ಬೆಂಗಳೂರು ಈಗ ತಂಪು ತಂಪು ಕೂಲ್ ಕೂಲ್, ಈ ವರ್ಷದ ಅತೀ ಕಡಿಮೆ ತಾಪಮಾನ ದಾಖಲು!

By Chethan Kumar  |  First Published Jul 20, 2024, 5:28 PM IST

ಬೆಂಗಳೂರಿನ ವಾತಾವರಣಕ್ಕೆ ಮಾರು ಹೋಗದವರು ಯಾರಿದ್ದಾರೆ? ಇದೀಗ ವರ್ಷದ ಅತೀ ಕಡಮೆ ತಾಪಮಾನ ಶುಕ್ರವಾರ ದಾಖಲಾಗಿದೆ. ಇದು ಕೋಲ್ಡೆಸ್ಟ್ ಡೇ ಎಂದೇ ದಾಖಲಾಗಿದೆ. 
 


ಬೆಂಗಳೂರು(ಜು.20) ಬೆಂಗಳೂರು ವಾತಾವರಣ ಎಂತವರನ್ನು ಮೋಡಿ ಮಾಡಿ ಬಿಡುತ್ತದೆ. ಇತರ ನಗರಗಳಿಗೆ ಹೋಲಿಸಿದರೆ ಸಿಲಿಕಾನ್ ಸಿಟಿ ಕೂಲ್ ಕೂಲ್. ಇತ್ತೀಚೆಗೆ ಬೆಂಗಳೂರು ಎಪ್ರಿಲ್-ಮೇ ತಿಂಗಳಲ್ಲಿ ರಣಬಿಸಿಲಿಗೆ ಹೈರಾಣಿಗಿದೆ.ಕಳೆದೆರಡು ತಿಂಗಳ ಹಿಂದೆ ಹಾಟ್ ಡೇ ಮೂಲಕ ಬೆವರು ಹರಿಸಿದ್ದ ಬೆಂಗಳೂರು ಇದೀಗ ಕೂಲ್ ಕೂಲ್ ಆಗಿದೆ. ಬೆಂಗಳೂರಿನ ಈ ವರ್ಷದ ಅತೀ ಕಡಿಮೆ ತಾಪಮಾನ ಶುಕ್ರವಾರ(ಜು.19) ದಾಖಲಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಶುಕ್ರವಾರ ಬೆಂಗಳೂರಿನ ಗರಿಷ್ಟ ತಾಪಮಾನ ಕೇವಲ 23.8 ಡಿಗ್ರಿ ಸೆಲ್ಶಿಯಸ್. 

ಎಪ್ರಿಲ್ ಮೇ ತಿಂಗಳಲ್ಲಿ ಅದೆಷ್ಟೆ ಬಿಸಿಯಾಗಿದ್ದರೂ ಬೆಂಗಳೂರಿನಲ್ಲಿ ಒಂದು ಮಳೆ ಬಿದ್ದರೆ ಎಲ್ಲವೂ ಕೂಲ್. ಜೂನ್ ತಿಂಗಳ ಆರಂಭದಲ್ಲಿ ಬೆಂಗಳೂರು ಹೆಚ್ಚಿನ ಮಳೆ ಕಂಡಿತ್ತು. ಬಳಿಕ ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕಡಿಮೆಯಾದರೂ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಜುಲೈ ತಿಂಗಳಲ್ಲಿ ಕರಾವಳಿ ಕರ್ನಾಟಕ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆ ಅಬ್ಬರದ ತಂಗಾಳಿ ಬೆಂಗಳೂರಿಗೂ ತಟ್ಟಿದೆ. ಬೆಂಗಳೂರಿನ ಮಳೆ ಜೊತೆಗೆ ಪಕ್ಕದ ಜಿಲ್ಲೆಗಳ ಮಳೆ ಆರ್ಭಟ ಬೆಂಗಳೂರನ್ನು ಮತ್ತಷ್ಟು ತಂಪಾಗಿಸಿದೆ.

Latest Videos

undefined

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 4 ದಿನ ಭಾರೀ ಮಳೆ..!

ಈ ತಂಗಾಳಿಯಿಂದ ಗುರುವಾರ ಹಾಗೂ ಶುಕ್ರವಾರದ ನಡುವೆ ಅಂದರೆ 24 ಗಂಟೆಯಲ್ಲಿ ಬೆಂಗಳೂರಿನ ತಾಪಮಾನ 3.2 ಡಿಗ್ರಿ ಸೆಲ್ಶಿಯಸ್ ಕುಸಿತ ಕಂಡಿತ್ತು. ಶುಕ್ರವಾರ 23.8 ಡಿಗ್ರಿ ಸೆಲ್ಶಿಯಸ್‌ಗೆ ಇಳಿಕೆ ಕಾಣುವ ಮೂಲಕ ಈ ವರ್ಷದ ಅತೀ ತಂಪಾದ ದಿನ ಅನ್ನೋ ದಾಖಲೆ ಬರೆಯಿತು. ಬೆಂಗಳೂರಿನಲ್ಲಿ ಮೋಡ ಕವಿದ ವಾತಾರಣ, ಕೆಲೆವೆಡೆ ತುಂತುರ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ. ಆದರೆ ಬೆಂಗಳೂರಿಗೆ ಸದ್ಯ ಯಾವುದೇ ಅಲರ್ಟ್ ಭೀತಿ ಇಲ್ಲ. ಜೂನ್ 21ರಿಂದ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ. ಜೊತೆಗೆ ಬಹುತೇಕ ಕಡೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿಎಸ್ ಪಾಟೀಲ್ ಸೂಚಿಸಿದ್ದಾರೆ.

ಜೂನ್ 21 ರಿಂದ ಬೆಂಗಳೂರಿನ ವಾತಾವರಣ ಮತ್ತಷ್ಟು ತಂಪಾಗುವ ಸಾಧ್ಯತೆ ಇದೆ. ಕಾರಣ ಮೋಡ ಕವಿದ ವಾತಾವರಣ ಜೊತೆಗೆ ಸಾಧಾರಣ ಮಳೆ ಕೂಡ ಆಗಲಿದೆ. ಇಷ್ಟೇ ಅಲ್ಲ ಅರೇಬಿಯನ್ ಸಮುದ್ರ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಈ ಶೀತಗಾಳಿಯೂ ಬೆಂಗಳೂರನ್ನು ಮತ್ತಷ್ಟು ತಂಪಾಗಿಸಲಿದೆ. ಹೀಗಾಗಿ ಇದೀಗ ದಾಖಲಾಗಿರುವ ತಂಪು ದಿನದ ದಾಖಲೆ ಮತ್ತೆ ಮುರಿಯುವ ಸಾಧ್ಯತೆ ಇದೆ.

ಕೂಲ್ ಕೂಲ್ ಬೆಂಗಳೂರು ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ನಮ್ಮ ಬೆಂಗಳೂರು, ಕೂಲ್ ಸಿಟಿ ಎಂದು ಬೆಂಗಳೂರಿಗರು ಹೆಮ್ಮೆಯಿಂದ ಪೋಸ್ಟ್ ಮಾಡಿದ್ದಾರೆ. 

ಮಳೆ ಆರ್ಭಟಕ್ಕೆ ಮತ್ತೆ 7 ಜನ ಬಲಿ: ಕೃಷ್ಣಾ ನದಿ ಪ್ರವಾಹಕ್ಕೆ 52 ಸೇತುವೆ ಮುಳುಗಡೆ


 

BENGALURU DAYTIME TEMPERATURE AT JUST 23.8c. THAT MAKES IT THE COLDEST DAY OF THE YEAR 😊

This is good fun. The coldest day record for the year set on 15th July has been broken :)
Today the City recorded 23.8c.

There was a time in late April when we were on the extreme heat… pic.twitter.com/K8le6m6DLG

— Namma Karnataka Weather (@namma_vjy)
click me!