ಬೆಂಗಳೂರಿನ ಒಂದು ವಿದ್ಯುತ್ ಚಿತಾಗಾರ ಸ್ಥಗಿತ

Published : Aug 21, 2019, 08:31 AM IST
ಬೆಂಗಳೂರಿನ ಒಂದು ವಿದ್ಯುತ್ ಚಿತಾಗಾರ ಸ್ಥಗಿತ

ಸಾರಾಂಶ

ಬೆಂಗಳೂರಿನ ಒಂದು ವಿದ್ಯುತ್ ಚಿತಾಗಾರ ಸ್ಥಗಿತ ಮಾಡಲಾಗಿದೆ. ಕೆಲ ದಿನಗಳ ಕಾಲ ಚಿತಾಗಾರ ಸ್ಥಗಿತಗೊಳ್ಳಲಿದೆ. 

ಬೆಂಗಳೂರು [ಆ.21]: ನಗರದ ಮೈಸೂರು ರಸ್ತೆ ಜಗಜೀವನ್‌ರಾಮ್‌ ನಗರದಲ್ಲಿ ಇರುವ ಬಿಬಿಎಂಪಿಯ ವಿದ್ಯುತ್‌ ಚಿತಾಗಾರವನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ನಾಲ್ಕು ತಿಂಗಳು ಸ್ಥಗಿತಗೊಳಿಸಲಾಗುತ್ತಿದೆ. 

ಚಿತಾಗಾರದ ಕಾಮಗಾರಿಗೆ 120 ದಿನ ಅವಶ್ಯಕತೆ ಇದೆ. ಹಾಗಾಗಿ, ಚಿತಾಗಾರದ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಸಹಕರಿಸಬೇಕೆಂದು ಬಿಬಿಎಂಪಿಯ ಪಶ್ಚಿಮ ವಲಯದ ಕಾರ್ಯಪಾಲ ಎಂಜಿನಿಯರ್‌ ಮನವಿ ಮಾಡಿದ್ದಾರೆ.

ಮೇಲ್ದರ್ಜೆಗೆ ಏರಿಸಿದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳಿಸಿ ಶೀಘ್ರವೇ ಆರಂಭವಾಗಲಿದೆ ಎಂದು ಹೇಳಿದ್ದಾರೆ. 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!