ಮಂಗಳೂರು ಕಾಂಗ್ರೆಸ್‌ ಯುವ ಮುಖಂಡನ ಮನೆ ಮೇಲೆ‌ ಐಟಿ ದಾಳಿ!

Published : Apr 15, 2023, 08:03 PM IST
ಮಂಗಳೂರು ಕಾಂಗ್ರೆಸ್‌ ಯುವ ಮುಖಂಡನ ಮನೆ ಮೇಲೆ‌ ಐಟಿ ದಾಳಿ!

ಸಾರಾಂಶ

ಮಂಗಳೂರಿನ ಕಾಂಗ್ರೆಸ್‌ ಮುಖಂಡನ ಮನೆ ಮೇಲೆ‌ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಇಂದು ಮುಂಜಾನೆ ಕಾಂಗ್ರೆಸ್‌ ಮುಖಂಡ ವಿವೇಕ್ ಪೂಜಾರಿ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.

ಮಂಗಳೂರು (ಏ.15): ಮಂಗಳೂರಿನ ಕಾಂಗ್ರೆಸ್‌ ಮುಖಂಡನ ಮನೆ ಮೇಲೆ‌ ಐಟಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಇಂದು ಮುಂಜಾನೆ ಕಾಂಗ್ರೆಸ್‌ ಮುಖಂಡ ವಿವೇಕ್ ರಾಜ್ ಪೂಜಾರಿ (Vivek Raj Poojary ) ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.  ಮಂಗಳೂರಿನ ಮಣ್ಣಗುಡ್ಡದಲ್ಲಿರುವ ವಿವೇಕ್ ಪೂಜಾರಿ ಮನೆ ಇದೆ. 2 ಕಾರ್ ನಲ್ಲಿ  8 ಮಂದಿ ಐಟಿ‌ ಅಧಿಕಾರಿಗಳು ಬಂದಿದ್ದು, ಇವರು ಪನಾಮಾ ಸಂಸ್ಥೆಯ ಮಾಲೀಕರಾಗಿದ್ದಾರೆ. ಮಾತ್ರವಲ್ಲ ಹಲವಾರು ಉದ್ಯಮಗಳನ್ನು ಕೂಡ ವಿವೇಕ್ ಪೂಜಾರಿ ನಡೆಸುತ್ತಿದ್ದಾರೆ. ಇಂದು ಮುಂಜಾನೆಯಿಂದ ವಿವೇಕ್ ಮನೆಯಲ್ಲಿ ಐ ಟಿ‌ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ವಿದೇಶಿ ವಿನಿಮಯ ಉಲ್ಲಂಘನೆ : ಇಡಿಯಿಂದ ಮತ್ತೆ ಬಿಬಿಸಿ ಅಧಿಕಾರಿಗಳ ವಿಚಾರಣೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿರುವ ಇವರು, ಯುವ ಉದ್ಯಮಿ ಕೂಡ ಹೌದು. ಪನಾಮ ನಿಗಮದ ಸಿಇಒ ಮತ್ತು ಅಧ್ಯಕ್ಷರೂ ಆಗಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಚಿಕ್ಕಮಗಳೂರು ನಗರದ 165 ಬೂತ್‌ಗಳನ್ನು ನೋಡಿಕೊಳ್ಳಲಿದ್ದಾರೆ. ಕೆಪಿಸಿಸಿಯು ವಿವೇಕ್ ಅವರ ನಾಯಕತ್ವ ಗುಣಗಳನ್ನು ಮತ್ತು ಪಕ್ಷಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿದೆ ಮತ್ತು ಚುನಾವಣೆಗೆ  ಚಿಕ್ಕಮಗಳೂರು ಪಟ್ಟಣವನ್ನು ನೋಡಿಕೊಳ್ಳುವ ಅವಕಾಶವನ್ನು ನೀಡಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ