ಹೆದ್ದಾರಿ ಬದಿ ಪ್ರಯಾಣಿಕರಿಗೆ ಉಚಿತ ಹಲಸಿನ ಹಣ್ಣು

By Kannadaprabha NewsFirst Published Jun 21, 2020, 7:15 AM IST
Highlights

ಸುಳ್ಯದ ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕ ಮಂಡಲದ ವತಿಯಿಂದ ರಾಜ್ಯ ಹೆದ್ದಾರಿ ಬದಿಯಲ್ಲಿ ಉಚಿತವಾಗಿ ಹಲಸಿನ ಹಣ್ಣು ವಿತರಣಾ ಕಾರ್ಯ ನಡೆಯಿತು.

ಮಂಗಳೂರು(ಜೂ.21): ಸುಳ್ಯದ ಕನಕಮಜಲಿನ ಯುವಜನ ವಿಕಾಸ ಕೇಂದ್ರ ಯುವಕ ಮಂಡಲದ ವತಿಯಿಂದ ರಾಜ್ಯ ಹೆದ್ದಾರಿ ಬದಿಯಲ್ಲಿ ಉಚಿತವಾಗಿ ಹಲಸಿನ ಹಣ್ಣು ವಿತರಣಾ ಕಾರ್ಯ ನಡೆಯಿತು.

ಗ್ರಾಮಾಂತರ ಭಾಗಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತಿರುವ ಹಲಸಿನ ಹಣ್ಣು ಮಳೆಗಾಲ ಆರಂಭವಾದಂತೆ ಒಂದೇ ಬಾರಿಗೆ ಹಣ್ಣಾಗಿ ಕೊಳೆತು ಹಾಳಾಗಿ ಹೋಗುತ್ತಿದೆ. ಇದನ್ನು ಮನಗಂಡ ಕನಕಮಜಲು ಯುವಕ ಮಂಡಲದವರು ಹಲಸಿನ ಹಣ್ಣುಗಳನ್ನು ಸಂಗ್ರಹಿಸಿ ಕನಕಮಜಲಿನ ಆನೆಗುಂಡಿ ಎಂಬಲ್ಲಿ ಮತ್ತು ಕನಕಮಜಲು ಗ್ರಾಮ ಪಂಚಾಯತಿ ಎದುರು ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಮತ್ತು ಅಗತ್ಯವಿರುವ ಇತರರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

ಉದ್ಯಮಿ ಅಂತ ಬಿಲ್ಡಪ್ ಕೊಟ್ಟು ಯುವತಿಯರ ಸ್ನೇಹ ಬೆಳೆಸ್ತಿದ್ದ ಆಸಾಮಿಯ ಅಸಲಿ ಮುಖ ಬಯಲು

ಕನಕಮಜಲು ಗ್ರಾ. ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರೋಜಿನಿ, ಯುವಕ ಮಂಡಲದ ಅಧ್ಯಕ್ಷ ಜಯಪ್ರಸಾದ್‌ ಕಾರಿಂಜ ಕಾರ್ಯದರ್ಶಿ ಬಾಲಚಂದ್ರ ನೆಡಿಲು, ಹಾಗೂ ಯುವಕ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

click me!