ಗಣಿ ಉದ್ಯಮಿ ಮನೆ, ಕಚೇರಿ ಮೇಲೆ ಐಟಿ ದಾಳಿ

Kannadaprabha News   | Asianet News
Published : Mar 05, 2020, 11:08 AM IST
ಗಣಿ ಉದ್ಯಮಿ ಮನೆ, ಕಚೇರಿ ಮೇಲೆ ಐಟಿ ದಾಳಿ

ಸಾರಾಂಶ

ನಗರ ಗಣಿ ಉದ್ಯಮಿಯೊಬ್ಬರ ಮನೆ ಮತ್ತು ಕಾರ್ಖಾನೆ ಮೇಲೆ ಏಕ ಕಾಲಕ್ಕೆ ಬುಧವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಾಮರಾಜನಗರದ ಉದ್ಯಮಿಯಾಗಿರುವ ವ್ಯಕ್ತಿ ಮನೆಯಲ್ಲಿ ಪರಿಶೀಲನೆ ಮಾಡಲಾಗಿದೆ.  

ಚಾಮರಾಜನಗರ(ಮಾ.05): ನಗರ ಗಣಿ ಉದ್ಯಮಿಯೊಬ್ಬರ ಮನೆ ಮತ್ತು ಕಾರ್ಖಾನೆ ಮೇಲೆ ಏಕ ಕಾಲಕ್ಕೆ ಬುಧವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಾಮರಾಜನಗರದ ಉದ್ಯಮಿಯಾಗಿರುವ ವ್ಯಕ್ತಿ ಮನೆಯಲ್ಲಿ ಪರಿಶೀಲನೆ ಮಾಡಲಾಗಿದೆ.

ನಗರದ ಪ್ರಭಾವಿ ಗಣಿ ಉದ್ಯಮಿ ಅನಂತ್‌ ಕುಮಾರ್‌ ಅವರಿಗೆ ಸೇರಿದ ಬಿಳಿಗಿರಿ ಗ್ರ್ಯಾನೈಟ್ಸ್‌ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು. ಬದನಗುಪ್ಪೆ ಕೈಗಾರಿಕಾ ವಲಯದಲ್ಲಿರುವ ಬಿಳಿಗಿರಿ ಗ್ರಾನೈಟ್‌ ಕಚೇರಿ ಮತ್ತು ಮೈಸೂರು ಕುವೆಂಪು ನಗರದಲ್ಲಿರುವ ಮನೆ ಮೇಲೆ ಏಕಕಾಲಕ್ಕೆ ಐಟಿ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.

ಚಾಮರಾಜನಗರ: ಮೂಕ ಮಹಿಳೆ ಮೇಲೆ ಅತ್ಯಾಚಾರ

ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕರಿಕಲ್ಲು ಗಣಿ ಕ್ವಾರಿ ಮತ್ತು ಕಾರ್ಖಾನೆಯನ್ನು ಹೊಂದಿದ್ದು, ವಿದೇಶಗಳಿಗೆ ಗ್ರಾನೈಟ್‌ ಎಕ್ಸ್‌ಪೋರ್ಟ್‌ ಮಾಡುತ್ತಾರೆ. ಬೆಂಗಳೂರು ರಿಜಿಸ್ಪ್ರೇಷನ್‌ ಹೊಂದಿದ ನಾಲ್ಕು ಇನ್ನೋವಾ ಕಾರುಗಳಲ್ಲಿ ಬಂದ ಐಟಿ ಅಧಿಕಾರಿಗಳ ತಂಡ. ಸ್ಥಳೀಯ ಪೊಲೀಸರ ನೆರವು ಪಡೆಯದ ಐಟಿ ಅಧಿಕಾರಿಗಳ ತಂಡ ರಕ್ಷಣೆಗೆ ಕೇಂದ್ರ ಮೀಸಲು ಪಡೆಯನ್ನು ಕರೆಸಿತ್ತು.

PREV
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್