಕ್ಷ್ಮಣ ನಾಯ್ಕ್ ಕುಟುಂಬಕ್ಕೆ ಸಹಾಯ ಮಾಡಲೆಂದು ತಂದೆ ತೆರಳಿದ್ದಾಗ ಈ ಘಟನೆ ನಡೆದಿದೆ. ಕ್ಯಾಂಟೀನ್ ಇದ್ದ ಜಾಗದಲ್ಲಿ ಹುಡುಕೋ ಬದಲು ಜಿಲ್ಲಾಡಳಿತ ಮೀನಾಮೇಷ ಮಾಡ್ತಿದೆ. ನಮ್ಮ ತಂದೆಯ ಮೃತದೇಹವನ್ನಾದ್ರೂ ಹುಡುಕಿ ಕೊಡಿ ಎಂದು ನೋವು ವ್ಯಕ್ತಪಡಿಸಿದ ಮೃತ ಜಗನ್ನಾಥ್ ಕುಟುಂಬ 
 


ಕಾರವಾರ(ಜು.20): ಉತ್ತರಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರ್ಘಟನೆಯಲ್ಲಿ ಮೃತಪಟ್ಟ ಜಗನ್ನಾಥ್ ಕುಟುಂಬ ಇಂದು(ಶನಿವಾರ) ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿದೆ. ತಮ್ಮ ತಂದೆಯ ಮೃತದೇಹ ಹುಡುಕಿಕೊಡುವಂತೆ ಜಗನ್ನಾಥ್ ಪುತ್ರಿಯರು ಹಾಗೂ ಅಳಿಯ ಮನವಿ ಮಾಡಿದ್ದಾರೆ.  ಜಗನ್ನಾಥ್ ಪುತ್ರಿಯರಾದ ಪಲ್ಲವಿ, ಕೃತಿಕಾ, ಮನೀಷಾ ಹಾಗೂ ಅಳಿಯ ಸುಭಾಷ್ ನಾಯ್ಕ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ. 

ಈ ವೇಳೆ ಏಷಿಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಮೃತ ಜಗನ್ನಾಥ್ ಕುಟುಂಬ, ತಂದೆಯ ಮೃತದೇಹ ದೊರೆಯದೇ 5 ದಿನಗಳಾಗಿದ್ದು, ಅನ್ನ ಆಹಾರ ಕೂಡಾ ಸೇವಿಸಿಲ್ಲ. ಲಕ್ಷ್ಮಣ ನಾಯ್ಕ್ ಕುಟುಂಬಕ್ಕೆ ಸಹಾಯ ಮಾಡಲೆಂದು ತಂದೆ ತೆರಳಿದ್ದಾಗ ಈ ಘಟನೆ ನಡೆದಿದೆ. ಕ್ಯಾಂಟೀನ್ ಇದ್ದ ಜಾಗದಲ್ಲಿ ಹುಡುಕೋ ಬದಲು ಜಿಲ್ಲಾಡಳಿತ ಮೀನಾಮೇಷ ಮಾಡ್ತಿದೆ. ನಮ್ಮ ತಂದೆಯ ಮೃತದೇಹವನ್ನಾದ್ರೂ ಹುಡುಕಿ ಕೊಡಿ ಎಂದು ನೋವು ವ್ಯಕ್ತಪಡಿಸಿದ್ದಾರೆ. 

Latest Videos

undefined

ಶಿರೂರು ಗುಡ್ಡ ಕುಸಿತ ಪ್ರಕರಣ: ಸ್ಥಳಕ್ಕೆ ಹೆಚ್‌ಡಿಕೆ ಭೇಟಿ.. ಮಾಧ್ಯಮಗಳಿಗೆ ಜಿಲ್ಲಾಡಳಿತದಿಂದ ತಡೆ

ಮೂಲತಃ ಕುಮಟಾ ಬಾಡ- ಹುಬ್ಬಣಗೇರಿಯ ಗ್ರಾಮದ ನಿವಾಸಿ ಜಗನ್ನಾಥ ಜಟ್ಟಿ ನಾಯ್ಕ ಶಿರೂರಿನ ಸಣ್ಣ ಕ್ಯಾಂಟೀನ್ ಮಾಲೀಕರಾಗಿದ್ದರು. ಮೃತ ಲಕ್ಷಣ ನಾಯ್ಕ ಅವರ ಬಾವ ಜಗನ್ನಾಥ್. ಶಿರೂರು ಗುಡ್ಡ ಕುಸಿತ ದುರ್ಘಟನೆ ವೇಳೆ ತನ್ನ ಬಾವನ ಕ್ಯಾಂಟೀನ್‌ನಲ್ಲಿದ್ದ ಜಗನ್ನಾಥ್ ಕೂಡ ಮಣ್ಣಿನಡಿ ಸಿಲುಕಿದ್ರು. ಮೃತ ಲಕ್ಷ್ಮಣ ನಾಯ್ಕ ಅವರ ಅಕ್ಕನನ್ನು ಮದುವೆಯಾದ ನಂತರ ಜಗನ್ನಾಥ್ ಶಿರೂರಿನಲ್ಲಿಯೇ ನೆಲೆಸಿದ್ದರು.  ಶಿರೂರಿನಲ್ಲಿಯೇ ಸಣ್ಣ ಮನೆ ಕಟ್ಟಿಕೊಂಡು ತನ್ನ ಸಂಸಾರದೊಟ್ಟಿಗೆ ಬಾಳುತ್ತಿದ್ದ ಜಗನ್ನಾಥ್ ಅವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಇವರ ಓರ್ವ ಮಗಳು ಮದುವೆಯಾಗಿದ್ದು, ಇನ್ನೀರ್ವರು ಹೆಣ್ಣು ಮಕ್ಕಳು ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದಾರೆ. ಲಕ್ಷ್ಮಣ ನಾಯ್ಕ ದಂಪತಿಗೆ ಕೆಲವು ದಿನಗಳಿಂದ ಜ್ವರ ಇದ್ದದ್ದರಿಂದ ಸ್ವಲ್ಪ ದಿನ ಕ್ಯಾಂಟೀನ್ ನೋಡಿಕೊಳ್ಳಲು ಬಾವನ ಬಳಿ ಕೇಳಿಕೊಂಡಿದ್ರು. ಈ ಹಿನ್ನೆಲೆಯಲ್ಲಿ  ಜಗನ್ನಾಥ್ ಬೆಳಗ್ಗೆಯೇ ಕ್ಯಾಂಟೀನ್‌ಗೆ ಬಂದು ಕೆಲಸದಲ್ಲಿ ತೊಡಗಿಕೊಂಡಿದ್ದರು. 

ದುರ್ಘಟನೆ ನಡೆದ ದಿನ ಬೆಳಗ್ಗೆ 7 ಗಂಟೆಗಷ್ಟೇ ಬಾವನ ಕ್ಯಾಂಟೀನ್ ಕೆಲಸಕ್ಕೆ ಸಹಕರಿಸಲು ಹೋಗಿದ್ರು. ಆದರೆ, ಬೆಳಗ್ಗೆ 8.30ರ ವೇಳೆ ನಡೆದ ದುರ್ಘಟನೆ ವೇಳೆ ಮಣ್ಣಿನಡಿ ಸಿಲುಕಿ ಜಗನ್ನಾಥ್ ಸಾವಿಗೀಡಾಗಿದ್ದಾರೆ. ಜಗನ್ನಾಥ್ ಮೃತದೇಹ ಹುಡುಕುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. 

click me!