ಕಾಶ್ಮೀರ ಉಳಿಸಿ ಎನ್ನುವುದು ತಪ್ಪಲ್ಲ, ಪ್ರತಿಭಟನೆ ವೇಳೆ ಹೆಣ್ಣು ಮಗಳೊಬ್ಬಳು ಫ್ರೀ ಕಾಶ್ಮೀರ ಎನ್ನುವುದರಲ್ಲಿ ತಪ್ಪಿಲ್ಲ ಎಂದು ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಹಾಗು ನ್ಯಾಯವಾದಿ ಡಾ.ಸಿ.ಎಸ್.ದ್ವಾರಕನಾಥ್ ಅಭಿಪ್ರಾಯಪಟ್ಟಿದ್ದಾರೆ.
ಕೋಲಾರ(ಜ.17): ಕಾಶ್ಮೀರ ಉಳಿಸಿ ಎನ್ನುವುದು ತಪ್ಪಲ್ಲ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಅದು ಪಾಕಿಸ್ತಾನಕ್ಕೆ ಸೇರಿದ್ದಲ್ಲ. ಅದರಿಂದಾಗಿ ಮೈಸೂರು ವಿವಿಯಲ್ಲಿ ನಡೆದ ಪ್ರತಿಭಟನೆ ವೇಳೆ ಹೆಣ್ಣು ಮಗಳೊಬ್ಬಳು ಫ್ರೀ ಕಾಶ್ಮೀರ ಎನ್ನುವುದರಲ್ಲಿ ತಪ್ಪಿಲ್ಲ ಎಂದು ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಹಾಗು ನ್ಯಾಯವಾದಿ ಡಾ.ಸಿ.ಎಸ್.ದ್ವಾರಕನಾಥ್ ಅಭಿಪ್ರಾಯಪಟ್ಟರು.
ಬೇಲ್ ಕೊಡಿಸಲು ಸಿದ್ಧತೆ
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ 18 ನೇ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಮಾತನಾಡಿ, ಭಾರತ ಸರ್ಕಾರ ಕಾಶ್ಮೀರವನ್ನು ಬಂಧನದಲ್ಲಿರಿಸಿರುವುದರಿಂದ ಅದನ್ನು ಬಿಡುಗಡೆ ಮಾಡಿ ಎಂದು ಹೇಳಿರುವುದು ಸರಿಯಾಗಿಯೇ ಇದೆ. ಆದರೆ ಕೆಲವು ಪಟ್ಟಭದ್ರರು ಇದನ್ನು ವಿವಾದ ಸೃಷ್ಟಿಸಿ ಆ ವಿದ್ಯಾರ್ಥಿನಿಗೆ ಬೇಲ್ ಕೊಡದಂತೆ ಮಾಡಿರುವುದು ಸರಿಯಲ್ಲ. ಆಕೆಯನ್ನು ಬಿಡಿಸಿಕೊಳ್ಳಲು ಸಿದ್ಧತೆ ನಡೆಸಿದ್ದು ಆಕೆಯನ್ನು ಬಿಡಿಸಿಕೊಳ್ಳುವುದು ಅಸ್ಮಿತೆ ಎಂದು ಅವರು ಅಭಿಪ್ರಾಯಪಟ್ಟರು.
ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ
ದೇಶ ಮತ್ತು ರಾಜ್ಯದಲ್ಲಿ ನಮ್ಮ ಅಸ್ಮಿತೆಗೆ ಧಕ್ಕೆ ಬರುವ ಕಾಲದಲ್ಲಿ ನಾವು ಇದ್ದೇವೆ, ಅಸ್ಮಿತೆಯ ಉಳಿವಿಗೆ ಹೋರಾಟ ಮಾಡಬೇಕಾದ ಅಗತ್ಯ ಇದೆ. ಸಂವಿಧಾನಗಳ ಆಶಯಗಳ ಪ್ರಕಾರ ನಮ್ಮ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ, ಗೌರಿ ಲಂಕೇಶ್ ಮತ್ತು ಕಲ್ಗುರ್ಗಿ ಅವರು ನಮ್ಮ ಹಕ್ಕುಗಳ ಬಗ್ಗೆ ಮಾತನಾಡಿದ್ದರಿಂದ ಅವರನ್ನು ಕೊಲೆ ಮಾಡಿದರು ಎಂದಿದ್ದಾರೆ.
ಮೈಸೂರು ವಿವಿ ಫ್ರೀ ಕಾಶ್ಮೀರ ಪೋಸ್ಟರ್ ಪ್ರಕರಣ; ಹಿಂದೆ ಸರಿದ ವಕೀಲ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಮಾತನಾಡಿ, ಅತಿ ಪ್ರಾಚೀನವಾದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಡಿಯಲ್ಲಿ ಕನ್ನಡ ಬೆಳೆಸಲು ಒತ್ತು
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ನಾಗಾನಂದ ಕೆಂಪರಾಜು ಅವರು ಮಾತನಾಡಿ, ಕಸಾಪ ಗ್ರಾಮೀಣ ಭಾಗದಿಂದ ವಿಶ್ವವಿದ್ಯಾಲಯದ ವರೆಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡವನ್ನು ಉಳಿಸಿ ಬೆಳೆಸಲಾಗುತ್ತಿದೆ. ಗಡಿ ಭಾಗಗಳಲ್ಲಿ ಕನ್ನಡವನ್ನು ಬೆಳೆಸುವಲ್ಲಿ ಹಲವರು ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಗಡಿ ಭಾಗಗಳಾದ ಕೆಜಿಎಫ್, ಮುಳಬಾಗಿಲು, ಶ್ರೀನಿವಾಸಪುರದಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ನೋ ಹ್ಯುಮ್ಯಾನಿಟಿ: ‘ಫ್ರೀ ಕಾಶ್ಮೀರ’ ನಳಿನಿ ರಂಪಾಟ!
ಕಾರ್ಯಕ್ರಮದಲ್ಲಿ ಕೋಲಾರ ನಗರ ಸಭೆ ವತಿಯಿಂದ ಸಮ್ಮೇಳನಕ್ಕೆ 1 ಲಕ್ಷ ದೇಣಿಗೆಯನ್ನು ನೀಡಲಾಯಿತು. ಕೇಂದ್ರ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್. ಮುನಿಯಪ್ಪ, ಉತ್ತರ ವಿಶ್ವ ವಿದ್ಯಾನಿಲಯದ ಕನ್ನಡ ಸಂಯೋಜನಾಧಿಕಾರಿಯಾದ ವಿ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.