ಆಸ್ಪತ್ರೆಯಿಂದ ಅಚಾತುರ್ಯ : ದೂರು ದಾಖಲು

By Kannadaprabha News  |  First Published Oct 16, 2021, 7:40 AM IST
  • ಮಂಗಳೂರಿನ ಲೇಡಿಗೋಷನ್‌ ಸರ್ಕಾರಿ ಹೆರಿಗೆ ಆಸ್ಪತ್ರೆ ನವಜಾತ ಶಿಶು ಬದಲಿಸಿದ ಗಂಭೀರ ಆರೋಪ 
  • ಆಸ್ಪತ್ರೆಯ ದಾಖಲೆಗಳಲ್ಲಿ ಹೆಣ್ಣು ಮಗು ಎಂದು ತೋರಿಸಿ ಗಂಡು ಮಗು ನೀಡಿದ್ದಾರೆ 

ಮಂಗಳೂರು (ಅ.16):  ಮಂಗಳೂರಿನ (Mangaluru) ಲೇಡಿಗೋಷನ್‌ ಸರ್ಕಾರಿ ಹೆರಿಗೆ ಆಸ್ಪತ್ರೆ (Govt hospital) ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ಎದುರಿಸುತ್ತಿದೆ. ಆಸ್ಪತ್ರೆಯ (Hospital) ದಾಖಲೆಗಳಲ್ಲಿ ಹೆಣ್ಣು ಮಗು (baby girl) ಎಂದು ತೋರಿಸಿ ಗಂಡು ಮಗು (Baby Boy) ನೀಡಿದ್ದಾರೆ ಎಂದು ಕೋಟೇಶ್ವರ (Koteshwara) ಮೂಲದ ಕುಟುಂಬ ಪಾಂಡೇಶ್ವರ ಪೊಲೀಸರಿಗೆ (police) ದೂರು ನೀಡಿದೆ.

ಉಡುಪಿ (Udupi) ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಮುಸ್ತಫಾ ಎಂಬವರ ಪತ್ನಿ ಅಮ್ರೀನಾ ಹೆರಿಗೆಗಾಗಿ ಸೆ.27ರಂದು ಇಲ್ಲಿನ ಲೇಡಿಗೋಷನ್‌ ಆಸ್ಪತ್ರೆಗೆ ದಾಖಲಾಗಿದ್ದರು.

Latest Videos

undefined

ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆ - ಮಗು ಜನನದ ಬಳಿಕ ಗಂಡ ಅರೆಸ್ಟ್

ಅದೇ ದಿನ ಹೆರಿಗೆಯಾಗಿ  (Delivery)ಕುಟುಂಬಸ್ಥರಿಗೆ ಹೆಣ್ಣು ಮಗು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಬಳಿಕ ಮಗುವಿಗೆ ತೀವ್ರ ಅನಾರೋಗ್ಯ (Hunhealthy) ಇದ್ದ ಕಾರಣ ಐಸಿಯುಗೆ (ICU) ದಾಖಲು ಮಾಡಲಾಗಿತ್ತು. ಆಸ್ಪತ್ರೆಯ ದಾಖಲೆಗಳಲ್ಲಿ ಹೆಣ್ಣು ಮಗು ಎಂದೇ ದಾಖಲಿಸಲಾಗಿತ್ತು. ಅ.14ರಂದು ಡಿಸ್ಚಾರ್ಜ್ ಆಗಿ ಮನೆಗೆ ಹೋದ ಬಳಿಕ ಗಂಡು ಮಗು ಕೊಟ್ಟಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಸ್ತಾಫಾ ಅವರ ಪತ್ನಿ ಅಮ್ರೀನಾ ಅವರು ಆಸ್ಪತ್ರೆ ದಾಖಲೆಗಳಲ್ಲಿ (Records) ಹೆಣ್ಣು ಮಗು ಎಂದು ಇದ್ದರೂ ಆಸ್ಪತ್ರೆ ಸಿಬ್ಬಂದಿ ಗಂಡು ಮಗು ನೀಡಿದ್ದಾರೆ. ಆದ್ದರಿಂದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬ ಪೊಲೀಸರಿಗೆ ದೂರು ನೀಡಿದೆ.

ಆಸ್ಪತ್ರೆ ಅಧೀಕ್ಷಕ ಸ್ಪಷ್ಟನೆ: ಮಗು ಅದಲು-ಬದಲು ಆರೋಪ ಸತ್ಯಕ್ಕೆ ದೂರವಾದ ವಿಷಯ. ಆಸ್ಪತ್ರೆ ಸಿಬ್ಬಂದಿಯ ಅಚಾತುರ್ಯದಿಂದ ದಾಖಲೆಗಳಲ್ಲಿ ಬರೆಯುವಾಗ ತಪ್ಪಾಗಿದೆ. ಅವಸರದಲ್ಲಿ ಗಂಡು ಮಗು ಎನ್ನುವ ಬದಲು ಹೆಣ್ಣು ಮಗು ಎಂದು ಉಲ್ಲೇಖಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದು ಅವರದ್ದೇ ಮಗು, ನಮ್ಮಲ್ಲಿ ಮಗು ಬದಲಾವಣೆ ಆಗಿಲ್ಲ ಎಂದು ಆಸ್ಪತ್ರೆ ಅಧೀಕ್ಷಕ ಡಾ.ದುರ್ಗಾಪ್ರಸಾದ್‌ (Dr Durgaprasad) ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

ನನ್ನ ಮಗ ಕೃಷ್ಣ ಬಣ್ಣ, ದಯವಿಟ್ಟು ಕ್ರೀಮ್ಸ್, ಹಿಟ್ಟು ಸಜೆಸ್ಟ್ ಮಾಡಬೇಡಿ: ನಟಿ ಶಾಂಭವಿ ವೆಂಕಟೇಶ್!

ಅಧಿಕ ರಕ್ತದೊತ್ತಡ (BP) ಇದ್ದಾಗ ಆ ತಾಯಿ ನಮ್ಮಲ್ಲಿ ದಾಖಲಾಗಿದ್ದಾರೆ. ಪರಿಸ್ಥಿತಿ ಗಂಭೀರ ಇದ್ದಾಗ ನಾವು ಶಸ್ತ್ರಚಿಕಿತ್ಸೆ ಮಾಡಿ ತಾಯಿ, ಮಗುವನ್ನು ಬದುಕಿಸಿದ್ದೇವೆ. ಈ ವೇಳೆ ಮಗುವಿನ ತೂಕ ಮತ್ತು ಆರೋಗ್ಯದಲ್ಲಿ ಸಮಸ್ಯೆ ಇತ್ತು. ಹೀಗಾಗಿ ತುರ್ತು ಸಂದರ್ಭದಲ್ಲಿ ತಕ್ಷಣ ನಾವು ಮಗುವನ್ನು ಐಸಿಯುಗೆ ದಾಖಲಿಸಿದ್ದೇವೆ. ಮಕ್ಕಳ ತಜ್ಞರು ಮಗುವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಈ ವೇಳೆ ತುರ್ತು ಸಂದರ್ಭದಲ್ಲಿ ದಾಖಲೆ ಬರೆಯುವಾಗ ತಪ್ಪಾಗಿದೆ. ಹುಟ್ಟಿದ ಮೇಲೆ ಮಗುವನ್ನು ಸಂಬಂಧಿಕರಿಗೆ ತೋರಿಸಲು ಕೂಡ ನಮಗೆ ಅವಕಾಶ ಸಿಗಲಿಲ್ಲ. ಆದರೆ ದಾಖಲೆಯಲ್ಲಿ ನಮೂದಿಸುವಾಗ ತಪ್ಪಿ ಹೆಣ್ಣು ಮಗು ಎಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ತಪ್ಪು ಮಾಡಿದ ಸಿಬ್ಬಂದಿ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಅಲ್ಲದೆ ದಾಖಲೆಯಲ್ಲಿ ತಪ್ಪು ಮಾಡಿದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದರೆ ಅವರಿಗೆ ಹೆರಿಗೆಯಾಗಿದ್ದು ಗಂಡು ಮಗು, ಅದಕ್ಕೆ ನಮ್ಮಲ್ಲಿ ಸಾಕ್ಷ್ಯ ಇದೆ. ನಮ್ಮ ಸಿಬ್ಬಂದಿಯಿಂದ ದಾಖಲೆ ಬರೆಯುವಾಗ ತಪ್ಪಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಮಾನವ ಸಹಜ ತಪ್ಪಿನಿಂದ ಈ ಗೊಂದಲ ಆಗಿದೆ ಅಷ್ಟೇ. ಮಗು ಗಂಡೇ ಎನ್ನುವ ದಾಖಲೆಗಳನ್ನು ನಾವು ಅಗತ್ಯ ಬಿದ್ದರೆ ಹಾಜರುಪಡಿಸುತ್ತೇವೆ ಎಂದು ಡಾ.ದುರ್ಗಾಪ್ರಸಾದ್‌ ತಿಳಿಸಿದ್ದಾರೆ.

ದಾಖಲೆಯಲ್ಲಿ ಮಗು ಅದಲು ಬದಲಾಗಿ ನಮೂದಿಸಿರುವುದರ ವಿರುದ್ಧ ಸಂತ್ರಸ್ತರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದ್ದು, ತಪ್ಪು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು.

-ಶಶಿಕುಮಾರ್‌, ಪೊಲೀಸ್‌ ಕಮಿಷನರ್‌, ಮಂಗಳೂರು

click me!