ಕೊರೋನಾ ವಾರಿಯರ್ಸ್‌ಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಖರೀದಿಗೆ ಹಣ ನೀಡಿದ ಸಿಡಿಪಿಓ ಅಣ್ಣಪ್ಪ ಹೆಗ್ಗಡೆ| ಸ್ವಂತ ಖರ್ಚಿನಲ್ಲಿಯೇ ಆಕೆಗೆ ಬಟ್ಟೆ, ಊಟ ಕೊಡಿಸಿ ಮಾನವೀಯತೆ ಮೆರೆದ ಅಧಿಕಾರಿ| ತೀವ್ರ ಅಸ್ವಸ್ಥಳಾಗಿದ್ದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿಗ್ಗಾಂವಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ ಸರ್ಕಾರಿ ಅಧಿಕಾರಿ|
ಹಾವೇರಿ(ಮೇ.09): ಸಿಡಿಪಿಓ ಅಧಿಕಾರಿಯೊಬ್ಬರು ಅನಾಥ ಮಹಿಳೆಯನ್ನು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ನಡೆದಿದೆ. ಸಿಡಿಪಿಓ ಅಣ್ಣಪ್ಪ ಹೆಗ್ಗಡೆ ಅವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಆಕೆಗೆ ಬಟ್ಟೆ, ಊಟ ಕೊಡಿಸಿದ್ದಾರೆ.
ಕಳೆದ ಮೂರು ದಿನಗಳಿಂದ ರಸ್ತೆಯಲ್ಲಿಯೇ ಬಿದ್ದಿದ್ದ ಅನಾಥ ಮಹಿಳೆ ಬಗ್ಗೆ ಸ್ಥಳೀಯ ಕನ್ನಡಪ್ರಭ ಪತ್ರಕರ್ತರು ಸಿಡಿಪಿಓ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಡಿಪಿಓ ಅಣ್ಣಪ್ಪ ಹೆಗ್ಗಡೆ ಅವರು ಅನಾಥ ಮಹಿಳೆಗೆ ಅವಶ್ಯ ವಸ್ತುಗಳ ಪೂರೈಕೆ ಮಾಡಿದ್ದಾರೆ.
undefined
2 ತಲೆ, 8 ಕಾಲಿನ ಕೊರೋನಾ ಎಮ್ಮೆಕರು ಜನನ..!
ತೀವ್ರ ಅಸ್ವಸ್ಥಳಾಗಿದ್ದ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿಗ್ಗಾಂವಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊರೊನಾ ವಾರಿಯರ್ಸ್‌ಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಖರೀದಿಗೆ ಸಿಡಿಪಿಓ ಅಣ್ಣಪ್ಪ ಹೆಗ್ಗಡೆ ಅವರು ತಮ್ಮ ಒಂದು ತಿಂಗಳ ಸಂಬಳವನ್ನು ಮೀಸಲಿಡ್ಡಿದ್ದಾರೆ. ಸಿಡಿಪಿಓ ಸಮಾಜಮುಖಿ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.