ಸಿಎಂ ಹುದ್ದೆಗಾಗಿ ಫೈಟ್‌, ಕಾಂಗ್ರೆಸ್‌ ಐಸಿಯುನಲ್ಲಿದೆ: ಜಗದೀಶ ಶೆಟ್ಟರ್‌

By Kannadaprabha NewsFirst Published Oct 16, 2021, 8:09 AM IST
Highlights

*   ಪೂರ್ಣ ಅವಸಾನದತ್ತ ಸಾಗಿದ ಕಾಂಗ್ರೆಸ್‌
*   ಸಿದ್ದರಾಮಯ್ಯ ಹಾಗೂ ಡಿಕೆಶಿ ಗುಂಪಿನ ಮಧ್ಯೆ ಫೈಟ್‌ ಶುರು
*   ಹಾನಗಲ್‌ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ನಿಶ್ಚಿತ 

ಹುಬ್ಬಳ್ಳಿ(ಅ.16):  ರಾಜ್ಯದಲ್ಲಿ(Karnataka) ಕಾಂಗ್ರೆಸ್‌ ಐಸಿಯುನಲ್ಲಿದೆ(ICU). ಸಿದ್ದರಾಮಯ್ಯ(Siddaramaiah) ಹಾಗೂ ಡಿ.ಕೆ. ಶಿವಕುಮಾರ ಫೈಟ್‌ ಜೋರಾಗಿದ್ದು, ಪೂರ್ಣ ಅವಸಾನದತ್ತ ಪಕ್ಷ ಅದು ಸಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌(Jagadish Shettar) ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ(Congress)ಎರಡು ಗುಂಪುಗಳಿದ್ದು ಸಿದ್ದರಾಮಯ್ಯ ಹಾಗೂ ಡಿಕೆಶಿ ಗುಂಪಿನ ಮಧ್ಯೆ ಫೈಟ್‌ ಶುರುವಾಗಿದೆ. ಸಿಎಂ(Chief Minister) ಹುದ್ದೆಗಾಗಿ ಈ ಫೈಟ್‌ ನಡೆಯುತ್ತಿದೆ. ಉಗ್ರಪ್ಪ, ಸಲೀಂ ನಡುವಿನ ಸಂಭಾಷಣೆ ಈ ಫೈಟ್‌ನ ಒಂದು ಭಾಗ. ಉಗ್ರಪ್ಪ(VS Ugrappa) ಸಿದ್ದರಾಮಯ್ಯ ಅವರ ಪಟ್ಟದ ಶಿಷ್ಯ. ಅವರೇ ಡಿ.ಕೆ. ಶಿವಕುಮಾರ(DK Shivakumar) ವಿರುದ್ಧ ಆರೋಪ ಮಾಡಿದ್ದಾರೆ. ಡಿಕೆಶಿ ಹಣಿಯಲು ಸಿದ್ದರಾಮಯ್ಯ ಬೆಂಬಲಿಗರು ನಿಂತಿದ್ದಾರೆ. ತಂತ್ರ, ಕುತಂತ್ರಗಳನ್ನೆಲ್ಲ ಮಾಡುತ್ತಿದ್ದಾರೆ. ಮೊದಲು ಎಲ್ಲವನ್ನೂ ಆರೋಪ ಮಾಡುತ್ತಾರೆ. ಬಳಿಕ ಕ್ಷಮೆ ಕೇಳಿದರೆ ಹೇಗೆ? ಇದು ಕಾಂಗ್ರೆಸ್‌ ಐಸಿಯುನಲ್ಲಿರುವ ಸೂಚನೆ ನೀಡುತ್ತಿದೆ. ಆ ಪಕ್ಷ ಅವಸಾನದತ್ತ ಸಾಗಿದೆ ಎಂದರು.

ಚುನಾವಣೆಗೆ ಮತ್ತೆ ಸ್ಪರ್ಧಿಸಲು ವಿಪ ಸಭಾಪತಿ ಹೊರಟ್ಟಿ ನಿರ್ಧಾರ

ಹಾನಗಲ್‌(Hanagal) ಹಾಗೂ ಸಿಂದಗಿ(Sindagi) ಉಪಚುನಾವಣೆಯಲ್ಲಿ(Byelection) ಬಿಜೆಪಿ(BJP) ಗೆಲವು ನಿಶ್ಚಿತ ಎಂದ ಶೆಟ್ಟರ್‌, ಹಾನಗಲ್‌ನಲ್ಲಿ ಅ. 17ರಂದು ಪ್ರಚಾರ(Campaign) ನಡೆಸುವೆ. 21 ಹಾಗೂ 22ರಂದು ಸಿಂದಗಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳುವೆ. ಎರಡು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರದಿಂದ ಯಡಿಯೂರಪ್ಪ(BS Yediyurappa) ದೂರ ಇದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಸಾಕಷ್ಟು ಸಮಯವಿದೆ. ಅವರು ಪ್ರಚಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
 

click me!